ಬೆಂಗಳೂರು: ಕೆಲವು ದಿನಗಳ ಹಿಂದೆ ಬಾಲಿವುಡ್ ನಟಿ ಕತ್ರಿನಾ ಕೈಫ್ (Katrina Kaif) ಗರ್ಭಿಣಿಯಾಗಿದ್ದಾರೆಂದು ವರದಿಯಾಗಿದೆ. ಪ್ರೊಫೈಲ್ ಫೋಟೊಗಳನ್ನು ಕೂಡ ಅರ್ಧಕ್ಕೆ ಇಟ್ಟುಕೊಳ್ಳುತ್ತಿದ್ದ ಕತ್ರಿನಾ ಕಂಡು ನೆಟ್ಟಿಗರು ನಟಿ ಪ್ರೆಗ್ನೆಂಟ್ ಇರಬೇಕು ಎಂದು ಕಾಮೆಂಟ್ ಮಾಡುತ್ತಿದ್ದರು. ಹೊಸ ವರದಿಯ ಪ್ರಕಾರ, ಫರ್ಹಾನ್ ಅಖ್ತರ್ ಅವರ ʻಜೀ ಲೆ ಜರಾʼ ಚಿತ್ರೀಕರಣದ ನಂತರವೇ ಕತ್ರಿನಾ ತನ್ನ ಮೊದಲ ಮಗುವನ್ನು ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.
ʻಜೀ ಲೆ ಜರಾ’ ಚಿತ್ರದ ಶೂಟಿಂಗ್ ಮುಗಿದ ನಂತರ ನಾನು ಮತ್ತು ವಿಕ್ಕಿ ಮೊದಲ ಮಗುವನ್ನು ಹೊಂದಲಿದ್ದೇವೆʼ ಎಂದು ಕತ್ರಿನಾ ತನ್ನ ಸ್ನೇಹಿತರಿಗೆ ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ. “ನಾನು ವಿಜಯ್ ಸೇತುಪತಿ ಮತ್ತು ಫರ್ಹಾನ್ ಅಖ್ತರ್ ಅವರೊಂದಿಗೆ ಮಾಡುತ್ತಿರುವ ಚಿತ್ರಗಳ ಶೂಟಿಂಗ್ ಮುಗಿಸಿದ ನಂತರವೇ ಮಗುವನ್ನು ಯೋಜಿಸುತ್ತೇನೆ” ಎಂದು ಕತ್ರಿನಾ ತಮ್ಮ ಸ್ನೇಹಿತರಿಗೆ ಹೇಳಿದ್ದಾರೆ.
ಇದನ್ನೂ ಓದಿ: Katrina Kaif: ನನ್ನ 7 ಕೋಟಿ ಇನ್‌ಸ್ಟಾ ಫ್ಯಾಮಿಲಿ ಎಂದು ಫೋಟೊ ಜತೆಗೆ ಖುಷಿ ಹಂಚಿಕೊಂಡ ನಟಿ ಕತ್ರಿನಾ ಕೈಫ್
ಕತ್ರಿನಾ ಕೂಡ ವಿಜಯ್ ಸೇತುಪತಿ ಜತೆ `ಮೆರ್ರಿ ಕ್ರಿಸ್‌ಮಸ್’ ಎಂಬ ಸಿನಿಮಾ ಮಾಡುತ್ತಿದ್ದಾರೆ. ಚಿತ್ರವನ್ನು ಶ್ರೀರಾಮ್ ರಾಘವನ್ ನಿರ್ದೇಶಿಸಿದ್ದಾರೆ. 2021ರಲ್ಲಿ ನಟ ವಿಕ್ಕಿ ಕೌಶಲ್ ಅವರನ್ನು ಮದುವೆಯಾದ ಕೆಲವೇ ದಿನಗಳಲ್ಲಿ ಕತ್ರಿನಾ ಕೈಫ್ ಈ ಚಿತ್ರವನ್ನು ಘೋಷಿಸಿದ್ದರು.
ಕತ್ರಿನಾ ಕೈಫ್ ಇತ್ತೀಚೆಗೆ ಸಲ್ಮಾನ್ ಖಾನ್ ಅವರ ಸಹೋದರಿ ಅರ್ಪಿತಾ ಖಾನ್ ಶರ್ಮಾ ಅವರ ಈದ್ ಪಾರ್ಟಿಗೆ ಆಗಮಿಸಿದ್ದರು. ಆಗ ನಟಿ ಪ್ರೆಗ್ನೆಂಟ್ ಎಂಬ ಸುದ್ದಿ ವೈರಲ್ ಆಗಿತ್ತು. ಕತ್ರಿನಾ ಕೊನೆಯ ಬಾರಿಗೆ 2022ರಲ್ಲಿ ಬಿಡುಗಡೆಯಾದ ʻಫೋನ್ ಭೂತ್; ಚಿತ್ರದಲ್ಲಿ ಕಾಣಿಸಿಕೊಂಡರು. ನಟಿ ಶ್ರೀರಾಮ್ ರಾಘವನ್ ಅವರ ಮೆರ್ರಿ ಕ್ರಿಸ್‌ಮಸ್ ಚಿತ್ರದಲ್ಲಿ ವಿಜಯ್ ಸೇತುಪತಿ ಸಹ-ನಟಿಸಿದ್ದಾರೆ.