ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ಆಕೆಯ ಪತಿ, ನಟ ವಿಕ್ಕಿ ಕೌಶಲ್ (Katrina – Vicky) ಇತ್ತೀಚೆಗೆ ಮುಂಬೈನ ಸಿದ್ಧಿವಿನಾಯಕ ದೇಗುಲಕ್ಕೆ (siddhivinayak temple) ಭೇಟಿ ಕೊಟ್ಟಿದ್ದರು. ಅದರ ಕೆಲವು ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಇದನ್ನೂ ಓದಿ: Rajinikanth | ಜೈಲರ್ ಸಿನಿಮಾದಲ್ಲಿ ರಜನಿಕಾಂತ್ ಜತೆ ತೆರೆ ಹಂಚಿಕೊಳ್ಳಲಿದ್ದಾರೆ ಮೋಹನ್‌ಲಾಲ್!
ಕತ್ರಿನಾ ಹಸಿರು ಬಣ್ಣದ ಚೂಡಿದಾರ ತೊಟ್ಟಿದ್ದರೆ ವಿಕ್ಕಿ ಬಿಳಿ ಬಣ್ಣದ ಶರ್ಟ್ ತೊಟ್ಟಿರುವುದನ್ನು ಕಾಣಬಹುದು. ಅವರ ಜತೆ ವಿಕ್ಕಿ ಅವರ ತಾಯಿ ವೀಣಾ ಕೌಶಲ್ ಕೂಡ ವಿನಾಯಕನ ದರ್ಶನ ಪಡೆದಿದ್ದಾರೆ. ವಿನಾಯಕನ ಎದುರು ಕೈಮುಗಿದು ನಿಂತ ದಂಪತಿಯ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಹಿಂದೂ ಧರ್ಮದವರಾದರೂ ಸನಾತನ ಧರ್ಮವನ್ನು ಲೆಕ್ಕಿಸದ ಹಲವು ಬಾಲಿವುಡ್ ತಾರೆಗಳಿದ್ದಾರೆ. ಆದರೆ ಬೇರೆ ಧರ್ಮದವರಾದರೂ ಸನಾತನ ಧರ್ಮವನ್ನು ಅನುಸರಿಸುತ್ತಿರುವ ನೀವು ನಿಜಕ್ಕೂ ಗ್ರೇಟ್” ಎಂದು ಅಭಿಮಾನಿಗಳು ಕತ್ರಿನಾರನ್ನು ಹಾಡಿ ಹೊಗಳಲಾರಂಭಿಸಿದ್ದಾರೆ.
ಕತ್ರಿನಾ ಹಾಗೂ ವಿಕ್ಕಿ ಹೊಸ ವರ್ಷವನ್ನು ರಾಜಸ್ಥಾನದ ಜವಾಯ್ ಚಿರತೆ ಅಭಯಾರಣ್ಯದಲ್ಲಿ ಆಚರಿಸಿದ್ದರು. ಅದಕ್ಕೂ ಮೊದಲು ಜೋಧ್ಪುರ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದ ದಂಪತಿ ಅಲ್ಲಿಂದ ನೇರವಾಗಿ ಜವಾಯ್ ಕಡೆ ಪ್ರಯಾಣ ಬೆಳೆಸಿದ್ದರು.