ಕೌನ್ ಬನೇಗಾ ಕರೋಡ್‌ಪತಿ (Kaun Banega Crorepati) 16ನೇ ಸರಣಿಯಲ್ಲಿ ತಮಾಷೆಯ ಘಟನೆಯೊಂದು ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ (Viral Video) ಆಗಿದೆ. ಅಮಿತಾಭ್ ಬಚ್ಚನ್ (Amitabh Bachchan) ಅವರು ಸ್ಟುಡಿಯೋದಿಂದ ವ್ಯಕ್ತಿಯೊಬ್ಬರಿಗೆ ಕರೆ ಮಾಡಿದಾಗ ಈ ಘಟನೆ ನಡೆದಿದ್ದು, ಎಲ್ಲರೂ ನಗೆಗಡಲಲ್ಲಿ ತೇಲುವಂತೆ ಮಾಡಿದೆ.
ಕೌನ್ ಬನೇಗಾ ಕರೋಡ್ ಪತಿಯ ಸ್ಟುಡಿಯೋದಲ್ಲಿ ಅಮಿತಾಭ್ ಬಚ್ಚನ್ ಅವರು ವ್ಯಕ್ತಿಯೊಬ್ಬರಿಗೆ ಕರೆ ಮಾಡಿ ತಮ್ಮನ್ನು ಕೆಬಿಸಿ ಸ್ಟುಡಿಯೋದಿಂದ ತಾವು ಅಮಿತಾಭ್ ಬಚ್ಚನ್ ಎಂದು ಪರಿಚಯಿಸಿಕೊಂಡಿದ್ದಾರೆ. ಆಗ ಎದುರಿದ್ದ ವ್ಯಕ್ತಿ ನಾನು ಶಾರುಖ್ ಖಾನ್ ಎಂದು ಹೇಳಿದ್ದಾನೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಸಾಕಷ್ಟು ಮಂದಿ ಇದಕ್ಕೆ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.
ವಾಸ್ತವವಾಗಿ ಇದು ವಂಚನೆಯ ಕರೆ ಎಂದು ಭಾವಿಸಿ ಎದುರಿಗಿದ್ದ ವ್ಯಕ್ತಿ ಅಮಿತಾಭ್ ಬಚ್ಚನ್‌ಗೆ ಈ ರೀತಿಯ ಉತ್ತರವನ್ನು ನೀಡಿದ್ದಾನೆ ಎನ್ನಲಾಗಿದೆ. ಅಮಿತಾಭ್ ಬಚ್ಚನ್ ಅವರ ಧ್ವನಿ ಮತ್ತು ಕೌನ್ ಬನೇಗಾ ಕರೋಡ್ ಪತಿ ಬಗ್ಗೆ ವಂಚನೆ ಕರೆಗಳು ಮತ್ತು ಮೀಮ್‌ಗಳು ಯಾವಾಗಲೂ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುತ್ತವೆ. ಈ ನಡುವೆ ಇದೀಗ ಈ ವಿಡಿಯೋ ಸದ್ಯ ಚರ್ಚೆಯಲ್ಲಿದೆ. ಅಮಿತಾಭ್ ಜೊತೆಗಿನ ಈ ಹಾಸ್ಯ ನೋಡಿ ಎಲ್ಲರೂ ನಗುವಂತಾಗಿದೆ. ಸ್ಟುಡಿಯೋದಲ್ಲಿ ಕುಳಿತಿದ್ದವರೂ ಕೂಡ ಇದನ್ನು ಕೇಳಿ ನಕ್ಕರು. ಈ ಲಘುವಾದ ಸಂವಾದವು ಅಂತರ್ಜಾಲದಲ್ಲಿ ಎಲ್ಲರ ಗಮನವನ್ನು ಸೆಳೆದಿದೆ.
ಕೆಹ್ ಕೆ ಪೆಹೆನೊ ಹ್ಯಾಂಡಲ್‌ನಿಂದ ಟ್ವಿಟರ್‌ನಲ್ಲಿ ಮೊದಲು ಹಂಚಿಕೊಂಡ ಈ ವಿಡಿಯೋ ಅಂದಿನಿಂದ ಮತ್ತೆ ಬಹಳಷ್ಟು ತಮಾಷೆಯ ಕಾಮೆಂಟ್‌ಗಳನ್ನು ಸ್ವೀಕರಿಸಿದೆ.
This is what too much spam calls can do to you 😂 pic.twitter.com/qEPT4tuSGR
— Keh Ke Peheno (@coolfunnytshirt) August 25, 2024
ಒಬ್ಬ ವೀಕ್ಷಕ “ಗಜಬ್ ಬೇಜ್ಜತಿ ಹೈ ಯಾರ್” ಎಂದು ಬರೆದರೆ ಇನ್ನೊಬ್ಬರು, ಏನು ಸಹೋದರ ನಾನಾಗಿದ್ದರೆ ಡೊನಾಲ್ಡ್ ಟ್ರಂಪ್, ಅಮೆರಿಕದಿಂದ ಎಂದು ಹೇಳುತ್ತಿದ್ದೆ. ಇನ್ನೊಬ್ಬ ಧನ್ಯವಾದಗಳು ಏನೂ ಬೈಯಲಿಲ್ಲವಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: Actor Darshan: ನಟಿ ರಚಿತಾ ರಾಮ್ ಜೈಲಿಗೆ ಎಂಟ್ರಿ ಕೊಟ್ಟ ದಿನವೇ ನಡೀತಾ ದರ್ಶನ್ ಸಿಗರೇಟ್ ಪಾರ್ಟಿ?
ಕೌನ್ ಬನೇಗಾ ಕರೋಡ್ ಪತಿಯ ಈ ಕ್ಲಿಪ್ ಇಂಟರ್ನೆಟ್‌ನ ಸಾಕಷ್ಟು ಮಂದಿಯ ಹೃದಯ ಗೆದ್ದಿದೆ. ಪ್ರೇಕ್ಷಕರ ಪ್ರತಿಕ್ರಿಯೆಗಳ ಪರಿಣಾಮವಾಗಿ ಈ ವಿಡಿಯೊ ಈಗ ವೈರಲ್ ಆಗಿದ್ದು, ಸಾಕಷ್ಟು ಮಂದಿ ಇದನ್ನು ಇಷ್ಟಪಟ್ಟಿದ್ದಾರೆ. ಅನಿರೀಕ್ಷಿತ ಮತ್ತು ಹಾಸ್ಯಮಯ ಸಂದರ್ಭಗಳಲ್ಲಿ ಅಮಿತಾಭ್ ಬಚ್ಚನ್ ಅವರಂತಹ ದೊಡ್ಡ ಸೆಲೆಬ್ರಿಟಿಗಳು ಭಾಗಿಯಾಗಿರುವುದರಿಂದ ಸಾಕಷ್ಟು ಮಂದಿಯ ಗಮನ ಸೆಳೆದಿದೆ.