ಬೆಂಗಳೂರು: ಶಶಾಂಕ್ (Shashank) ನಿರ್ದೇಶಿಸಿ, ಡಾರ್ಲಿಂಗ್ ಕೃಷ್ಣ (Darling Krishna) ನಟಿಸಿರುವ ‘ಕೌಸಲ್ಯ ಸುಪ್ರಜಾ ರಾಮ’ ( Kausalya Supraja Rama Movie) ಸಿನಿಮಾ ಜುಲೈ 28ರಂದು ಅದ್ಧೂರಿಯಾಗಿ ಬಿಡುಗಡೆಗೊಂಡಿದೆ. ಈ ಸಿನಿಮಾ ಬಗ್ಗೆ ಮೆಚ್ಚುಗೆಗಳ ಮಹಾಪೂರವೇ ಹರಿದು ಬರುತ್ತಿದೆ. ನಿಜವಾದ ಗಂಡಸು ಎಂದರೆ ಯಾರು ಎಂಬ ವ್ಯಾಖ್ಯಾನವೂ ಈ ಸಿನಿಮಾದಲ್ಲಿದೆ. ʻʻಈಗಿನ ಕಾಲದಲ್ಲಿ ಮದುವೆಗೆ ಹುಡುಗನಿಗೆ ಹುಡುಗಿ ತೋರಿಸುವ ಮೊದಲು, “ಕೌಸಲ್ಯ ಸುಪ್ರಜಾ ರಾಮ ” ಚಿತ್ರ ತೋರಿಸಬೇಕುʼʼಎಂಬ ಶೀರ್ಷಿಕೆಯೊಂದಿಗೆ ಟ್ವೀಟರ್‌ನಲ್ಲಿ ಸಿನಿಮಾ ಬಗ್ಗೆ ವೈರಲ್ ಆಗುತ್ತಿದೆ.
ಈ ಸಿನಿಮಾವನ್ನು ಬಿ.ಸಿ. ಪಾಟೀಲ್ ಹಾಗೂ ಶಶಾಂಕ್ ಇಬ್ಬರೂ ಸೇರಿ ನಿರ್ಮಾಣ ಮಾಡಿದ್ದಾರೆ. ಕೃಷಿ ಸಚಿವ ಬಿ.ಸಿ. ಪಾಟೀಲ್ ಕೌರವ ಪ್ರೊಡಕ್ಷನ್ ಹಾಗೂ ಶಶಾಂಕ್ ಸಿನಿಮಾಸ್ ಜಂಟಿಯಾಗಿ ನಿರ್ಮಾಣ ಮಾಡಿದೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದು, ʻಲವ್ 360ʼ ಸಿನಿಮಾ ಮೂಲಕ ಸಿನಿಮಾ ಮಾಡಿ ಗೆದ್ದಿರುವ ಶಶಾಂಕ್ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ.
ಈ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಅವರು ಸಿನಿಮಾ ಹೊಗಳಿದ್ದಾರೆ. ʻʻಶಶಾಂಕ್ ಅವರು ಸಖತ್ ಆಗಿ ಸಿನಿಮಾ ಮಾಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ದೊಡ್ಡ ತಿರುವು ಇದು. ಕೃಷ್ಣಾ ಅವರು ಕೂಡ ಚೆನ್ನಾಗಿ ಪಾತ್ರ ನಿಭಾಯಿಸಿದ್ದಾರೆʼʼಎಂದರು. ಯೋಗರಾಜ್ ಭಟ್ ಸಿನಿಮಾ ಬಗ್ಗೆ ಮಾತನಾಡಿ ʻʻಗಂಡು ಮಕ್ಕಳೇ ಸ್ಟ್ರಾಂಗು ಗುರು ಎನ್ನುವಷ್ಟರ ಮಟ್ಟಿಗೆ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ಕೃಷ್ಣ ದಂಪತಿ ಚೆನ್ನಾಗಿ ನಟಿಸಿದ್ದಾರೆ. ನೋಡಿ ಆನಂದಿಸಿ, ಹರಸಿʼʼಎಂದರು.
ಬೃಂದಾ ಆಚಾರ್ಯ ಅವರ ಅಭಿನಯ, ಅದೇ ರೀತಿ ನಾಗಭೂಷಣ ಸ್ಕ್ರೀನ್ ಸ್ಪೇಸ್ ಪಡೆದುಕೊಂಡಿದ್ದಾರೆ ಎಂದು ಸಿನಿಪ್ರೇಮಿಗಳು ಸಿನಿಮಾ ಬಗ್ಗೆ ಮೆಚ್ಚುಗೆಯನ್ನು ಹೊರಹಾಕಿದ್ದಾರೆ.
ಇದನ್ನೂ ಓದಿ: Lucky Man Movie | ಆಗಸ್ಟ್‌ನಲ್ಲಿ ತೆರೆಗೆ ಅಪ್ಪಳಿಸಲಿದೆ ಲಕ್ಕಿ ಮ್ಯಾನ್: ಅಪ್ಪು ಬಾಸ್ ನೋಡಲು ಫ್ಯಾನ್ಸ್ ಕಾತುರ
ಈಗಿನ ಕಾಲದಲ್ಲಿ ಮದುವೆಗೆ ಹುಡುಗನಿಗೆ ಹುಡುಗಿ ತೋರಿಸುವ ಮೊದಲು,
— ಸುನಿ/SuNi (@SimpleSuni) July 28, 2023
"ಕೌಸಲ್ಯ ಸುಪ್ರಜಾ ರಾಮ " ಚಿತ್ರ ತೋರಿಸಬೇಕು
Perfect movie for this generation
ಪ್ರೀತಿಸಿದವರು ಕೂಡ ಮದುವೆಗೆ ಮುಂಚೆ ನೋಡಬೇಕಾದ ಚಿತ್ರ#divorce ಗಳನ್ನು ಕಮ್ಮಿ ಮಾಡಬಹುದಾದ ಗುಣ ಈ ಚಿತ್ರಕ್ಕಿದೆ.
Perfect familly entertainer#ನಟನೆ #ಭಾವನೆ #ಸಂಗೀತಪಾಲನೆ…
ರಂಗಾಯಣ ರಘು, ಸುಧಾ ಬೆಳವಾಡಿ ಮತ್ತು ನಾಗಭೂಷಣ್ ಅವರ ಪಾತ್ರಗಳು ಸಿನಿಮಾದ ನಾಯಕ ಮತ್ತು ನಾಯಕಿಯ ಜತೆಜತೆಗೆ ಸಾಗುತ್ತಾ ಚಿತ್ರಕ್ಕೊಂದು ಬಲ ತುಂಬುತ್ತವೆ ಎಂದು ನಿರ್ದೇಶಕ ಶಶಾಂಕ್ ತಿಳಿಸಿದ್ದಾರೆ. ಕನ್ನಡ ಚಿತ್ರರಂಗದ ಬಿಝಿ ನಟರಲ್ಲಿ ಒಬ್ಬರಾದ ರಂಗಾಯಣ ರಘು , ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರದಲ್ಲಿ ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರನ್ನು ಹೊರತುಪಡಿಸಿದರೆ ಬಿ ಎಂ ಗಿರಿರಾಜ್, ಅಚ್ಯುತ್ ಕುಮಾರ್, ಯಮುನಾ ಶ್ರೀನಿಧಿ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ.