Site icon Vistara News

Kavita Chaudhary: ಸರ್ಫ್ ಡಿಟರ್ಜೆಂಟ್ ಜಾಹೀರಾತಿನ ʻಲಲಿತಾ ಜಿʼ ಖ್ಯಾತಿಯ ಕವಿತಾ ಚೌಧರಿ ಇನ್ನಿಲ್ಲ!

Kavita Chaudhary Lalitaj And Serial Udaan Dies

ಬೆಂಗಳೂರು: ಜನಪ್ರಿಯ ಧಾರಾವಾಹಿ ʻಉಡಾನ್‌ʼನ ನಟಿ ಕವಿತಾ ಚೌಧರಿ (Kavita Chaudhary) ಗುರುವಾರ (ಫೆ.15)ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ನಟಿಗೆ 67 ವರ್ಷ ವಯಸ್ಸಾಗಿತ್ತು. 1980ರ ದಶಕದ ಸಂದರ್ಭದಲ್ಲಿ ʻಸರ್ಫ್ ಡಿಟರ್ಜೆಂಟ್ʼ ಜಾಹೀರಾತುಗಳಲ್ಲಿ ಕವಿತಾ ಚೌಧರಿ ಅವರು ನಟಿಸಿ ಜನಪ್ರಿಯತೆ ಗಳಿಸಿದ್ದರು. ಲಲಿತಾ ಜಿ ಎಂದೇ ಜನಪ್ರಿಯರಾಗಿದ್ದರು. ಅನಾರೋಗ್ಯದಿಂದಾಗಿ ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು.

“ಫೆ. 14ರ ರಾತ್ರಿ 8.30ರ ಸುಮಾರಿಗೆ ಆಸ್ಪತ್ರೆಯಲ್ಲಿ ಹೃದಯಾಘಾತ ಸಂಭವಿಸಿದ ಬಳಿಕ ನಿಧನರಾದರು. ಕಡಿಮೆ ರಕ್ತದೊತ್ತಡದ ಕಾರಣ ಅವರನ್ನು ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರ ಸ್ಥಿತಿ ಗಂಭೀರವಾಯಿತು” ಎಂದು ಚೌಧರಿ ಅವರ ಸೋದರಳಿಯ ಅಜಯ್ ಸಯಾಲ್ ಮಾಧ್ಯಮಕ್ಕೆ ಮಾಹಿತಿ ಹಂಚಿಕೊಂಡಿದ್ದಾರೆ. ಗುರುವಾರ (ಫೆ.15) ಬೆಳಗ್ಗೆ ಅಂತ್ಯಕ್ರಿಯೆ ನಡೆಸಲಾಗಿದೆ.

1989 ಮತ್ತು 1991ರ ನಡುವೆ ದೂರದರ್ಶನದಲ್ಲಿ ಪ್ರಸಾರವಾದ ಮಹಿಳಾ ಸಬಲೀಕರಣದ ಪ್ರಗತಿಪರ ಕಾರ್ಯಕ್ರಮವಾದ ʻಉಡಾನ್‌ʼನಲ್ಲಿ ಐಪಿಎಸ್ ಅಧಿಕಾರಿ ಕಲ್ಯಾಣಿ ಸಿಂಗ್ ಪಾತ್ರಕ್ಕಾಗಿ ಕವಿತಾ ಚೌಧರಿ ಹೆಚ್ಚು ಹೆಸರುವಾಸಿಯಾಗಿದ್ದರು.

ಇದನ್ನೂ ಓದಿ; Love Case : ಪ್ರೇಯಸಿಗೆ ಸರ್ಪೈಸ್‌ ಕೊಡಲು ಬಂದ; Misunderstanding ನಿಂದ ಧರ್ಮದೇಟು ತಿಂದ ಪ್ರೇಮಿ

ನಟಿಸುವುದರ ಜತೆಗೆ, ಅವರು ತಮ್ಮ ಅಕ್ಕ ಮತ್ತು ಪೊಲೀಸ್ ಅಧಿಕಾರಿ ಕಾಂಚನ್ ಚೌಧರಿ ಭಟ್ಟಾಚಾರ್ಯರ ಜೀವನದಿಂದ ಸ್ಫೂರ್ತಿ ಪಡೆದ ಧಾರಾವಾಹಿಯನ್ನು ಬರೆದು ನಿರ್ದೇಶಿಸಿದರು.
ಶೇಖರ್ ಕಪೂರ್ ಸಹ ನಟಿಸಿದ ʻಉಡಾನ್ʼ, ಐಪಿಎಸ್ ಅಧಿಕಾರಿಯಾಗಲು ಬಯಸುವ ಮಹಿಳೆಯ ಹೋರಾಟದ ಸುತ್ತ ಕಥೆ ಹೊಂದಿತ್ತು. ಇದೀಗ ಕವಿತಾ ಚೌಧರಿ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಕವಿತಾ ಚೌಧರಿ ದೂರದರ್ಶನದಲ್ಲಿ ʻಯುವರ್ ಆನರ್ʼ ಮತ್ತು ʻಐಪಿಎಸ್ ಡೈರೀಸ್ʼ ಕಾರ್ಯಕ್ರಮಗಳನ್ನು ನಿರ್ಮಿಸಿದ್ದರು.

Exit mobile version