Site icon Vistara News

Kavitha Gowda: ಚಂದನ್-ಕವಿತಾ ಮನೆಯಲ್ಲಿ ಮದುವೆಯ ಸಂಭ್ರಮ

Kavitha Gowda sister Marriage

ಬೆಂಗಳೂರು: ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದನ್ ಕುಮಾರ್ ಮತ್ತು ಕವಿತಾ (Actor Chandan ) ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಇದೀಗ ಕವಿತಾ ಗೌಡ (Kavitha Gowda) ಅವರು ತಮ್ಮ ಮುದ್ದಿನ ತಂಗಿ ಮೋನಿಷಾ (Monisha Gowda) ಅವರ ಮದುವೆ ಮಾಡಿ ಮುಗಿಸಿದ್ದಾರೆ. ಮದುವೆ ಸಂಭ್ರಮದ ಫೋಟೊಗಳನ್ನು ಚಂದನ್‌ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ ಜೋಡಿ ಸಾಕಷ್ಟು ಮನೆಮಾತಾಗಿತ್ತು. ಸೀರಿಯಲ್, ಸಿನಿಮಾ, ನಟನೆಯಲ್ಲಿ ಬ್ಯುಸಿಯಿರುವ ಜೋಡಿ ಇದೀಗ ಸಂಭ್ರಮದ ವಿಚಾರವನ್ನು ಹಂಚಿಕೊಂಡಿದೆ. ಕವಿತಾ ಗೌಡ ಹಿರಿತೆರೆಯಲ್ಲಿ ಶ್ರೀನಿವಾಸ ಕಲ್ಯಾಣ, ಫಸ್ಟ್ ಲವ್, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಗೋವಿಂದಾ ಗೋವಿಂದ, ಹುಟ್ಟುಹಬ್ಬದ ಶುಭಾಶಯಗಳು ಸೇರಿದಂತೆ ಚಿತ್ರಗಳಲ್ಲಿ ನಟಿಸಿದ್ದಾರೆ. ಪತಿ ಚಂದನ್ ಗೌಡ ಜೊತೆ ಹೋಟೆಲ್ ಉದ್ಯಮದಲ್ಲೂ ಸಕ್ರಿಯರಾಗಿದ್ದಾರೆ. ಮುದ್ದಿನ ತಂಗಿ ಮೋನಿಷಾ ಗೌಡ ಅವರ ಮದುವೆಯನ್ನ ಶೋಭಿತ್‌ ಎಂಬುವವರ ಜತೆ ಸರಳವಾಗಿ ಬೆಂಗಳೂರಿನಲ್ಲಿ ಮಾಡಿ ಮುಗಿಸಿದ್ದಾರೆ.

ಚಂದನ್ ಕುಮಾರ್ ಪೋಸ್ಟ್‌

ಇದನ್ನೂ ಓದಿ: Kannada Movie Actresses: ಕಿರುತೆರೆಯಿಂದ ಬಂದ ಕನ್ನಡ ಸಿನಿಮಾ ನಟಿಯರು

ಕವಿತಾ ಗೌಡ ಹಾಗೂ ಚಂದನ್‌ ಒಬ್ಬರನ್ನೊಬ್ಬರು ಪ್ರೀತಿಸಿ, ಹಸೆಮಣೆ ಏರಿದ್ದ ಜೋಡಿ ನಟನೆ ಮತ್ತು ಉದ್ಯಮ ಎರಡಲ್ಲೂ ಒಬ್ಬರಿಗೊಬ್ಬರು ಸಾಥ್ ನೀಡುತ್ತಾ ಸಾಗುತ್ತಿದ್ದಾರೆ. ಈ ಹಿಂದೆ ಅಷ್ಟೇ ಜೋಡಿ ಮನೆಯ ಗೃಹ ಪ್ರವೇಶದ ಫೋಟೊಗಳನ್ನು ಸೋಷಿಯಲ್‌ ಮೀಡಿಯಾ ಮೂಲಕ ಹಂಚಿಕೊಂಡಿತ್ತು. ಕವಿತಾ ಗೌಡ ಕೆಲ ವರ್ಷಗಳ ಕಾಲ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ನಟಿಸಿ, ನಂತರ ‘ವಿದ್ಯಾ ವಿನಾಯಕ’ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರು.ಅತ್ತ ನಟಿ ಕವಿತಾ ಗೌಡ ಅವರು ಕೂಡ ತಮಿಳಿನ ‘ಅನ್ಬೇ ಶಿವಂ’ ಧಾರಾವಾಹಿಯಲ್ಲಿ ನಟಿಸುವುದರ ಜೊತೆಗೆ ಒಂದಷ್ಟು ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದಾರೆ

Exit mobile version