Site icon Vistara News

Kavya Gowda: ಗೃಹ ಪ್ರವೇಶದ ಸಂಭ್ರಮದಲ್ಲಿ ʻಮೀರಾ ಮಾಧವʼ ಧಾರಾವಾಹಿ ಖ್ಯಾತಿಯ ಕಾವ್ಯ ಗೌಡ

Actress kavya gowda house warming ceremony

ರಾಧಾ ರಮಣ (Radha Ramana), ಮೀರಾ ಮಾಧವ, ಶುಭವಿವಾಹ ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದ ನಟಿ ಕಾವ್ಯ ಗೌಡ ಗೃಹ ಪ್ರವೇಶದ ಸಂಭ್ರಮದಲ್ಲಿದ್ದಾರೆ.

ಕಾವ್ಯ ಗೌಡ, ಸೋಮಶೇಖರ್ ದಂಪತಿ ಅವರ ನೂತನ ಮನೆಯ ಪ್ರವೇಶ ಸಮಾರಂಭ ಅದ್ಧೂರಿಯಾಗಿ ನಡೆದಿದೆ. ಗೃಹ ಪ್ರವೇಶಕ್ಕೆ ಗಣ್ಯರು ಆಗಮಿಸಿದ್ದು, ಕುಟುಂಬಸ್ಥರಿಗೆ ಶುಭಾಶಯ ತಿಳಿಸಿದ್ದಾರೆ.

ಮದುವೆಯ ನಂತರ ನಟನೆಯಿಂದ ಬ್ರೇಕ್ ತೆಗೆದುಕೊಂಡು ಜ್ಯುವೆಲ್ಲರಿ ಡಿಸೈನರ್ ಆಗಿ ಕಾವ್ಯ ಗುರುತಿಸಿಕೊಂಡಿದ್ದಾರೆ. ಮದುವೆಯಾಗಿ ಒಂದು ವರ್ಷವಾಗುವ ಮುಂಚೆಯೇ ಇದೀಗ ಹೊಸ ಮನೆಗೆ ಕಾಲಿಟ್ಟಿದೆ ಜೋಡಿ.

\

ಕಾವ್ಯ ಗೌಡ ಅವರು ಕೆಂಪು ಸೀರೆ ಜತೆಗೆ ಆಭರಣ ಧರಿಸಿದ್ದರು, ಸೋಮಶೇಖರ್ ಅವರು ಬಿಳಿ ಬಣ್ಣದ ಫೈಜಾಮ ಧರಿಸಿದ್ದರು.

ಕಾವ್ಯ ಗೌಡ ಅವರು ಸೀರೆಯಲ್ಲಿ ಕಂಗೊಳಿಸುತ್ತಿರುವುದನ್ನು ಕಂಡು ಅವರ ಅಭಿಮಾನಿಗಳು ಕಾಮೆಂಟ್‌ನಲ್ಲಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಕಿರುತೆರೆ ಅಲ್ಲದೇ ನಟಿ ʻಬಕಾಸುರʼ ಸಿನಿಮಾದಲ್ಲಿಯೂ ಬಣ್ಣ ಹಚ್ಚಿದ್ದರು. ಕಾವ್ಯ ದಂಪತಿ ಅವರ ಮನೆ ನೋಡುಗರ ಗಮನ ಸೆಳೆಯುತ್ತಿದೆ

Exit mobile version