ಬೆಂಗಳೂರು: ಚಿತ್ರರಂಗದ ಗಣ್ಯರ ಕ್ರಿಕೆಟ್ ಪಂದ್ಯಾಟ ಸರಣಿ ಕೆಸಿಸಿ ಕಪ್ ಸೀಸನ್ 4ರ (KCC 4- Kannada Chalanachitra Cup) ಪಂದ್ಯಾವಳಿಗಳು ಡಿಸೆಂಬರ್ 23,24, 25 ರಂದು ನಡೆದಿತ್ತು. ಫೈನಲ್ ಪಂದ್ಯದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ (Golde Star Ganesh) ನಾಯಕತ್ವದ ‘ಗಂಗ ವಾರಿಯರ್ಸ್’ ತಂಡ ಶಿವರಾಜ್ಕುಮಾರ್ ನಾಯಕತ್ವದ ‘ರಾಷ್ಟ್ರಕೂಟ ಪ್ಯಾಂತರ್ಸ್’ ತಂಡವನ್ನು ನಾಲ್ಕು ರನ್ಗಳಿಂದ ಸೋಲಿಸಿದೆ. ಈ ಮೂಲಕ ಗಣೇಶ್ ತಂಡ ನಾಲ್ಕನೇ ಸೀಸನ್ನ ಚಾಂಪಿಯನ್ ಆಗಿ ಹೊರಹೊಮ್ಮಿದೆ
ಮೂರು ದಿನಗಳ ಕಾಲ ನಡೆದಿದ್ದ ಈ ಟೂರ್ನಿಗೆ 23ರ ಸಂಜೆ ಅದ್ಧೂರಿ ಚಾಲನೆ ಸಿಕ್ಕಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಲ್ಲ ಪಂದ್ಯಗಳು ನಡೆದವು. ಕಿಚ್ಚ ಸುದೀಪ್, ಶಿವಣ್ಣ. ಡಾಲಿ ಧನಂಜಯ್, ದುನಿಯಾ ವಿಜಯ್, ಉಪೇಂದ್ರ ಸೇರಿದಂತೆ ಹಲವು ಸ್ಟಾರ್ ನಟ, ನಟಿಯರು ಪಾಲ್ಗೊಂಡಿದ್ದರು. ಪಂದ್ಯವಾವಳಿಗೆ ಸಪರೇಟ್ ಟಿಕೆಟ್ಸ್ ವ್ಯವಸ್ಥೆ ಕೂಡ ಮಾಡಲಾಗಿತ್ತು ಮೊದಲ ಬಾರಿಗೆ ಹಲವು ಕಿರುತೆರೆ ಕಲಾವಿದರು ಕೂಡ ಕೆಸಿಸಿಯಲ್ಲಿ ಭಾಗಿಯಾಗಿದ್ದರು.
ಗಣೇಶ್ ತಂಡ ಲೀಗ್ ಮ್ಯಾಚ್ನಲ್ಲಿ ಐದು ಪಂದ್ಯಗಳ ಪೈಕಿ ನಾಲ್ಕು ಮ್ಯಾಚ್ನ ಗೆದ್ದಿತ್ತು. ಫಿನಾಲೆ ತಲುಪಿ ಕಪ್ ಗೆದ್ದಿದೆ. ಶಿವಣ್ಣನ ನಾಯಕತ್ವದ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಗಣೇಶ್ ಅವರಿಗೆ ಕನ್ನಡ ಚಲನಚಿತ್ರ ಕಪ್ ಅನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನೀಡಿದರು.
ಇದನ್ನೂ ಓದಿ: BBK SEASON 10: ಈ ವೀಕೆಂಡ್ ಪಂಚಾಯ್ತಿಗೆ ಸುದೀಪ್ ಬರಲ್ಲ?
#KCC season 4 winner is #Gangawarriors 🔥. Deserved win for the team.
— Chethan Kotian 𝕏 (@ChethanBE) December 25, 2023
Congratulations skipper @Official_Ganesh 💐#KCCpart4 #KCC4 #KCCpartIV pic.twitter.com/zRfd4QitPu
ಈ ಬಾರಿಯ ಕೆಸಿಸಿಯಲ್ಲಿ ಕೆಲವು ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರೂ ಭಾಗಿಯಾಗಿದ್ದರು. ಕೆಸಿಸಿಯ ಹಿಂದಿನ ಟೂರ್ನಿಗಳಲ್ಲಿ ವೀರೇಂದ್ರ ಸೆಹ್ವಾಗ್, ಲ್ಯಾನ್ಸ್ ಕ್ಲೂಸೆನರ್, ಹರ್ಷಲ್ ಗಿಬ್ಸ್ , ತಿಲಕರತ್ನೆ ದಿಲ್ಶನ್, ಆಡಮ್ ಗಿಲ್‌ಕ್ರಿಸ್ಟ್, ಓವೈಸ್ ಶಾ, ಕ್ರಿಸ್ ಗೇಲ್ ಮುಂತಾದವರು ಆಡಿದ್ದಾರೆ. ಹಿಂದಿನ ಎರಡೂ ಸೀಸನ್‌ಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿವೆ. ಕಳೆದ ಸೀಸನ್ ಅಲ್ಲಿ ‘ಡಾರ್ಲಿಂಗ್’ ಕೃಷ್ಣ ನಾಯಕತ್ವದ ‘ಗಂಗಾ ವಾರಿಯರ್ಸ್’ ತಂಡ ಚಾಂಪಿಯನ್ ಆಗಿತ್ತು.