Site icon Vistara News

Keerthi Suresh | ಮೈಚಳಿ ಬಿಟ್ಟು ಟಪ್ಪಾಂಗುಚ್ಚಿ ಸ್ಟೆಪ್‌ ಹಾಕಿದ ಕೀರ್ತಿ ಸುರೇಶ್: ವಿಡಿಯೊ ವೈರಲ್‌!

Keerthi Suresh

ಬೆಂಗಳೂರು : ನಟಿ ಕೀರ್ತಿ ಸುರೇಶ್‌ (Keerthi Suresh) ಹಾಗೂ ನ್ಯಾಚುರಲ್ ಸ್ಟಾರ್ ನಾನಿ ʻʻದಸರಾʼʼ ಸಿನಿಮಾ ಮೂಲಕ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಈ ಸಿನಿಮಾದ ʻಧೂಮ್‌ ಧಾಮ್‌ ಧೋಸ್ತಾನ್‌ʼ (Dhoom Dhaam Dhosthaan) ಹಾಡಿಗೆ ನಟಿ ಕೀರ್ತಿ ಸುರೇಶ್‌ ಟಪ್ಪಾಂಗುಚ್ಚಿ ಸ್ಟೆಪ್‌ ಹಾಕಿರುವ ವಿಡಿಯೊ ವೈರಲ್‌ ಆಗಿದೆ.

ಕೀರ್ತಿ ಸುರೇಶ್‌ ʻಧೂಮ್ ಧಾಮ್ ಧೋಸ್ತಾನ್ʼ ಹಾಡಿಗೆ ಮೈ ಚಳಿ ಬಿಡುವಂತೆ ಡ್ಯಾನ್ಸ್‌ ಮಾಡಿದ್ದು, ಇನ್‌ಸ್ಟಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ʻʻಇದು ನನ್ನ ಧೂಮ್ ಧಾಮ್ ಜತೆಗೆ ದೋಸ್ತ್ ಅಕ್ಷಿತಾ ಸುಬ್ರಮಣಿಯನ್‌. ನಿಮ್ಮ ಧೂಮ್ ಧಾಮ್ ಎಲ್ಲಿ?” ಎಂದು ಕ್ಯಾಪ್ಶನ್‌ ನೀಡಿದ್ದಾರೆ. ʻಧೂಮ್ ಧಾಮ್ ಧೋಸ್ತಾನ್ʼ ತೆಲಂಗಾಣ ಶೈಲಿಯ ಜಾನಪದ ಟ್ರ್ಯಾಕ್‌ ಅನ್ನು ಹೊಂದಿದೆ. ಸಂತೋಷ್ ನಾರಾಯಣ್ ಹಾಡಿದ್ದಾರೆ. ರಾಹುಲ್ ಸಿಪ್ಲಿಗುಂಜ್‌, ಪಾಲಮುರು ಜಂಗಿರೆಡ್ಡಿ, ನರಸಮ್ಮ, ಗೊಟ್ಟೆ ಕನಕವ್ವ, ಗನ್ನೋರ ದಾಸ ಲಕ್ಷ್ಮಿ ಧ್ವನಿ ನೀಡಿದ್ದಾರೆ. ಕಾಸರ್ಲಾ ಶ್ಯಾಮ್ ಸಾಹಿತ್ಯ ಬರೆದಿದ್ದಾರೆ. ಈಗಾಗಲೇ ಇದರ ಲಿರಿಕಲ್‌ ಸಾಂಗ್‌ ಬಿಡುಗಡೆ ಆಗಿದ್ದು, ಭಾರಿ ವೀಕ್ಷಣೆ ಕಂಡಿದೆ.

ಇದನ್ನೂ ಓದಿ | Vaashi | ಕೋರ್ಟ್‌ನಲ್ಲಿ ಮುಖಾಮುಖಿ ಆಗಲಿದ್ದಾರೆ ಟೋವಿನೋ ಥಾಮಸ್‌ ಹಾಗೂ ಕೀರ್ತಿ ಸುರೇಶ್‌

ಶ್ರೀಕಾಂತ್ ಒಡೆಲಾ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ʻದಸರಾʼ ಸಿನಿಮಾವನ್ನು ಶ್ರೀ ಲಕ್ಷ್ಮಿ ವೆಂಕಟೇಶ್ವರ ಸಿನಿಮಾಸ್‌ ಬ್ಯಾನರ್‌ ಅಡಿಯಲ್ಲಿ ಸುಧಾಕರ್ ಚೆರುಕುರಿ ಅವರು ನಿರ್ಮಿಸಿದ್ದಾರೆ. ಸಮುದ್ರಕನಿ, ಸಾಯಿ ಕುಮಾರ್ ಮತ್ತು ಜರೀನಾ ವಹಾಬ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಸತ್ಯನ್ ಸೂರ್ಯನ್ ಛಾಯಾಗ್ರಹಣ ಮಾಡುತ್ತಿದ್ದು, ನವಿನ್ ನೂಲಿ ಸಂಕಲನದ ಜವಬ್ದಾರಿ ಹೊತ್ತಿದ್ದಾರೆ.

ನಾನಿ ಈ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಲಿದ್ದಾರೆ. ಈಗಾಗಲೇ ರಿಲೀಸ್ ಆಗಿದ್ದ ಫಸ್ಟ್ ಗ್ಲಿಂಪ್ಸ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಚಿತ್ರತಂಡ ಸ್ನೇಹಿತರ ದಿನದ ಅಂಗವಾಗಿ ಸ್ಪೆಷಲ್ ಪೋಸ್ಟರ್ ರಿಲೀಸ್ ಮಾಡಿತ್ತು. ಎರಡು ರೈಲ್ವೆ ಹಳಿಗಳ ನಡುವೆ ಇರುವ ಟ್ರಕ್‌ವೊಂದರಲ್ಲಿ ಕುಳಿತ ನಾನಿ‌ ಟೀಂನಲ್ಲಿ ಕನ್ನಡದ ಹುಡುಗ ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಕೂಡ ಕಾಣಿಸಿಕೊಂಡಿರುವುದು ವಿಶೇಷವಾಗಿತ್ತು.

2023ರ ಮಾರ್ಚ್‌ 30ರಂದು ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಬಹು ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಇದನ್ನೂ ಓದಿ | ನಾಗ ಕನ್ಯೆಯಾಗಿ ಮಿಂಚುತ್ತಿದ್ದಾರೆ ನಟಿ ಕೀರ್ತಿ ಸುರೇಶ್‌

Exit mobile version