Site icon Vistara News

Kantara Movie | ವರಾಹ ರೂಪಂ ವಿವಾದ: ತಡೆಯಾಜ್ಞೆ ತೆರವು ಕೋರಿದ ಹೊಂಬಾಳೆ ಅರ್ಜಿ ವಜಾ

Kantara Movie Kerala HC dismisses petitions

ಬೆಂಗಳೂರು : ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯ ಮತ್ತು ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯವು ಕಾಂತಾರ ಸಿನಿಮಾದ (Kantara Movie) ‘ವರಾಹ ರೂಪಂ’ ಹಾಡಿನ ಬಳಕೆಯನ್ನು ಮಾಡದಂತೆ ಮಧ್ಯಂತರ ತಡೆಯಾಜ್ಞೆ ಆದೇಶ ಈ ಹಿಂದೆ ನೀಡಿತ್ತು. ಇದರ ವಿರುದ್ಧ ಹೊಂಬಾಳೆ ಫಿಲ್ಮ್ಸ್‌ ಸಲ್ಲಿಸಿದ ಅರ್ಜಿಯನ್ನು ಕೇರಳ ಹೈಕೋರ್ಟ್ ನವೆಂಬರ್‌ 23 ಬುಧವಾರ ವಜಾಗೊಳಿಸಿದೆ. ಪರ್ಯಾಯ ಕಾನೂನು ಪರಿಹಾರ ಪಡೆಯುವುದಕ್ಕೆ ಅರ್ಜಿದಾರರು ಸ್ವತಂತ್ರರು ಎಂದು ನ್ಯಾಯಪೀಠ ಇದೇ ವೇಳೆ ಹೇಳಿದೆ.

ನ್ಯಾಯಮೂರ್ತಿ ಸಿಎಸ್ ಡಯಾಸ್ ಅವರ ಏಕಸದಸ್ಯ ಪೀಠವು, ಅರ್ಜಿದಾರರು ಭಾರತದ ಸಂವಿಧಾನದ 227ನೇ ವಿಧಿಯ ಅಡಿಯಲ್ಲಿ ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ. ಸಿವಿಲ್ ಪ್ರಕ್ರಿಯಾ ಸಂಹಿತೆಯಲ್ಲಿ ಸೂಚಿಸಲಾದ ಕಾರ್ಯವಿಧಾನವನ್ನು ಸಂಪೂರ್ಣವಾಗಿ ಬೈಪಾಸ್ ಮಾಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಅಧೀನ ನ್ಯಾಯಾಲಯಗಳು ನೀಡಿದ ಮಧ್ಯಂತರ ಆದೇಶದಲ್ಲಿ ಆ ನ್ಯಾಯಾಲಯದ ಮೇಲ್ವಿಚಾರಣಾ ಅಧಿಕಾರ ವ್ಯಾಪ್ತಿಯಲ್ಲಿ ನಾವು ಮಧ್ಯಸ್ಥಿಕೆ ವಹಿಸಬಾರದು. ಒಂದು ವೇಳೆ ಆದೇಶ ನೀಡಿದರೆ ಮೂಲ ನ್ಯಾಯವ್ಯಾಪ್ತಿಯ ನ್ಯಾಯಾಲಯಗಳು ಮತ್ತು ಮೇಲ್ಮನವಿ ನ್ಯಾಯಾಲಯಗಳು ನಿಷ್ಕ್ರಿಯವಾಗುತ್ತವೆ ಎಂದು ಅರ್ಜಿಯನ್ನು ವಜಾಗೊಳಿಸಿದೆ.

Kantara Movie Kerala HC dismisses petitions

ಇದನ್ನೂ ಓದಿ | Kantara Movie | ಒಟಿಟಿಯಲ್ಲಿ ಕಾಂತಾರ: ಪ್ರೇಕ್ಷಕರು ʻಸಿನಿಮಾ ನೋಡಲು ಮನಸ್ಸಾಗಲ್ಲʼ ಅಂದಿದ್ಯಾಕೆ?

ಕೋರ್ಟ್‌ ಮೊರೆ ಹೋಗಿತ್ತು ಹೊಂಬಾಳೆ
ತಡೆಯಾಜ್ಞೆಯ ಆದೇಶದಂತೆ ಹೊಂಬಾಳೆ ಫಿಲ್ಮ್ಸ್ ಮುಂದಿನ ಆದೇಶದವರೆಗೆ ʻವರಾಹ ರೂಪಂʼ ಗೀತೆಯೊಂದಿಗೆ ಕಾಂತಾರ ಚಿತ್ರದ ಪ್ರದರ್ಶನ, ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆ, ಸ್ಟ್ರೀಮಿಂಗ್ ಮಾಡದಂತೆ ನಿರ್ಬಂಧ ವಿಧಿಸಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಹೊಂಬಾಳೆ ಫಿಲ್ಮ್ಸ್‌ ಹೈಕೋರ್ಟ್‌ ಮೊರೆ ಹೋಗಿತ್ತು.

ಏನಿತ್ತು ಕೋರ್ಟ್‌ ಆದೇಶ?
ಈ ಹಿಂದೆ ವರಾಹ ರೂಪಂ ಹಾಡಿನ ಪ್ರಸಾರಕ್ಕೆ ಕೇರಳದ ಕಲ್ಲಿಕೋಟೆಯ ಸೆಷನ್ಸ್‌ ಕೋರ್ಟ್ ತಡೆ ನೀಡಿತ್ತು. ಕಾಂತಾರದ ನಿರ್ಮಾಪಕರು, ನಿರ್ದೇಶಕರು, ಸಂಗೀತ ನಿರ್ದೇಶಕರು, ಹಾಡು ಪ್ರಸಾರ ಮಾಡುತ್ತಿರುವ ಅಮೆಜಾನ್‌, ಯುಟ್ಯೂಬ್‌, ಸ್ಪೋಟಿಫೈ, ವಿಂಕ್‌, ಜಿಯೋ ಸಾವನ್‌ ಸೇರಿದಂತೆ ಇನ್ನಿತರ ಆನ್‌ಲೈನ್‌ ವೇದಿಕೆಗಳಿಗೆ ಆದೇಶ ಹೊರಡಿಸಿತ್ತು.

Kantara Movie Kerala HC dismisses petitions

ಬ್ಲಾಕ್‌ಬಸ್ಟರ್‌ ಸಿನಿಮಾ ಕಾಂತಾರದ ವರಾಹ ರೂಪಂ ಹಾಡು ನಾವು ಐದು ವರ್ಷದ ಹಿಂದೆ ರಚಿಸಿ ಬಿಡುಗಡೆ ಮಾಡಿದ್ದ ನವರಸಂ ಹಾಡಿನ ಕಾಪಿ ಎಂಬುದಾಗಿ ತೈಕುಡಂ ಬ್ರಿಡ್ಜ್ ಎಂಬ ಸಂಸ್ಥೆ ಕೋರ್ಟ್‌ ಮೊರೆ ಹೋಗಿತ್ತು. ಅಂತೆಯೇ ವಿಚಾರಣೆ ನಡೆಸಿದ ಕೋರ್ಟ್‌ ಹಾಡಿನ ಪ್ರಸರಣವನ್ನು ನಿಲ್ಲಿಸುವಂತೆ ಆದೇಶ ಹೊರಡಿಸಿತ್ತು. ತಡೆಯಾಜ್ಞೆ ತಂದಿರುವ ವಿಚಾರವನ್ನು ತೈಕುಡಂ ಬ್ರಿಜ್‌ ಮ್ಯೂಸಿಕ್‌ ಸಂಸ್ಥೆ, ತನ್ನ ಫೇಸ್‌ಬುಕ್‌ ಪೇಜ್‌ನಲ್ಲಿ ಬರೆದುಕೊಂಡಿತ್ತು. ಇದರ ಬೆನ್ನಲ್ಲೇ ಮತ್ತೊಂದು ಕೇಸ್ ದಾಖಲಾಗಿದ್ದು, ಮಾತೃಭೂಮಿ ಮ್ಯೂಸಿಕ್ ಸಂಸ್ಥೆಯು ಕೋರ್ಟ್ ಮೊರೆ ಹೋಗಿತ್ತು. ಹಾಗಾಗಿ ಅರ್ಜಿಯ ವಿಚಾರಣೆ ನಡೆಸಿರುವ ಪಾಲಕ್ಕಾಡ್ ಕೋರ್ಟ್ ಮುಂದಿನ ಆದೇಶ ಬರುವವರೆಗೂ ಈ ಹಾಡನ್ನು ಎಲ್ಲಿಯೂ ಹಂಚಿಕೆ ಮಾಡುವಂತಿಲ್ಲ ಎಂದು ತಡೆಯಾಜ್ಞೆ ನೀಡಿತ್ತು.

ಇದನ್ನೂ ಓದಿ | Kantara movie | ವಿಶ್ವಾದ್ಯಂತ ಕಾಂತಾರ ಸಿನಿಮಾ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಹೀಗಿದೆ

Exit mobile version