ಬೆಂಗಳೂರು: ಕೆಜಿಎಫ್ ಸಿನಿಮಾದಲ್ಲಿ (KGF 2) ಕುರುಡ ಮುದುಕನ ಪಾತ್ರ ನಿಭಾಯಿಸಿದ ಹಿರಿಯ ನಟ ಕೃಷ್ಣ ಜಿ ರಾವ್ ಬೆಂಗಳೂರಿನ ವಿನಾಯಕ ಆಸ್ಪತ್ರೆಯಲ್ಲಿ ಡಿಸೆಂಬರ್ 7 ಬುಧವಾರ ನಿಧನರಾಗಿದ್ದಾರೆ. ಡಿಸೆಂಬರ್ 1 ಗುರುವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಕೃಷ್ಣ ಜಿ ರಾವ್ ಅವರಿಗೆ 70 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಇವರನ್ನು ಸೀತಾ ಸರ್ಕಲ್ ಬಳಿಯ ವಿನಾಯಕ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು.
ಡಿಸೆಂಬರ್ 8 ಗುರುವಾರ ಬೆಳಗ್ಗೆ 11:00ಕ್ಕೆ ಸೀತಾ ಸರ್ಕಲ್‌ನಲ್ಲಿರುವ ಕೃಷ್ಣ ಜಿ ರಾವ್ ಅವರ ಅಣ್ಣನ ಮನೆ ಬಳಿಯ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ಹಂಚಿಕೊಂಡಿದ್ದಾರೆ.
ಕೆಜಿಎಫ್ ತಾತ ಎಂದೇ ಫೇಮಸ್ ಆಗಿದ್ದ ಹಿರಿಯ ನಟ ಕೃಷ್ಣ ಜಿ ರಾವ್ ಈ ಹಿಂದೆ ಅಷ್ಟೇ ʻಕೆಮಿಸ್ಟ್ರಿ ಆಫ್ ಕರಿಯಪ್ಪʼ ಸಿನಿಮಾದ ಸಾರಥಿ ಕುಮಾರ್ ನಿರ್ದೇಶನದ ಹೊಸ ಸಿನಿಮಾ ʼನ್ಯಾನೋ ನಾರಾಯಣಪ್ಪʼ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು.
ಇದನ್ನೂ ಓದಿ | KGF 2 | ಕೆಜಿಎಫ್ ತಾತ ಕೃಷ್ಣ ಜಿ ರಾವ್ ಆಸ್ಪತ್ರೆಗೆ ದಾಖಲು
ಹತ್ತು ತಲೆಯುಳ್ಳ ರಾವಣನ ಅವತಾರದಲ್ಲಿ ರಿಲೀಸ್ ಆಗಿರುವ ಫಸ್ಟ್ ಲುಕ್‌ನಲ್ಲಿ ಕೃಷ್ಣ ಜಿ ರಾವ್ ಕಿರೀಟ, ಗ್ಲಾಸ್ ಹಾಕಿ ಫೋಸ್ ಕೊಟ್ಟಿದ್ದು, ನ್ಯಾನೋ ಕಾರು ಕೂಡ ಹೈಲೈಟ್ ಆಗಿತ್ತು. ಕೆಜಿಎಫ್ ನಂತರ ಕೃಷ್ಣ ಜಿ ರಾವ್ ಅವರಿಗೆ ಹಲವಾರು ಅವಕಾಶಗಳು ಒದಗಿ ಬಂದವು. ಇದೀಗ ಈ ಚಿತ್ರದ ಜತೆ, ಪ್ರಶಾಂತ್ ನೀಲ್ ನಿರ್ದೇಶನದ ʻಸಲಾರ್ʼ ಚಿತ್ರದಲ್ಲಿಯೂ ನಟಿಸಿದ್ದಾರೆ. ಕೆಜಿಎಫ್ 2 ಬಿಡುಗಡೆಯ ನಂತರ 15 ಚಿತ್ರದಲ್ಲಿ ನಟಿಸಿದ್ದರು.
ಇದನ್ನೂ ಓದಿ | Nano Narayanappa | ಕೆಜಿಎಫ್ ಸಿನಿಮಾ ತಾತ ಈಗ ಫುಲ್ ಟೈಂ ಹೀರೋ