Site icon Vistara News

KGF 2: ರಾಷ್ಟ್ರ ಪ್ರಶಸ್ತಿ ವಿಜೇತ ಕೆಜಿಎಫ್‌ 2 ಹೀರೊ ಯಶ್ ಕುರಿತ 10 ಕುತೂಹಲಕರ ಸಂಗತಿಗಳಿವು

KGF 2

ಚಿತ್ರರಂಗದಲ್ಲಿ (KGF 2) ಬಹು ನಿರೀಕ್ಷೆ ಮೂಡಿಸಿರುವ ಕೆಜಿಎಫ್: ಚಾಪ್ಟರ್ 3 (K.G.F.: Chapter 3) ಮೂಲಕ ಮತ್ತೊಮ್ಮೆ ರಾಕಿ ಭಾಯ್ ಯಶ್ (Rocky bhai Yash) ಅಬ್ಬರಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಮುಂದಿನ ವರ್ಷ ತೆರೆಗೆ ಬರುವ ನಿರೀಕ್ಷೆಯಲ್ಲಿರುವ ಈ ಚಿತ್ರದ ಬಗ್ಗೆ ತಾರಾಗಣವಾಗಲಿ, ನಿರ್ದೇಶಕರಾಗಲಿ ಇನ್ನೂ ಗುಟ್ಟು ಬಿಟ್ಟು ಕೊಟ್ಟಿಲ್ಲ. ಈ ಚಿತ್ರದ ಮೂಲಕ ಯಶ್ (actor yash) ಮರಳಿ ಬರುವುದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ.

ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ ಕೆಜಿಎಫ್ 2 ಪ್ರೇಕ್ಷಕರನ್ನು ಆಸನದ ತುದಿಯಲ್ಲಿ ಕುರಿಸುವಲ್ಲಿ ಯಶಸ್ವಿಯಾಗಿತ್ತು. ಅಧ್ಯಾಯ 1ರಂತೆ ಕನ್ನಡ ನಟ ಯಶ್ ರಾಕಿ ಪಾತ್ರವನ್ನು ಇದರಲ್ಲೂ ಮುಂದುವರಿಸಿದ್ದರು.

ಕೆಜಿಎಫ್ ಮೂಲಕ ವಿಶ್ವದ ಪ್ರೇಕ್ಷಕರ ಮನ ಗೆದ್ದ ಯಶ್ ಬಗ್ಗೆ ತಿಳಿದುಕೊಳ್ಳಬೇಕಾದ ಹತ್ತು ಕುತೂಹಲಕಾರಿ ಸಂಗತಿಗಳು ಇಲ್ಲಿವೆ.


1. ಯಶ್ ಅವರ ನಿಜವಾದ ಹೆಸರು ನವೀನ್ ಕುಮಾರ್ ಗೌಡ.

2. ಯಶ್ ಅವರು ಜನಿಸಿದ್ದು ಕರ್ನಾಟಕದ ಹಾಸನ ಜಿಲ್ಲೆಯ ಬೂವನಹಳ್ಳಿ ಎಂಬ ಗ್ರಾಮದಲ್ಲಿ.

3. 2008ರಲ್ಲಿ ಶಶಾಂಕ್ ಅವರ ಮೊಗ್ಗಿನ ಮನಸು ಚಿತ್ರದ ಮೂಲಕ ಯಶ್ ಕನ್ನಡ ಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದರು.


4. ಯಶ್ ವೃತ್ತಿಜೀವನದಲ್ಲಿ ಮೊದಲಾಸಲ, ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ, ರಾಜಧಾನಿ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

5. ಯಶ್ ಯಾವಾಗಲೂ ನಟನಾಗಬೇಕೆಂದು ಬಯಸಿದ್ದರು. ಎಷ್ಟರ ಮಟ್ಟಿಗೆಂದರೆ ಯಶ್ ತನ್ನ ಕನಸನ್ನು ನನಸಾಗಿಸಲು ಮನೆಯಿಂದ ಓಡಿ ಹೋಗಿದ್ದರು.


6. ಯಶ್ 2016 ರಲ್ಲಿ ನಟಿ ರಾಧಿಕಾ ಪಂಡಿತ್ ಅವರನ್ನು ವಿವಾಹವಾದರು. ದಂಪತಿಗೆ ಐರಾ ಮತ್ತು ಯಥರ್ವ್ ಎಂಬ ಹೆಸರಿನ ಇಬ್ಬರು ಮಕ್ಕಳಿದ್ದಾರೆ.


7. ಯಶ್ ಮತ್ತು ರಾಧಿಕಾ ಪಂಡಿತ್ ಕೂಡ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಸೇರಿದಂತೆ ಕೆಲವು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇದು ದೊಡ್ಡ ಯಶಸ್ಸನ್ನು ಕಂಡಿತು.

8. ಯಶ್ ಧಾರಾವಾಹಿಯಲ್ಲೂ ನಟಿಸಿದ್ದು, ನಂದ ಗೋಕುಲದ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಇದನ್ನು ಅಶೋಕ್ ಕಶ್ಯಪ್ ನಿರ್ದೇಶಿಸಿದ್ದಾರೆ. ಈ ಧಾರಾವಾಹಿಯಲ್ಲಿ ಅವರ ಪತ್ನಿ ರಾಧಿಕಾ ಪಂಡಿತ್ ಕೂಡ ಕಾಣಿಸಿಕೊಂಡಿದ್ದರು.

9. ಯಶ್ ಅವರ ಜನ್ಮ ದಿನಾಂಕ ಜನವರಿ 8. ಅವರ ವಯಸ್ಸು ಈಗ ಕೇವಲ 36.


10. ಈವರೆಗೆ 21 ಸಿನಿಮಾ, 6 ಧಾರಾವಾಹಿಗಳಲ್ಲಿ ಯಶ್ ಬಣ್ಣ ಹಚ್ಚಿದ್ದಾರೆ. ಸದ್ಯ ಟಾಕ್ಸಿಕ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

Exit mobile version