Site icon Vistara News

KGF Collection | ಅರ್ಧ ಸಾವಿರ ಕೋಟಿ ದಾಟಿದ ಗಳಿಕೆ: ರಾಕಿಭಾಯ್‌ ದಾಖಲೆ !

ನವದೆಹಲಿ: ರಾಕಿಂಗ್‌ ಸ್ಟಾರ್‌ ಅಭಿನಯದ ‘KGF: Chapter 2’ ಚಿತ್ರವು ಪ್ರೇಕ್ಷಕರ ಮನ ಗೆಲ್ಲುವ ಜತೆಗೆ ಬಾಕ್ಸ್‌ ಆಫೀಸ್‌ನಲ್ಲಿ ಕೂಡ ಧೂಳೆಬ್ಬಿಸಿದೆ. ಪ್ರಶಾಂತ್‌ ನೀಲ್‌ ನಿರ್ದೇಶನದ ಕೆಜಿಎಫ್‌ ಚಿತ್ರ ₹550 ಕೋಟಿಗೂ ಅಧಿಕ ಹಣಗಳಿಸುವ ಮೂಲಕ ಹೊಸ ಚರಿತ್ರೆ ಸೃಷ್ಟಿಸಿದೆ. ವಿಶ್ವದಲ್ಲೇ ಅತಿ ಹೆಚ್ಚು ಹಣಗಳಿಸಿದ ಚಿತ್ರದಲ್ಲಿ ಕೆಜಿಎಫ್‌ 2 ಎರಡನೇ ಸ್ಥಾನ ಪಡೆದುಕೊಂಡಿದೆ. ಕನ್ನಡ ಸಿನಿಮಾ ಈ ಮಟ್ಟದ ದಾಖಲೆ ಮಾಡಿರುವುದು ಕನ್ನಡಿಗರಿಗೆ ಇನ್ನಷ್ಟು ಹೆಮ್ಮೆಯ ವಿಷಯವಾಗಿದೆ.

ಕೆಜಿಎಫ್‌ 2 ಚಿತ್ರ ಬಿಡುಗಡೆಯಾಗಿ ನಾಲ್ಕನೇ ದಿನ ಕೂಡ ₹132ಕೋಟಿ ಕಲೆಕ್ಷನ್‌ ಮಾಡಿರುವುದು ಅಚ್ಚರಿ ಮೂಡಿಸಿದೆ. ಈವರೆಗೆ ಒಟ್ಟು ₹551.83 ಕೋಟಿ ಗಳಿಸಿ ಇನ್ನೂ ಹೌಸ್‌ಫುಲ್‌ ಪ್ರದರ್ಶನ ನೀಡುತ್ತಿದೆ. ಕನ್ನಡದ ಸೂಪರ್‌ ಹಿಟ್‌ ಸಿನಿಮಾ ಕೆಜಿಎಫ್‌ 2 ಹಿಂದಿ ಬಾಷೆಯಲ್ಲಿ ಕೂಡ ಯಶಸ್ಸು ಕಂಡಿದೆ. ನಾಲ್ಕು ದಿನದಲ್ಲಿ ₹193.99 ಕೋಟಿ ಪಡೆದಿದೆ.

ಕೆಜಿಎಫ್‌ 2 ಈವರೆಗೆ ಗಳಿಸಿರುವ ಮೊತ್ತ:

ಕನ್ನಡ ಸಿನಿಮಾ ವಿಶ್ವವ್ಯಾಪಿ ಯಶಸ್ಸನ್ನು ಕಾಣುವ ಜತೆಗೆ ಹೊಸ ಇತಿಹಾಸ ಬರೆದಿದೆ. ನಾಲ್ಕು ದಿನಗಳಲ್ಲಿ ಅತಿ ಹೆಚ್ಚು ಹಣಗಳಿಸಿದ ಸಿನಿಮಾಗಳಲ್ಲಿ ಕೆಜಿಎಫ್‌-2 ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ಫಂಟಾಸ್ಟಿಕ್‌ ಬೀಸ್ಟ್ಸ್-3 (Fantastic Beasts-3) ಚಿತ್ರ ₹870 ಕೋಟಿಗಳಿಸಿ ಮೊದಲ ಸ್ಥಾನದಲ್ಲಿದೆ.

ಕೆಜಿಎಫ್‌ ಚಿತ್ರದ ಯಶಸ್ಸಿನ ಸಂಭ್ರಮದಲ್ಲಿರುವ ನಿರ್ದೇಶಕ ಪ್ರಶಾಂತ್‌ ನೀಲ್‌ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ʼನಾವು ಈ ಚಿತ್ರದ ಶೂಟಿಂಗ್‌ ಆರಂಭಿಸುವಾಗ ಈ ಪ್ರಮಾಣದ ಸಿನಿಮಾ ಆಗುತ್ತದೆ ಎಂದು ಅಂದುಕೊಂಡಿರಲಿಲ್ಲ. ನಮಗೆ ಇದನ್ನು ಪ್ಯಾನ-ಇಂಡಿಯಾ ಸಿನಿಮಾ ಮಾಡುವ ಕನಸು ಕೂಡ ಇರಲಿಲ್ಲ. ಕನ್ನಡಿಗರಿಗೆ ಒಂದು ಒಲ್ಳೆಯ ಸಿನಿಮಾ ನೀಡಬೇಕು ಎಂಬ ಆಸೆಯಿತ್ತು. ಕ್ರಮೇಣ ಇದನ್ನು ಎರಡು ಭಾಗವಾಗಿ ಚಿತ್ರೀಕರಿಸಲು ನಿರ್ಧರಿಸಿದ್ದು ಹಾಗೂ ಕರ್ನಾಟಕದ ಹೊರಗೂ ತಲುಪಿಸಬೇಕು ಅಂದುಕೊಂಡಿದ್ದು. ನನಗೆ ಇದು ಒಂದು ತಾಯಿ ಹಾಗೂ ಮಗನ ಕಥೆಯಾಗಿ ನೋಡುಗರ ಮುಂದಿರಬೇಕು ಎಂದಷ್ಟೇ ಮುಖ್ಯವಾಗಿತ್ತು. ಈ ಯಶಸ್ಸಿಗೆ ಮುಖ್ಯ ಕಾರಣ ನಿರ್ಮಾಪಕ ವಿಜಯ್‌ ಕಿರಗುಂದೂರ್‌ ಹಾಗೂ ಯಶ್ʼ ಎಂದು ಹೇಳುವ ಮೂಲಕ ಪ್ರಶಾಂತ್‌ ಸಂತಸಪಟ್ಟಿದ್ದಾರೆ.

ಹೆಚ್ಚಿನ ಓದಿಗಾಗಿ:

ಕೆಜಿಎಫ್‌ ಸ್ಟಾರ್‌ ಯಶ್‌ ಲಕ್ಷುರಿ ಲೈಫ್‌ಸ್ಟೈಲ್‌ ಹೇಗಿದೆ ನಿಮಗೆ ಗೊತ್ತೆ?

Exit mobile version