ಬೆಂಗಳೂರು: ಬಹುಭಾಷಾ ನಟಿ ಖುಷ್ಬೂ ಸುಂದರ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಹಲವು ದಿನಗಳಿಂದ ನಟಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕಳೆದ ಏಪ್ರಿಲ್ ಮೊದಲ ವಾರದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ನಟಿ, ಇದೀಗ ಮೂಳೆ ಚಿಕಿತ್ಸೆ ಸಲುವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನಾರೋಗ್ಯದ ಬಗ್ಗೆ ಆಸ್ಪತ್ರೆಗೆ ದಾಖಲಾಗಿರುವುದರ ಬಗ್ಗೆ ಟ್ವಿಟ್ ಮಾಡಿರುವ ಖುಷ್ಬೂ, ಟೇಲ್ ಬೋನ್ (coccyx bone ( tail bone )) ಚಿಕಿತ್ಸೆ ಪಡೆಯುವುದರ ಸಲುವಾಗಿ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ನಟಿ ಆಸ್ಪತ್ರೆ ಬೆಡ್ ಮೇಲೆ ಮಲಗಿರುವ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಹಿಂದೆಯೂ ಈ ಸಮಸ್ಯೆ ಖುಷ್ಬೂ ಅವರನ್ನು ಬಾಧಿಸಿತ್ತು. ಇದೀಗ ಅದೇ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಮತ್ತೆ ಚಿಕಿತ್ಸೆ ಮುಂದುವರಿಸಿದ್ದಾರೆ. ನಟಿ ಟ್ವೀಟ್‌ನಲ್ಲಿ ʻನಾನು ಈಗ ಚೇತರಿಕೆಯ ಹಂತದಲ್ಲಿದ್ದೇನೆ. ಕೋಕ್ಸಿಕ್ಸ್ ಅಥವಾ ಟೇಲ್ ಮೂಳೆ ((coccyx bone ( tail bone )) ) ಚಿಕಿತ್ಸೆಯ ಸಲುವಾಗಿ ನಾನು ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದೇನೆ. ಈ ಹಿಂದೆಯೂ ಈ ಸಮಸ್ಯೆ ಕಾಡಿತ್ತು. ಆದಷ್ಟು ಬೇಗ ಗುಣಮುಖಳಾಗಿ ಹೊರಬರುವೆ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Khushbu Sundar: ಅಮ್ಮನ ಘನತೆಗೆ ಧಕ್ಕೆ ತರುತ್ತಿದ್ದೀರಿ ಎಂದು ಖುಷ್ಬೂ ಮಗಳಿಗೆ ನೆಟ್ಟಿಗರ ಕ್ಲಾಸ್
On the road to recovery! Underwent a procedure for my coccyx bone ( tail bone ) yet again. Hope it heals completely. 🙏 pic.twitter.com/07GlQxobOI
— KhushbuSundar (@khushsundar) June 23, 2023
ನಟಿಯ ಟ್ವೀಟ್ ವೈರಲ್ ಆಗುತ್ತಿದ್ದಂತೆ ಶೀಘ್ರ ಗುಣಮುಖರಾಗುವಂತೆ ಅವರ ಫ್ಯಾನ್ಸ್ ಹಾರೈಸಿದ್ದಾರೆ. ಕಳೆದ ಏಪ್ರಿಲ್‌ನಲ್ಲಿಯೂ ಖುಷ್ಬೂ ಹೈದರಾಬಾದ್‌ನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯದ ಎಚ್ಚರಿಕೆ ವಹಿಸಿ, ನಿರ್ಲಕ್ಷಿಸದಂತೆ ಅಭಿಮಾನಿಗಳಿಗೆ ಸಲಹೆ ನೀಡಿದ್ದರು. ಇತ್ತೀಚೆಗೆ ನಟಿ ʻʻವಿಪರೀತ ಜ್ವರ, ತುಂಬಾ ನೋವು ಮತ್ತು ದೌರ್ಬಲ್ಯ ನನ್ನನ್ನು ಕೊಲ್ಲುತ್ತಿದೆ. ಅದು ನನ್ನ ಮೇಲೆ ಪರಿಣಾಮ ಬೀರಿದೆ. ಅತಿ ಹೆಚ್ಚು ಜ್ವರ, ದೇಹದ ನೋವು ಮತ್ತು ದೌರ್ಬಲ್ಯದಿಂದ ಸಾಯುವಂತೆ ಆಗುತ್ತಿದೆ. ನಾನು ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ದಯವಿಟ್ಟು ಆರೋಗ್ಯ ನಿರ್ಲಕ್ಷಿಸಬೇಡಿ ಎಂದುʼʼ ಖುಷ್ಟು ಟ್ವೀಟ್‌ನಲ್ಲಿ ಬರೆದುಕೊಂಡಿದ್ದರು.
ಇದನ್ನೂ ಓದಿ: Khushbu Sundar : ರವಿಚಂದ್ರನ್ ಜನುಮದಿನಕ್ಕೆ ನಟಿ ಖುಷ್ಬೂ ನೀಡಿದ ಸರ್‌ಪ್ರೈಸ್ ಹೇಗಿದೆ ನೋಡಿ!
ರಜನಿಕಾಂತ್ ಮತ್ತು ಪವನ್ ಕಲ್ಯಾಣ್ ಅವರಂತಹ ಟಾಪ್ ಸ್ಟಾರ್‌ಗಳೊಂದಿಗೆ ತೆರೆ ಮೇಲೆ ಕಾಣಿಸಿಕೊಂಡ ಇವರು ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ವಿಜಯ್ ಅಭಿನಯದ ವಾರಿಸು ಚಿತ್ರದಲ್ಲಿ ನಟಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರಕ್ಕೆ ವಂಶಿ ಪಡಿಪಲ್ಲಿ ನಿರ್ದೇಶನವಿದೆ.