Site icon Vistara News

Kiara Advani : ಹ್ಯಾಪಿ ಬರ್ತ್‌ಡೇ ಕಿಯಾರಾ; ಶಾಪಿಂಗ್‌ ಬೆಡಗಿಗೆ ಸ್ಪೆಷಲ್‌ ಕೇಕ್‌ ಮಾಡಿಸಿದ ಸ್ನೇಹಿತರು

Kiara Advani birthday

ಮುಂಬೈ: ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿ (Kiara Advani) ಅವರು ಇಂದು ತಮ್ಮ 31ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕಿಯಾರಾ ಅವರ ಬರ್ತ್‌ಡೇ ಅನ್ನು ಅವರ ಸ್ನೇಹಿತೆಯರು ವಿಶೇಷವಾಗಿ ಆಚರಿಸಿದ್ದು, ಅದರ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅವರಿಗೆಂದು ಮಾಡಿಸಲಾಗಿದ್ದ ವಿಶೇಷ ಕೇಕ್‌ನ ಫೋಟೋ ಎಲ್ಲೆಡೆ ಹರಿದಾಡುತ್ತಿದ್ದು, ಭಾರೀ ವೈರಲ್‌ ಆಗಿದೆ.

ಕಿಯಾರಾ ಅವರ ಸ್ನೇಹಿತರು ಅವರಿಗೆಂದು ವಿಶೇಷವಾದ ಮೂರು ಲೇಯರ್‌ನ ಕೇಕ್‌ ಮಾಡಿಸಿದ್ದರು. ಅದರಲ್ಲಿ ಕೆಳಗಿದ್ದ ಲೇಯರ್‌ನಲ್ಲಿ ಒಂದಿಷ್ಟು ಅದ್ಧೂರಿ ಅಂಗಡಿಗಳ ರೀತಿಯಲ್ಲಿ ಚಿತ್ರಿಸಲಾಗಿತ್ತು. ಮಧ್ಯದ ಲೇಯರ್‌ನಲ್ಲಿ “Born to Shop” ಎಂದು ಬರೆಯಲಾಗಿದ್ದು, ಶಾಪಿಂಗ್‌ ಸೆಂಟರ್‌ನ ಬಾಗಿಲ ಚಿತ್ರವನ್ನೂ ಇರಿಸಲಾಗಿತ್ತು. ಇನ್ನು ಈ ಎರಡೂ ಲೇಯರ್‌ಗಳ ಮೇಲಿದ್ದ ಲೇಯರ್‌ ಅನ್ನು ಶಾಪಿಂಗ್‌ ಬ್ಯಾಗ್‌ ರೂಪದಲ್ಲಿ ಮಾಡಲಾಗಿತ್ತು.

ಇದನ್ನೂ ಓದಿ: Viral video: ಹಿಂಡು ತಪ್ಪಿಸಿಕೊಂಡ ಕಾಡಾನೆ ಮರಿ ಕರೆದರೆ ಏನು ಮಾಡುತ್ತೆ ನೋಡಿ!
ಬರ್ತ್‌ಡೇ ಪ್ರಯುಕ್ತ ವಿಶೇಷವಾಗಿ ಗುಲಾಬಿ ಬಣ್ಣದ ಬಲೂನ್‌ಗಳಿಂದ ಅಲಂಕಾರವನ್ನೂ ಮಾಡಲಾಗಿತ್ತು. ಹಾಗೆಯೇ ಅಲ್ಲಿ “we love you” ಎಂದು ಬರೆಸಲಾಗಿತ್ತು. ಕಿಯಾರಾ ಅವರು ಮಾಮೂಲಿ ಪೈಜಾಮಾದಲ್ಲಿ, ನೋ ಮೇಕಪ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಅವರು ಕೇಕ್‌ ಕತ್ತರಿಸುವುದಕ್ಕೂ ಮೊದಲು ಕಣ್ಣು ಮುಚ್ಚಿಕೊಂಡು ಪ್ರಾರ್ಥನೆ ಮಾಡುತ್ತಿದ್ದ ವೇಳೆಯಲ್ಲಿ ತೆಗೆದ ಫೋಟೋವನ್ನು ಅವರ ಸ್ನೇಹಿತರ ಇನ್‌ಸ್ಟಾಗ್ರಾಂ ಸ್ಟೋರಿ ರೂಪದಲ್ಲಿ ಹಂಚಿಕೊಂಡಿದ್ದಾರೆ.


ಕಿಯಾರಾ ಅವರು ಕಳೆದ ಗುರುವಾರದಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಪತಿ ಸಿದ್ಧಾರ್ಥ್‌ ಮಲ್ಹೋತ್ರಾ ಅವರೊಂದಿಗೆ ಕಾಣಿಸಿಕೊಂಡಿದ್ದರು. ಹುಟ್ಟಿದ ಹಬ್ಬದ ಪ್ರಯುಕ್ತ ವಿಶೇಷ ಪ್ರವಾಸದಲ್ಲಿ ದಂಪತಿಯಿದ್ದಾರೆ. ಸಿದ್ಧಾರ್ಥ್‌ ಜತೆಗಿನ ಸೆಲ್ಫಿಯನ್ನು ಹಂಚಿಕೊಂಡಿದ್ದ ಕಿಯಾರಾ “Time to (airplane emoji)”ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ: Viral Video: ಧೋನಿಯೊಂದಿಗಿನ ವಿಡಿಯೊ ಹರಿಬಿಟ್ಟ ಗಗನಸಖಿ!
ಕಿಯಾರಾ ಅವರು ಕೊನೆಯದಾಗಿ ಸತ್ಯಪ್ರೇಮ್‌ ಕಿ ಕಥಾದಲ್ಲಿ ನಟ ಕಾರ್ತಿಕ್‌ ಆರ್ಯನ್‌ ಅವರ ಜತೆಯಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾವನ್ನು ಸಮೀರ್‌ ವಿಧ್ವಾನ್ಸ್‌ ಅವರು ನಿರ್ದೇಶನ ಮಾಡಿದ್ದಾರೆ. ಜೂನ್‌ 29ರಂದು ಬಿಡುಗಡೆಯಾದ ಈ ಸಿನಿಮಾ ವಿಶ್ವಾದ್ಯಂತ ನೂರು ಕೋಟಿ ರೂ.ಗೂ ಅಧಿಕ ಸಂಪಾದನೆಯನ್ನು ಮಾಡಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Exit mobile version