ಬೆಂಗಳೂರು: ಕಿಯಾರಾ ಅಡ್ವಾಣಿ (Kiara Advani) ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಫೆಬ್ರವರಿ 6ರಂದು ಹಸೆಮಣೆ ಏರಲಿದ್ದಾರೆ ಎಂದು ವರದಿಯಾಗಿದೆ. ಜೋಡಿ ಈ ಬಗ್ಗೆ ಎಲ್ಲಿಯೂ ಅಧಿಕೃತವಾಗಿ ಹೇಳಿಕೊಳ್ಳದಿದ್ದರೂ ವಿವಾಹಕ್ಕೆ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಜೈಸಲ್ಮೇರ್‌ನ ಅದ್ಧೂರಿ ಹೋಟೆಲ್ ಒಂದರಲ್ಲಿ ವಿವಾಹವಾಗಲಿದ್ದಾರೆ ಎಂದು ಹೇಳಲಾಗಿದೆ.
ಜನವರಿ 31 ರ ಮಂಗಳವಾರ ತಡರಾತ್ರಿ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರನ್ನು ನಟಿ ಭೇಟಿಯಾಗಿದ್ದಾರೆ. ನಟಿ ಕ್ಯಾಶುಯಲ್ ಸ್ವೆಟ್‌ಶರ್ಟ್ ಮತ್ತು ಟ್ರ್ಯಾಕ್ ಪ್ಯಾಂಟ್‌ನಲ್ಲಿ ಧರಿಸಿದ್ದರು. ಮೇಕಪ್ ಇಲ್ಲದೇ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ. ಇದೀಗ ನಟಿ ಮದುವೆಗೆ ಲೆಹೆಂಗಾಕ್ಕಾಗಿ ಮನೀಶ್ ಮಲ್ಹೋತ್ರಾ ಅವರನ್ನು ಭೇಟಿಯಾಗಿದ್ದಾರೆ ಎಂಬ ಗಾಸಿಪ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಪೂರಕ ಎಂಬಂತೆ ಮನೀಶ್ ಮಲ್ಹೋತ್ರಾ ಅವರನ್ನು ಭೇಟಿಯಾದ ವಿಡಿಯೊ ವೈರಲ್ ಆಗಿದೆ. ಫೆಬ್ರವರಿ 6 ರಂದು ಜೈಸಲ್ಮೇರ್‌ನ ಸೂರ್ಯಗಢ್ ಹೋಟೆಲ್‌ನಲ್ಲಿ ಮದುವೆ ನಡೆಯುವ ಸಾಧ್ಯತೆಯಿದೆ.
ಇದನ್ನೂ ಓದಿ: Sidharth Malhotra: ನಾಳೆ ಬೋಲ್ಡ್ ಅನೌನ್ಸ್‌ಮೆಂಟ್ ಇರಲಿದೆ ಎಂದ ಸಿದ್ಧಾರ್ಥ್: ʻಕಿಯಾರ ಜತೆ ಮದುವೆʼ ಅಂದ್ರು ನೆಟ್ಟಿಗರು!
ಮದುವೆಯ ನಂತರ, ಸಿದ್ ಮತ್ತು ಕಿಯಾರಾ ದೆಹಲಿ ಹಾಗೂ ಮುಂಬೈನಲ್ಲಿ ಆರತಕ್ಷತೆಯನ್ನು ಯೋಜಿಸುತ್ತಿದ್ದಾರೆ ಎನ್ನಲಾಗಿದೆ. ಅದಕ್ಕಾಗಿ ಸಿದ್ಧಾರ್ಥ್ ಕುಟುಂಬ ಈಗಾಗಲೇ ತಯಾರಿ ನಡೆಸುತ್ತಿದೆ. ನಟಿ ಕಿಯಾರಾ ಆಡ್ವಾಣಿ ಮತ್ತು ನಟ ಸಿದ್ಧಾರ್ಥ್ ಮಲ್ಹೋತ್ರಾ ಕೆಲವು ಸಮಯದಿಂದ ಡೇಟಿಂಗ್ ಮಾಡುತ್ತಿದ್ದು, ಈ ಜೋಡಿಯು ತಮ್ಮ ಸಂಬಂಧವನ್ನು ಈಗಾಗಲೇ ಅನೇಕ ಕಡೆಗಳಲ್ಲಿ ಖಚಿತಪಡಿಸಿದೆ.
ಇದನ್ನೂ ಓದಿ: Sushanth Singh | ದಿನಕ್ಕೆ ಎರಡೇ ತಾಸು ನಿದ್ರೆ ಮಾಡುತ್ತಿದ್ದ ಸುಶಾಂತ್! ನಟಿ ಕಿಯಾರಾ ಬಿಚ್ಚಿಟ್ಟ ಸತ್ಯ
‘ಷೇರ್ ಶಾ’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಇವರಿಬ್ಬರ ಮಧ್ಯೆ ಪ್ರೀತಿ ಹುಟ್ಟಿದೆ ಎಂದು ಹೇಳಲಾಗಿತ್ತು. ಈ ಚಿತ್ರಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಸಹ ಸಿಕ್ಕಿತ್ತು. ಅಭಿಮಾನಿಗಳು ಸಹ ಈ ಜೋಡಿಯನ್ನು ಮೆಚ್ಚಿಕೊಂಡಿದ್ದಾರೆ.