Site icon Vistara News

Kiara Sidharth Wedding: ಕಿಯಾರಾ ಸಿದ್ಧಾರ್ಥ್​ ಮದುವೆಗೆ ಬರುವವರಿಗೆ ಸಿಗಲಿದೆ ಐಷಾರಾಮಿ ಸೌಕರ್ಯ

#image_title

ಮುಂಬೈ: ಬಾಲಿವುಡ್‌ ನಟ ಸಿದ್ಧಾರ್ಥ್​ ಮಲ್ಹೋತ್ರಾ ಮತ್ತು ನಟಿ ಕಿಯಾರಾ ಅಡ್ವಾಣಿ ಫೆ.6ರಂದು ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ವೈವಾಹಿಕ ಜೀವನಕ್ಕೆ (Kiara Sidharth Wedding) ಕಾಲಿಡಲಿದ್ದಾರೆ. ಅದ್ಧೂರಿಯಾಗಿ ಜರುಗಲಿರುವ ಈ ವಿವಾಹ ಕಾಯಕ್ರಮಕ್ಕೆ ಬಾಲಿವುಡ್‌ನ ಹಲವು ಗಣ್ಯರು ಆಗಮಿಸಲಿದ್ದಾರೆ. ಫೆ.4ರಂದೇ ಎಲ್ಲ ಗಣ್ಯರೂ ರಾಜಸ್ಥಾನದಲ್ಲಿ ಹಾಜರಿರಲಿದ್ದು, ಅವರಿಗೆಂದು ಜೋಡಿ ಅತ್ಯಂತ ವಿಶೇಷ ವ್ಯವಸ್ಥೆಗಳನ್ನು ಮಾಡಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ: Kangana Ranaut : ಕಿಯಾರಾ-ಸಿದ್ದಾರ್ಥ್‌ ಜೋಡಿ ಬಗ್ಗೆ ಇನ್​ಸ್ಟಾಗ್ರಾಂ ಸ್ಟೋರಿ ಹಾಕಿದ ಕಂಗನಾ ರಣಾವತ್‌
ಮದುವೆಗೆಂದು ಬರುವ ಗಣ್ಯರಿಗೆ ರಾಜಸ್ಥಾನದಲ್ಲಿ ಡೆಸರ್ಟ್‌ ಸಫಾರಿ ಏರ್ಪಡಿಸಲಾಗಿದೆ. ಹಾಗೆಯೇ ಅವರಿಗೆಂದು ವಿಶೇಷವಾದ ಸ್ಪಾ ವೋಚರ್‌ ಕೂಡ ಕೊಡಲಾಗುವುದು. ವಿಶೇಷ ಖಾದ್ಯಗಳನ್ನು ಒಳಗೊಂಡಿರುವ ಆಹಾರ ಮೇಳವನ್ನೂ ನಡೆಸಲಾಗುವುದು. ಅತಿಥಿಗಳ ಸಂಚಾರಕ್ಕೆಂದೇ ಐಷಾರಾಮಿ ಕಾರುಗಳನ್ನೂ ಬುಕ್‌ ಮಾಡಲಾಗಿದೆ. ಮನೋರಂಜನೆಗಾಗಿ ಅತಿಥಿಗಳಿಗೆ ಫನ್‌ ಗೇಮ್‌ ಆಡಿಸುವ ಯೋಜನೆಯನ್ನೂ ಹಾಕಿಕೊಂಡಿದೆ ಕಿಯಾರಾ-ಸಿದ್ಧಾರ್ಥ್​ ಜೋಡಿ.

ಇನ್ನು ಸಿದ್ಧಾರ್ಥ್​ ಕುಟುಂಬ ಕೂಡ ಈ ಮದುವೆಗೆಂದು ಭರ್ಜರಿ ತಯಾರಿ ಮಾಡಿಕೊಂಡಿದೆ. ಕುಟುಂಬಸ್ಥರೆಲ್ಲರೂ ಸೇರಿಕೊಂಡು ಮನೆಗೆ ಬರುತ್ತಿರುವ ಸೊಸೆ ಕಿಯಾರಾಗೋಸ್ಕರ ವಿಶೇಷವಾದ ಸಂಗೀತ, ನೃತ್ಯ ಕಾರ್ಯಕ್ರಮಗಳನ್ನು ಕೊಡಲಿದ್ದಾರೆ. ಕುಟುಂಬಸ್ಥರೇ ಅದಕ್ಕೆ ಕೊರಿಯಾಗ್ರಫಿಯನ್ನೂ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಹಾಗೆಯೇ ನವ ವಧು-ವರರೂ ಕೂಡ ವಿಶೇಷವಾದ ನೃತ್ಯ ಪ್ರದರ್ಶನ ನೀಡಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Kiara – Sidharth Wedding : ಕಿಯಾರಾ – ಸಿದ್ದಾರ್ಥ್‌ ಮದುವೆಗೂ ಶಾರುಖ್‌ ಖಾನ್‌ಗೂ ಇದೆ ಸಂಬಂಧ! ಏನದು?
ಕಿಯಾರಾ-ಸಿದ್ದಾರ್ಥ್‌ ಮದುವೆ ರಾಜಸ್ಥಾನದ ಜೈಸಲ್ಮೇರ್‌ನಲ್ಲಿರುವ ಸೂರ್ಯಗ್ರಹ ಪ್ಯಾಲೇಸ್‌ನಲ್ಲಿ ಜರುಗಲಿದೆ. ಫೆ.4ರಂದು ಮೆಹಂದಿ ಕಾರ್ಯಕ್ರಮ, 5ರಂದು ಸಂಗೀತ ಹಾಗೂ 6ರಂದು ಮದುವೆ ಕಾರ್ಯಕ್ರಮ ನಡೆಯಲಿದೆ ಎಂದು ವರದಿಯಿದೆ. ಕರಣ್‌ ಜೋಹರ್‌, ರೋಹಿತ್‌ ಶೆಟ್ಟಿ, ಈಶಾ ಅಂಬಾನಿ, ರಾಮ್‌ಚರಣ್‌, ಶಾಹಿದ್‌ ಕಪೂರ್‌, ಮೀರಾ ರಜಪೂತ್‌ ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

Exit mobile version