Site icon Vistara News

Kiara – Sidharth Wedding : ಕಿಯಾರಾ – ಸಿದ್ದಾರ್ಥ್‌ ಮದುವೆಗೂ ಶಾರುಖ್‌ ಖಾನ್‌ಗೂ ಇದೆ ಸಂಬಂಧ! ಏನದು?

#image_title

ಮುಂಬೈ: ಭಾರತೀಯ ಕ್ರಿಕೆಟ್‌ ಆಟಗಾರ ಕೆ.ಎಲ್‌.ರಾಹುಲ್‌ ಹಾಗೂ ಬಾಲಿವುಡ್‌ ನಟ ಸುನಿಲ್‌ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ವಿವಾಹವಾದ ಬೆನ್ನಲ್ಲೇ ಬಾಲಿವುಡ್‌ನ ಮತ್ತೊಂದು ಜೋಡಿ ಹಸೆಮಣೆ ಏರುವುದಕ್ಕೆ ಸಿದ್ಧವಾಗಿದೆ. ನಟಿ ಕಿಯಾರಾ ಅಡ್ವಾಣಿ ಹಾಗೂ ನಟ ಸಿದ್ದಾರ್ಥ್‌ ಮಲ್ಹೋತ್ರಾ (Kiara – Sidharth Wedding) ಇದೇ ತಿಂಗಳ 6ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಅಂದ ಹಾಗೆ ಈ ಜೋಡಿಯ ಮದುವೆಗೂ ಬಾಲಿವುಡ್‌ ಬಾದ್‌ಶಾ ಶಾರುಖ್‌ ಖಾನ್‌ಗೂ ಸಂಬಂಧವಿದೆಯಂತೆ.

ಇದನ್ನೂ ಓದಿ: Sushanth Singh | ದಿನಕ್ಕೆ ಎರಡೇ ತಾಸು ನಿದ್ರೆ ಮಾಡುತ್ತಿದ್ದ ಸುಶಾಂತ್‌! ನಟಿ ಕಿಯಾರಾ ಬಿಚ್ಚಿಟ್ಟ ಸತ್ಯ

ಶಾರುಖ್‌ ಖಾನ್‌ ಅವರಿಗೆ ಈ ಹಿಂದೆ ಬಾಡಿಗಾರ್ಡ್‌ ಆಗಿ ಕೆಲಸ ಮಾಡಿದ್ದ ಯಾಸೀನ್ ಅವರನ್ನು ಕಿಯಾರಾ ಮತ್ತು ಸಿದ್ದಾರ್ಥ್‌ ಮದುವೆಗೆ ಬರುವ ಅತಿಥಿಗಳಿಗೆ ಬಾಡಿಗಾರ್ಡ್‌ ಆಗಿ ಕೆಲಸ ಮಾಡುವುದಕ್ಕೆ ಕರೆಸಿಕೊಳ್ಳಲಾಗಿದೆಯಂತೆ. ರಾಜಸ್ಥಾನದ ಜೈಸಲ್ಮೆರ್‌ನ ಪಂಚತಾರಾ ರೆಸಾರ್ಟ್‌ನಲ್ಲಿ ವಿವಾಹ ಜರುಗಲಿದ್ದು, ಅದಕ್ಕೆಂದು ಫೆ.3ರಿಂದಲೇ ಅತಿಥಿಗಳು ಆಗಮಿಸಲಿದ್ದಾರೆ. ಅವರೆಲ್ಲರಿಗೂ ಯಾಸೀನ್ ಮತ್ತು ಅವರ ತಂಡವೇ ರಕ್ಷಣೆ ನೀಡಲಿದೆ ಎಂದು ಮೂಲಗಳು ತಿಳಿಸಿವೆ.

ವಿವಾಹಕ್ಕೆ ಬರುವ ಅತಿಥಿಗಳಿಗೆಂದು ವಿಶೇಷವಾಗಿ ಡೆಸರ್ಟ್‌ ಸಫಾರಿ ಪ್ರವಾಸ, ಮೋಜಿನ ಆಟಗಳು ಏರ್ಪಡಿಸಲಾಗಿದ್ದು, ಆಹಾರ ಮಳಿಗೆಗಳನ್ನು ನಿರ್ಮಿಸಲಾಗಿದೆ. ಅತಿಥಿಗಳಿಗೆ ಉಡುಗೊರೆಯಾಗಿ ಸ್ಪಾ ವೋಚರ್‌ಗಳನ್ನೂ ನೀಡಲಾಗುತ್ತಿದೆಯಂತೆ.

ಇದನ್ನೂ ಓದಿ: ಸಿದ್ದಾರ್ಥ್​-ಕಿಯಾರಾ ಜೊತೆ ಜೊತೆಯಲಿ

ಫೆ.3ರಂದೇ ಅತಿಥಿಗಳು ವಿವಾಹ ನಡೆಯುವ ಸ್ಥಳಕ್ಕೆ ಬಂದು ಸೇರಲಿದ್ದಾರೆ. 4ರಂದು ಮೆಹಂದಿ ಕಾರ್ಯಕ್ರಮ, 5ರಂದು ಸಂಗೀತ ಕಾರ್ಯಕ್ರಮ ಮತ್ತು 6ರಂದು ಮದುವೆ ನಡೆಯಲಿದೆ. ನಂತರ ಈ ಜೋಡಿಯು ಎರಡು ಆರತಕ್ಷತೆಗಳನ್ನು ಆಯೋಜಿಸಲಿದ್ದಾರೆ. ಒಂದು ಆರತಕ್ಷತೆ ದೆಹಲಿಯಲ್ಲಿ ನಡೆದರೆ ಮತ್ತೊಂದು ಮುಂಬೈನಲ್ಲಿ ನಡೆಯಲಿದೆ.

Exit mobile version