Site icon Vistara News

Kiara Sidharth Wedding : ಜೈಸಲ್ಮೇರ್‌ಗೆ ಬಂದಿಳಿದ ಕಿಯಾರಾ, ಮಲ್ಹೋತ್ರಾ, ಮದುವೆಗೆ ಕ್ಷಣಗಣನೆ

#image_title

ಜೈಪುರ: ಬಾಲಿವುಡ್‌ ನಟ ಸಿದ್ದಾರ್ಥ್‌ ಹಾಗೂ ನಟಿ ಕಿಯಾರಾ ಅಡ್ವಾಣಿ ಹಸೆ ಮಣೆ ಏರುವುದಕ್ಕೆ (Kiara Sidharth Wedding) ಸಿದ್ಧರಾಗಿದ್ದಾರೆ. ಫೆ.6ರಂದು ರಾಜಸ್ಥಾನದ ಜೈಸಲ್ಮೇರ್‌ನಲ್ಲಿರುವ ಸೂರ್ಯಗರ್‌ ಪ್ಯಾಲೆಸ್‌ನಲ್ಲಿ ವಿವಾಹ ಕಾರ್ಯಕ್ರಮ ಜರುಗಲಿದೆ ಎಂದು ವರದಿಗಳಿವೆ. ಇನ್ನೇನು ಶ್ರೀಮತಿಯಾಗಲಿರುವ ಕಿಯಾರಾ ಶನಿವಾರ ಜೈಸಲ್ಮೇರ್‌ನ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಸಿದ್ಧಾರ್ಥ್‌ ಮಲ್ಹೋತ್ರಾ ಕೂಡ ಆಗಮಿಸಿದ್ದಾರೆ. ಅದರ ಫೋಟೋಗಳು ಎಲ್ಲೆಡೆ ಹರಿದಾಡಿವೆ.

ಇದನ್ನೂ ಓದಿ: Kiara Sidharth Wedding: ಕಿಯಾರಾ ಸಿದ್ಧಾರ್ಥ್​ ಮದುವೆಗೆ ಬರುವವರಿಗೆ ಸಿಗಲಿದೆ ಐಷಾರಾಮಿ ಸೌಕರ್ಯ

ಬಿಳಿ ಪ್ಯಾಂಟ್‌, ಬಿಳಿ ಟಾಪ್‌ ತೊಟ್ಟಿರುವ ಕಿಯಾರಾ ಕಡು ಗುಲಾಬಿ ಬಣ್ಣದ ಶಾಲನ್ನು ಧರಿಸಿದ್ದಾರೆ. ಬಂಗಾರದ ಬಣ್ಣದ ಸಣ್ಣದೊಂದು ಬ್ಯಾಗ್‌ ಅನ್ನು ಹಿಡಿದು, ವಿಮಾನ ನಿಲ್ದಾಣದಿಂದ ಹೊರಬಂದಿದ್ದಾರೆ. ಅಲ್ಲಿ ಅವರಿಗಾಗಿಯೇ ಕಾಯುತ್ತ ಕುಳಿತಿದ್ದ ಫೋಟೋಗ್ರಾಫರ್‌ಗಳತ್ತ ಕೈ ಬೀಸುತ್ತಾ ನಕ್ಕಿದ್ದಾರೆ. ನಟಿಗೆ ಖ್ಯಾತ ವಸ್ತ್ರ ವಿನ್ಯಾಸಕ ಮನೀಶ್‌ ಮಲ್ಹೋತ್ರಾ ಕೂಡ ಜೈಸಲ್ಮೇರ್‌ಗೆ ಬಂದಿಳಿದ್ದಾರೆ. ಇಬ್ಬರೂ ಒಂದೇ ಕಾರಿನಲ್ಲಿ ಮದುವೆ ನಡೆಯುವ ಸ್ಥಳದತ್ತ ಪ್ರಯಾಣ ಬೆಳೆಸಿದ್ದಾರೆ.


ಅಲ್ಲದೆ, ಕಿಯಾರಾ ಅವರ ಕುಟುಂಬವೂ ಸಹ ಜೈಸಲ್ಮೇರ್‌ನ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಈ ವಿಡಿಯೊ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಇದನ್ನೂ ಓದಿ: Kangana Ranaut : ಕಿಯಾರಾ-ಸಿದ್ಧಾರ್ಥ್​​ ಜೋಡಿ ಬಗ್ಗೆ ಇನ್​ಸ್ಟಾಗ್ರಾಂ ಸ್ಟೋರಿ ಹಾಕಿದ ಕಂಗನಾ ರಣಾವತ್‌
ಕಿಯಾರಾ ಮತ್ತು ಸಿದ್ದಾರ್ಥ್‌ ಅವರ ವಿವಾಹವು ಕಾರ್ಯಕ್ರಮವು ಫೆ.4ರಿಂದ ಫೆ.6ರವರೆಗೆ ಜರುಗಲಿದೆ. ಕಾರ್ಯಕ್ರಮಕ್ಕೆ ಕರಣ್‌ ಜೋಹರ್‌, ಶಾಹಿದ್‌ ಕಪೂರ್‌, ಮೀರಾ ರಜಪೂತ್‌ ಸೇರಿದಂತೆ ಒಟ್ಟು 100 ಗಣ್ಯರಿಗೆ ಆಹ್ವಾನಿಸಿರುವುದಾಗಿ ವರದಿಯಾಗಿದೆ. ವಿವಾಹವಾದ ನಂತರ ಜೋಡಿಯು ದೆಹಲಿ ಮತ್ತು ಮುಂಬೈನಲ್ಲಿ ಎರಡು ಪ್ರತ್ಯೇಕ ಆರತಕ್ಷತೆ ಕಾರ್ಯಕ್ರಮ ನಡೆಸಲಿವೆ ಎಂದು ವರದಿಯಿದೆ.

Exit mobile version