ಮುಂಬೈ: ಶೇರ್ಷಾ ಜೋಡಿಯಾದ ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಆಡ್ವಾಣಿ ವೈವಾಹಿಕ ಜೀವನಕ್ಕೆ ಕಾಲಿಟ್ಟು ಕೆಲ ದಿನಗಳು ಕಳೆದಿವೆ. ಆದರೆ ಇಂದಿಗೂ ಆ ಮದುವೆಯ (Kiara Sidharth Wedding) ವಿಚಾರ ಸುದ್ದಿಯಲ್ಲೇ ಇದೆ. ಮದುವೆಯ ಸಂಗೀತ ಕಾರ್ಯಕ್ರಮದಲ್ಲಿ ಕಿಯಾರಾ ತೊಟ್ಟಿದ್ದ ಲೆಹೆಂಗಾ ಇದೀಗ ಎಲ್ಲೆಡೆ ಸುದ್ದಿಯಲ್ಲಿರುವ ವಿಚಾರ.
ಇದನ್ನೂ ಓದಿ: Sidharth Kiara Wedding: ಮೆಹಂದಿ ಶಾಸ್ತ್ರದಲ್ಲಿ ಕಂಗೊಳಿಸಿದ ಸಿದ್-ಕಿಯಾರಾ
ಬೆಳ್ಳಿ ಮತ್ತು ಚಿನ್ನದ ಬಣ್ಣದ ಲೆಹೆಂಗಾವನ್ನು ಕಿಯಾರಾ ತಮ್ಮ ಸಂಗೀತ ಕಾರ್ಯಕ್ರಮಕ್ಕೆ ತೊಟ್ಟಿದ್ದರು. ಬಾಲಿವುಡ್ ಪ್ರಸಿದ್ಧ ವಸ್ತ್ರ ವಿನ್ಯಾಸಕರಾಗಿರುವ ಮನೀಶ್ ಮಲ್ಹೋತ್ರಾ ಅವರು ಈ ಲೆಹೆಂಗಾವನ್ನು ವಿನ್ಯಾಸಗೊಳಿಸಿದ್ದರು. ಬರೋಬ್ಬರಿ 98,000 ಹೊಳೆಯುವ ಸ್ವರೋವ್ಸ್ಕಿ ಹರಳುಗಳನ್ನು ಬಳಸಿ ಈ ಲೆಹೆಂಗಾ ತಯಾರಿಸಲಾಗಿತ್ತು. ಅಂದ ಹಾಗೆ ಈ ಲೆಹೆಂಗಾ ತಯಾರಿಸುವುದಕ್ಕೆ ಮನೀಶ್ ಅವರು ಬರೋಬ್ಬರಿ 4,000 ಗಂಟೆಗಳ (ಸುಮಾರು 24 ವಾರಗಳು) ಸಮಯ ತೆಗೆದುಕೊಂಡಿದ್ದಾರಂತೆ.
ಕಿಯಾರಾ ಅವರಿಗೆ ಮ್ಯಾಚ್ ಮಾಡುವಂತೆಯೇ ಸಿದ್ದಾರ್ಥ್ ಕೂಡ ಉಡುಗೆ ತೊಟ್ಟಿದ್ದರು. ಸ್ಟ್ರೈಕಿಂಗ್ ವೆಲ್ವೆಟ್ ಶೆರ್ವಾನಿಯನ್ನು ಧರಿಸಿದ್ದರು. ಕಪ್ಪು ಬಣ್ಣದ ವೆಲ್ವೆಟ್ ಬಟ್ಟೆಯ ಮೇಲೆ ಚಿನ್ನದ ಬಣ್ಣದ ಎಂಬ್ರಾಯಿಡರಿ ವರ್ಕ್ ಮಾಡಲಾಗಿತ್ತು. ಹಾಗೆಯೇ ಅದರಲ್ಲೀ ಕೂಡ ಸ್ವರೋವ್ಸ್ಕಿ ಹರಳುಗಳನ್ನು ಬಳಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ: Sidharth Kiara Reception: ಮುಂಬೈನಲ್ಲಿ ಸಿದ್ಧಾರ್ಥ್-ಕಿಯಾರಾ ಅದ್ಧೂರಿ ರಿಸೆಪ್ಶನ್, ಯಾವ ಗಣ್ಯರು ಭಾಗಿ?
ಈ ಕಾರ್ಯಕ್ರಮದ ಫೋಟೋಗಳನ್ನು ಕಿಯಾರಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. “ಆ ರಾತ್ರಿ ನಿಜಕ್ಕೂ ಅತ್ಯಂತ ವಿಶೇಷವಾಗಿತ್ತು” ಎಂದು ವಿಡಿಯೊಗೆ ಕ್ಯಾಪ್ಶನ್ ಕೊಟ್ಟಿದ್ದಾರೆ. ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.