ಮುಂಬೈ: ಬಾಲಿವುಡ್ ನಟ ಸಿದ್ದಾರ್ಥ್ ಮಲ್ಹೋತ್ರಾ ಮತ್ತು ನಟಿ ಕಿಯಾರಾ ಆಡ್ವಾಣಿ ಮಂಗಳವಾರ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ವೈವಾಹಿಕ ಜೀವನಕ್ಕೆ (Kiara Sidharth Wedding) ಕಾಲಿಡುತ್ತಿದ್ದಾರೆ. ಅಲ್ಲಿನ ಸೂರ್ಯಗರ್ ಪ್ಯಾಲೇಸ್‌ನಲ್ಲಿ ಕಳೆದ ಮೂರು ದಿನಗಳಿಂದ ಅದ್ಧೂರಿ ಕಾರ್ಯಕ್ರಮಗಳು ಜರುಗುತ್ತಿವೆ. ದಂಪತಿಗಳಾಗುತ್ತಿರುವ ಈ ಜೋಡಿಯ ಜಾತಕ ಎಷ್ಟರ ಮಟ್ಟಿಗೆ ಕೂಡಿ ಬರುತ್ತದೆ ಎನ್ನುವುದರ ಬಗ್ಗೆಯೂ ಹಲವು ಬಾಲಿವುಡ್ ಜ್ಯೋತಿಷಿಗಳು ಭವಿಷ್ಯವನ್ನು ನುಡಿದಿದ್ದಾರೆ.
ಇದನ್ನೂ ಓದಿ: Kiara Sidharth Wedding : ಮದುವೆ ಆದ ಮೇಲೆ ಕಿಯಾರಾ ಮತ್ತು ಸಿದ್ದಾರ್ಥ್ 70 ಕೋಟಿ ರೂ. ಬೆಲೆ ಬಾಳುವ ಬಂಗಲೆಗೆ ಶಿಫ್ಟ್?
ಕಿಯಾರಾ ಆಡ್ವಾಣಿ ಅವರದ್ದು ಸಿಂಹ ರಾಶಿ. ಈ ರಾಶಿಯಲ್ಲಿ ಜನಿಸಿರುವವರು ಅದರಲ್ಲೂ ಹೆಣ್ಣು ಮಕ್ಕಳು ಹೆಚ್ಚು ಬಲಶಾಲಿಗಳಾಗಿರುತ್ತಾರೆ ಹಾಗೆಯೇ ನಿಷ್ಠಾವಂತರಾಗಿರುತ್ತಾರೆ. ನಿರ್ಭೀತಿ ಮತ್ತು ಸಾಹಸಮಯ ನಡವಳಿಕೆ ಅವರಲ್ಲಿರುತ್ತದೆ. ಹೆಚ್ಚಾಗಿ ಸವಾಲುಗಳನ್ನು ಸ್ವೀಕರಿಸುವ ಗುಣ ಅವರದ್ದಾಗಿರುತ್ತದೆ. ಈ ರಾಶಿಯ ಹೆಣ್ಣು ಮಕ್ಕಳು ಅವರೊಂದಿಗೆ ತಾವೂ ಉತ್ತಮವಾಗಿಕೊಳ್ಳುವಂತಹ ಹುಡುಗನನ್ನು ಹುಡುಕುತ್ತಾರೆ ಎನ್ನುತ್ತಾರೆ ಬಾಲಿವುಡ್‌ನ ಜ್ಯೋತಿಷಿಗಳು.
ಸಿದ್ದಾರ್ಥ್ ಮಕರ ರಾಶಿಯವರು. ಈ ರಾಶಿಯವರು ಕಠಿಣ ಪರಿಶ್ರಮ ಮತ್ತು ಮಹತ್ವಾಕಾಂಕ್ಷೆಯ ಗುಣಗಳನ್ನು ಹೊಂದಿರುತ್ತಾರೆ. ಸಮರ್ಪಿತ ಮತ್ತು ಬದ್ಧ ಜೀವಿಗಳಾಗಿರುತ್ತಾರೆ. ಯಾವುದೇ ವಿಚಾರದಲ್ಲಿ ಶೇ.200ರಷ್ಟು ಮನಸ್ಸನ್ನು ಇಟ್ಟು ಕೆಲಸ ಮಾಡುತ್ತಾರೆ. ಈ ರಾಶಿಯವರು ತಮ್ಮ ಸಂಗಾತಿಯನ್ನು ದೊಡ್ಡ ಬೆಂಬಲವೆಂದು ನಂಬುತ್ತಾರೆ ಎಂದಿದ್ದಾರೆ ಬಾಲಿವುಡ್ ಜ್ಯೋತಿಷಿಗಳು.
ಇದನ್ನೂ ಓದಿ: Kiara Sidharth Wedding : ಕಿಯಾರಾ ಸಿದ್ಧಾರ್ಥ್ ಮದುವೆಯಲ್ಲಿ ಬಗೆಬಗೆಯ ತಿನಿಸುಗಳು; ಇಲ್ಲಿದೆ ನೋಡಿ ಊಟದ ಮೆನ್ಯೂ
ಈ ಎರಡು ರಾಶಿಯವರು ವಿವಾಹವಾದರೆ ಅವರ ಸಂಬಂಧವು ಪ್ರಾಮಾಣಿಕ ಹಾಗೂ ಪರಸ್ಪರ ಸಮರ್ಪಣೆಯ ಭಾವದಲ್ಲಿರುತ್ತದೆ. ಹಾಗಾಗಿ ಕಿಯಾರಾ ಮತ್ತು ಸಿದ್ದಾರ್ಥ್ ಜೋಡಿ ಹೇಳಿ ಮಾಡಿಸಿದ ಜೋಡಿ ಎಂದು ಹೇಳಲಾಗಿದೆ. ವಿವಾಹವಾದ ನಂತರ ಬಾಲಿವುಡ್‌ನಲ್ಲಿ ಈ ಜೋಡಿಯ ಭವಿಷ್ಯ ಉಜ್ವಲವಾಗಿರಲಿದೆ ಎಂದೂ ಹೇಳಲಾಗಿದೆ.