ಜೈಪುರ: ಬಾಲಿವುಡ್ನ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ಕಿಯಾರಾ ಆಡ್ವಾಣಿ ಅವರು ಮಂಗಳವಾರ ವೈವಾಹಿಕ ಜೀವನಕ್ಕೆ (Kiara Sidharth Wedding) ಕಾಲಿಡಲಿದ್ದಾರೆ. ರಾಜಸ್ಥಾನದ ಜೈಸಲ್ಮೇರ್ನಲ್ಲಿರುವ ಸೂರ್ಯಗಢ ಪ್ಯಾಲೇಸ್ನಲ್ಲಿ ವಿವಾಹ ನಡೆಯಲಿದೆ. ಅದಕ್ಕೆಂದು ಅತಿಥಿಗಳೆಲ್ಲರೂ ಈಗಾಗಲೇ ಪ್ಯಾಲೇಸ್ ಒಳಗೆ ಸೇರಿಕೊಂಡಿದ್ದಾರೆ. ಅತ್ಯಂತ ವಿಶೇಷವಾಗಿರಲಿರುವ ಈ ಮದುವೆಯ ಊಟದ ಮೆನ್ಯೂ ಇದೀಗ ಹೊರಬಿದ್ದಿದೆ.
ಇದನ್ನೂ ಓದಿ: Sidharth Kiara Wedding: ಸಿದ್ಧಾರ್ಥ್-ಕಿಯಾರಾ ಮದುವೆ ವಿಡಿಯೊ ಒಟಿಟಿಯಲ್ಲಿ ಲಭ್ಯ? ಆಪ್ತರು ಹೇಳುವುದೇನು?
ಮದುವೆಯಲ್ಲಿ ದಾಲ್ ಬಾತಿ ಕುರ್ಮಾ ಸೇರಿ ಅನೇಕ ರೀತಿಯ ಖಾದ್ಯಗಳು ಇರಲಿವೆ. ಎಂಟು ರೀತಿಯ ಕುರ್ಮಾಗಳು, ಐದು ರೀತಿಯ ಬಾತಿಗಳು ಇರಲಿವೆ. ಅವಾಧಿ ವಿಶೇಷ ಖಾದ್ಯಗಳು, ರಾಯಲ್ ರಜಪೂತ ರೀತಿಯ ಖಾದ್ಯಗಳು, ರಾಜಸ್ಥಾನಿ ಮತ್ತು ಪಂಜಾಬಿ ಖಾದ್ಯಗಳೂ ಕೂಡ ಇರಲಿವೆ. ಇಟಾಲಿಯನ್, ಚೈನೀಸ್, ಥಾಯ್ ಹಾಗೂ ಕೊರಿಯನ್ ಖಾದ್ಯಗಳಿಗೆಂದೇ ವಿಶೇಷ ಕೌಂಟರ್ಗಳಿರಲಿವೆ. 20ಕ್ಕೂ ಹೆಚ್ಚು ಬಗೆಯ ಡೆಸರ್ಟ್ಗಳೂ ಕೂಡ ಮೆನ್ಯೂನಲ್ಲಿರಲಿವೆ ಎಂದು ವರದಿಯಾಗಿದೆ.
ಇದನ್ನೂ ಓದಿ: Kiara Sid Wedding: ಕಿಯಾರಾ-ಸಿದ್ಧಾರ್ಥ ಮದುವೆ ಅಟೆಂಡ್ ಮಾಡಲಿದ್ದಾರೆ ಗೆಳೆಯ ರೋಹಿತ್ ಶೆಟ್ಟಿ
ಕಿಯಾರಾ – ಸಿದ್ಧಾರ್ಥ್ ಮದುವೆಗೆ ಬರುತ್ತಿರುವ ಅತಿಥಿಗಳಿಗೆ ವಿಶೇಷ ರೀತಿಯಲ್ಲಿ ಸೌಕರ್ಯಗಳನ್ನು ಮಾಡಿಕೊಡಲಾಗುತ್ತಿದೆ. ಅವರಿಗೆಂದೇ ಬಳೆ, ದುಪ್ಪಟ್ಟ, ಸೀರೆಯ ಸ್ಟಾಲ್, ಮರದ ಹ್ಯಾಂಡಿಕ್ರಾಫ್ಟ್ ವಸ್ತುಗಳ ಸಂಗ್ರಹಗಳನ್ನೂ ಇಡಲಾಗಿದೆ ಎನ್ನುವ ವರದಿಯಿದೆ. ಹಾಗೆಯೇ ಜಾನಪದ ಗಾಯಕರು ಮತ್ತು ನೃತ್ಯಗಾರರಿಂದ ಅತಿಥಿಗಳಿಗೆ ಮನೋರಂಜನೆ ಕೊಡಿಸಲೂ ವ್ಯವಸ್ಥೆ ಮಾಡಲಾಗಿದೆ.