Site icon Vistara News

Kiccha 47: ದೀಪಾವಳಿಗೆ ಬರ್ತಿದೆ ಕಿಚ್ಚ 47 ಸಿನಿಮಾ ಟೀಸರ್‌?

Kiccha 47 movie

ಬೆಂಗಳೂರು: ಕಿಚ್ಚ ಸುದೀಪ್‌ ಅವರು ಮ್ಯಾಕ್ಸ್‌ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಜತೆಗೆ ಕಿಚ್ಚ 47 ಸಿನಿಮಾ ಬಗ್ಗೆ ಹೊಸ ಹೊಸ ಅಪ್‌ಡೇಟ್‌ಗಳು ಹೊರ ಬರುತ್ತಿವೆ. ಕಿಚ್ಚ 47 ಟೀಸರ್ ಮೇಕಿಂಗ್ ವಿಡಿಯೋ ವೈರಲ್ ಆಗುತ್ತಿದೆ. ದೀಪಾವಳಿಗೆ ಕಿಚ್ಚ 47 ಟೀಸರ್‌ ಔಟ್‌ ಆಗಲಿದೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

ಕಿಚ್ಚ47 ಚಿತ್ರವನ್ನು ತಮಿಳಿನ ಚೇರನ್ ನಿರ್ದೇಶನ ಮಾಡಲಿದ್ದಾರೆ. “ನಮ್ಮ ಕಿಚ್ಚ ತೆರೆ ಹಿಂದೆ ಎಬ್ಬಿಸುವ ಹಾವಳಿ! ಕಿಚ್ಚ ಸುದೀಪ್ ಅಣ್ಣನ ಬ್ಯಾಟಲ್ ಆಫ್ ಬ್ರೀತ್ಸ್ ಪೋಸ್ಟರ್ ಬಂದು ಜಾಸ್ತಿ ದಿನಾ ಆಗಿಲ್ಲ. ಇವಾಗ್ ನೋಡಿದ್ರೆ ಒಳ್ಳೆ ಜಬರ್ದಸ್ತ್ ಆಕ್ಷನ್ ಸಿನಿಮಾ ತಾರಾ ಕಾಣ್ತಿದ್ಯಲ್ಲಾ ಗುರು!” ಎಂದು ಶೀರ್ಷಿಕೆ ನೀಡಿ ಕಿಚ್ಚನ ಫ್ಯಾನ್ಸ್‌ ಪೇಜ್‌ ವಿಡಿಯೋ ಹಂಚಿಕೊಂಡಿದೆ. ಮೇಕಿಂಗ್ ವಿಡಿಯೋದಲ್ಲಿ ಗಮನ ಸೆಳೆಯುತ್ತಿರುವುದು ಡಮ್ಮಿ ಕುದುರೆ.

ಇದನ್ನೂ ಓದಿ: BBK Season 10: ಇಡೀ ವಾರ ಕಂಡಿದ್ದು ನಮ್ರತಾ ಕೈಯಲ್ಲಿ ಇರುವ ಚಮಚ ಮಾತ್ರ; ಕಿಚ್ಚ ಸುದೀಪ್‌!

ಕಿಚ್ಚ ಸುದೀಪ್ ಈ ವಿಡಿಯೋದಲ್ಲಿ ಡಮ್ಮಿ ಕುದುರೆ ಮೇಲೆ ಸವಾರಿ ಮಾಡುತ್ತಿದ್ದಾರೆ. ಈ ಟೀಸರ್ ಮೇಕಿಂಗ್ ಗ್ರೀನ್ ಮ್ಯಾಟ್ ಅಲ್ಲಿ ಶೂಟ್ ಮಾಡುತ್ತಿರುವ ಕಾರಣ ಡಮ್ಮಿ ಕುದುರೆ ಬಳಸಲಾಗುತ್ತಿದೆ.ಇನ್ನು ಕೆಲವರು ಇದು ‘ಪ್ರೊ ಕಬ್ಬಡಿ’ ಟೂರ್ನಿ ಪ್ರೋಮೊ ಶೂಟ್ ಎನ್ನುತ್ತಿದ್ದಾರೆ.

K46 ಸಿನಿಮಾ ಕ್ಲೈಮ್ಯಾಕ್ಸ್‌ಗೆ ಜಬರ್ದಸ್ತ್ ಬಾಡಿ ಬೆಳೆಸಿದ ಸುದೀಪ್

ಜಿಮ್‌, ವರ್ಕೌಟ್‌ ಎಂದರೆ ದೂರವೇ ಇರುತ್ತಿದ್ದ ಕಿಚ್ಚ ಸುದೀಪ್‌, ಪೈಲ್ವಾನ್‌ ಸಿನಿಮಾಗಾಗಿ ದೇಹವನ್ನು ಕಟುಮಸ್ತಾಗಿ ಬೆಳೆಸಿಕೊಂಡಿದ್ದರು. ಆ ಮೂಲಕ ಅಭಿಮಾನಿಗಳಿಗೆ ಸುದೀಪ್‌ (Kichcha Sudeep) ಅಚ್ಚರಿ ನೀಡಿದ್ದರು. ಈಗ ಕೆ 46 (K46 Movie) (ಮ್ಯಾಕ್ಸ್‌) ಸಿನಿಮಾದ ಕ್ಲೈಮ್ಯಾಕ್ಸ್‌ಗಾಗಿಯೂ ಕಿಚ್ಚ ಸುದೀಪ್‌ ಅವರು ಅವಿರತವಾಗಿ ವರ್ಕೌಟ್‌ ಮಾಡುವ ಮೂಲಕ ಭರ್ಜರಿಯಾಗಿಯೇ ದೇಹವನ್ನು ಅಣಿಗೊಳಿಸಿದ್ದಾರೆ. ಸುದೀಪ್‌ ಅವರು ತಮ್ಮ ಕಟ್ಟುಮಸ್ತು ದೇಹದ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

ಈಗಾಗಲೇ ಕೆ 46 ಸಿನಿಮಾದ ಟೀಸರ್‌ ಬಿಡುಗಡೆಗೊಂಡಿದೆ. ʻಕಿಚ್ಚ 46ʼ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರು ರಣರಣ ರಕ್ಕಸನಾಗಿ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಟೀಸರ್‌ನಲ್ಲಿ ಕಿಚ್ಚನ ಮಾಸ್‌ ಡೈಲಾಗ್‌ ಹೈಲೈಟ್‌ ಆಗಿದೆ. ʻಯುದ್ಧ ಹುಟ್ಟಾಕೋರ್‌ ಕಂಡ್ರು ನಂಗಗಾಗಲ್ಲ. ಯುದ್ಧಕ್ಕೆ ಹೆದರ್‌ಕೊಂಡು ಓಡೋಗರ್‌ ಕಂಡ್ರು ನಂಗಾಗಲ್ಲ. ಅಖಾಡಕ್ಕೆ ಇಳಿದು, ಎದುರಾಳಿಗಳ ಎದೆ ಬಗ್ದು ರಕ್ತ ಚೆಲ್ಲಾಡಿ, ಆ ರಕ್ತ ಸುರ್ಸ್‌ಕೊಂಡು ಓಡೋಗದನ್ನ ನೋಡೋನು ನಾನುʼʼ ಎಂಬ ಖಡಕ್‌ ಡೈಲಾಗ್‌ ಹೊಡೆದಿದ್ದಾರೆ ಕಿಚ್ಚ. ಇದೀಗ ಈ ಡೈಲಾಗ್‌ ಟ್ರೆಂಡ್‌ ಆಗುತ್ತಿದೆ.

Exit mobile version