Site icon Vistara News

Kiccha Sudeep : ಕಿಚ್ಚ ಸಿನಿ ಜರ್ನಿಗೆ 27 ವರ್ಷ; ಭಾವುಕ ಸಂದೇಶ ಹಂಚಿಕೊಂಡ ಅಭಿನಯ ಚಕ್ರವರ್ತಿ

#image_title

ಬೆಂಗಳೂರು: ಚಂದನವನದ ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್‌ (Kiccha Sudeep) ಸಿನಿ ರಂಗಕ್ಕೆ ಕಾಲಿಟ್ಟು ಇಂದಿಗೆ 27 ವರ್ಷಗಳು ಕಳೆದಿವೆ. ಹತ್ತಿರತ್ತಿರ ಮೂರು ದಶಕಗಳ ಕಾಲ ಅಭಿಮಾನಿಗಳನ್ನು ಮನರಂಜಿಸಿ, ಅವರ ಪ್ರೀತಿಯನ್ನು ಗಳಿಸಿಕೊಂಡ ಸುದೀಪ್‌, ತಮ್ಮ ಅದ್ಭುತ ಪ್ರಯಾಣದ ಬಗ್ಗೆ ಭಾವುಕ ಮಾತುಗಳನ್ನಾಡಿದ್ದಾರೆ. ಪ್ರೀತಿ ನೀಡಿದ ಅಭಿಮಾನಿಗಳಿಗೆ ಸಂದೇಶದ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.

ಇದನ್ನೂ ಓದಿ: Vikrant Rona | ಕಿಚ್ಚ ಸುದೀಪ್‌ ನಟನೆಯ ವಿಕ್ರಾಂತ್‌ ರೋಣ ಆಸ್ಕರ್‌ ಪ್ರಶಸ್ತಿ ಸ್ಪರ್ಧೆಗೆ ನಾಮಕರಣ
“ಇದು ಖಂಡಿತವಾಗಿಯೂ ಸ್ಮರಣೀಯ ಪ್ರಯಾಣ. ಹಲವಾರು ಅದ್ಭುತ ಪ್ರತಿಭೆಗಳನ್ನು ಹೊಂದಿರುವ ಈ ಚಿತ್ರರಂಗದಲ್ಲಿ 27 ವರ್ಷಗಳ ಕಾಲ ಯಶಸ್ವಿಯಾಗಿ ಉಳಿಯಲು ಸಾಧ್ಯವಾಗಿದ್ದು ನನ್ನ ಅದೃಷ್ಟ. ನನ್ನನ್ನು ಇನ್ನಷ್ಟು ಉತ್ತಮವಾಗಿಸಿಕೊಳ್ಳಲು ಸ್ಫೂರ್ತಿ ತುಂಬಿದ್ದಕ್ಕಾಗಿ ಆ ಎಲ್ಲ ಪ್ರತಿಭೆಗಳಿಗೆ ನನ್ನ ಧನ್ಯವಾದಗಳು” ಎಂದು ಕಿಚ್ಚ ಚಂದನವನದ ಕಲಾವಿದರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಹಾಗೆಯೇ, “ಪ್ರತಿ ಬಾರಿಯೂ ನನ್ನ ಬೆನ್ನ ಹಿಂದೆಯೇ ಇದ್ದು ಬೆಂಬಲಿಸಿದ್ದಕ್ಕಾಗಿ ನಿಮಗೆಲ್ಲರಿಗೂ ಧನ್ಯವಾದ ಹೇಳುತ್ತೇನೆ. ನಿಮ್ಮಿಂದ ನನಗೆ ಆಶೀರ್ವಾದ ಮತ್ತು ಪ್ರೀತಿ ಸಿಕ್ಕಿದೆ. ನನಗೆ ಅವಕಾಶಗಳನ್ನು ನೀಡಿದ ಕೆಎಫ್‌ಐಗೆ ಧನ್ಯವಾದ. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಹಿಂದಿ, ತಮಿಳು ಮತ್ತು ತೆಲುಗು ಬಂಧುಗಳಿಗೆ ಧನ್ಯವಾದ ಹೇಳದಿದ್ದರೆ ಅದು ಅಪೂರ್ಣವಾಗುತ್ತದೆ” ಎಂದು ಹೇಳಿದ್ದಾರೆ.


ಕಿಚ್ಚ ಸುದೀಪ್‌ ಮೊದಲಿಗೆ 1997ರಲ್ಲಿ ಬಿಡುಗಡೆಯಾದ ತಾಯವ್ವ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಆ ಸಿನಿಮಾಕ್ಕೆಂದು ಅವರು ಜನವರಿ 31ರಂದು ಮೊದಲನೆಯದಾಗಿ ಬಣ್ಣ ಹಚ್ಚಿ, ಕ್ಯಾಮರಾ ಮುಂದೆ ನಿಂತಿದ್ದರು. ಈಗಾಗಲೇ 55ಕ್ಕೂ ಅಧಿಕ ಸಿನಿಮಾಗಳಿಗೆ ಬಣ್ಣ ಹಚ್ಚಿರುವ ಇವರು ಇದೀಗ ರಿಯಲ್‌ ಸ್ಟಾರ್‌ ಉಪೇಂದ್ರ ಅವರ ʼಕಬ್ಜʼ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.


ವಿಶೇಷ ಕ್ಯಾಲೆಂಡರ್‌ ಬಿಡುಗಡೆ:

ಕ್ಯಾಲೆಂಡರ್‌ ಬಿಡುಗಡೆ ಮಾಡಿದ ಶಿವರಾಜ್‌ ಕುಮಾರ್


ಸುದೀಪ್‌ ಸಿನಿ ಜರ್ನಿಗೆ 27 ವರ್ಷಗಳ ತುಂಬಿರುವ ಹಿನ್ನೆಲೆ ಅಭಿಮಾನಿಗಳು ವಿಶೇಷ ಕ್ಯಾಲೆಂಡರ್‌ ಸಿದ್ದಪಡಿಸಿದ್ದು ಅದನ್ನು ಹ್ಯಾಟ್ರಿಕ್‌ ಹೀರೋ ಶಿವಣ್ಣ ಅವರ ಕೈಲಿ ಬಿಡುಗಡೆ ಮಾಡಿಸಲಾಗಿದೆ. ಮಾಲೂರು ತಾಲೂಕಿನ ಕಿಚ್ಚ ಸುದೀಪ್‌ ಅಭಿಮಾನಿಗಳ ಸಂಘವು ಈ ಕ್ಯಾಲೆಂಡರ್‌ ಅನ್ನು ತಯಾರಿಸಿದೆ.

Exit mobile version