Site icon Vistara News

Kichcha Sudeep: ಕಿಚ್ಚನ 50ನೇ ಸಿನಿಮಾಗೆ ರಿಷಬ್‌ ಶೆಟ್ಟಿ ಆ್ಯಕ್ಷನ್ ಕಟ್?

Kichcha Sudeep Rishab shetty

ಕಿಚ್ಚ ಸುದೀಪ್‌ (Kichcha Sudeep) ಅವರ ಕೈಯಲ್ಲಿ ಈಗಾಗಲೇ ಹಲವಾರು ಸಿನಿಮಾಗಳಿವೆ. ಕಿಚ್ಚ 46 ಸಿನಿಮಾ ಆಗಾಗ ಅಪ್‌ಡೇಟ್‌ ಹಂಚಿಕೊಳ್ಳುತ್ತಲೇ ಇರುತ್ತಾರೆ. 47ನೇ ಸಿನಿಮಾಗೆ ಕಿಚ್ಚ ಸುದೀಪ್ ಆ್ಯಕ್ಷನ್ ಕಟ್ ಹೇಳಿದ್ದ ಮೊದಲ ಸಿನಿಮಾ ಮೈ ಆಟೋಗ್ರಾಫ್ ಚಿತ್ರದ ನಿರ್ದೇಶಕ ಚೇರನ್ ಜತೆ ಕೈ ಜೋಡಿಸುತ್ತಿದ್ದಾರೆ ಎಂದು ವರದಿಯಾಗಿದೆ. 49ನೇ ಸಿನಿಮಾ ಕಬ್ಜ ಚಂದ್ರು ಡೈರೆಕ್ಷನ್‌ನಲ್ಲಿ ಸಿನಿಮಾ ಶುರುವಾಗಲಿದೆ. ಆ ಸಿನಿಮಾಗೆ ವಿಜಯೇಂದ್ರ ಪ್ರಸಾದ್ ಕಥೆ-ಚಿತ್ರಕಥೆ ಇರಲಿದೆ . ಇದಾದ ಬಳಿಕ 50ನೇ ಚಿತ್ರದ ಪ್ಲ್ಯಾನ್ ಈಗಾಗಲೇ ಸಿದ್ಧವಾಗುತ್ತಿದೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ಕಿಚ್ಚ ಸುದೀಪ್‌ ಅವರ 50ನೇ ಸಿನಿಮಾ ಆ್ಯಕ್ಷನ್ ಕಟ್‌ ಹೇಳಲಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ರಿಷಬ್‌ ಆಗಲಿ ಕಿಚ್ಚ ಸುದೀಪ್‌ ಆಗಲಿ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.

ನಿರ್ದೇಶಕ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್​ ಅವರು ಚಿತ್ರರಂಗದಲ್ಲಿ ಬಹುಬೇಡಿಕೆಯ ಕಥೆಗಾರನಾಗಿ ಗುರುತಿಸಿಕೊಂಡಿದ್ದಾರೆ. ಆರ್​. ಚಂದ್ರು ನಿರ್ದೇಶಿಸಿದ ‘ಕಬ್ಜ’ ಸಿನಿಮಾದಲ್ಲೂ ಸುದೀಪ್​ ಅವರು ಒಂದು ಪಾತ್ರ ಮಾಡಿದ್ದರು. ಈಗ ಅವರಿಬ್ಬರು ಮತ್ತೆ ಒಟ್ಟಾಗಿ ಸಿನಿಮಾ ಮಾಡಲು ಸಜ್ಜಾಗುತ್ತಿದ್ದಾರೆ. ಸುದೀಪ್​ ಅವರ ಸಂಪೂರ್ಣ ಗಮನ ಈಗ ‘Kichcha 46’ ಸಿನಿಮಾದ ಮೇಲಿದೆ. ಆ ಸಿನಿಮಾದ ಶೀರ್ಷಿಕೆ ಏನು ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಬರ್ತ್​ಡೇ ಪ್ರಯುಕ್ತ ಟೈಟಲ್​ ರಿವೀಲ್​ ಆಗಲಿದೆ.

ಇತ್ತೀಚಿನ ಸುದ್ದಿ ಏನೆಂದರೆ ಗದರ್ -2 ನಟಿ ಸಿಮ್ರತ್ ಕೌರ್ ( Simrat Kaur) ಕಿಚ್ಚ 46 ಸಿನಿಮಾದಲ್ಲಿ ಕಿಚ್ಚ ಸುದೀಪ್ ಜತೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಕಿಚ್ಚ 46 ಸಿನಿಮಾದಲ್ಲಿ ಸುದೀಪ್ ಪೊಲೀಸ್ ಪಾತ್ರವನ್ನು ನಿಭಾಯಿಸಲಿದ್ದಾರೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲದೇ ಥ್ರಿಲ್ಲರ್ ಸಿನಿಮಾ ಎಂದು ಸಾಕಷ್ಟು ಊಹಾಪೋಹಗಳಿವೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಸುದ್ದಿ ಚಿತ್ರತಂಡ ಹೇಳಿಕೊಂಡಿಲ್ಲ.ಈಗಾಗಲೇ ಕಿಚ್ಚನ ಕೈಯಲ್ಲಿ ಮೂರು ಸಿನಿಮಾಗಳಿವೆ.

ಇದನ್ನೂ ಓದಿ; Kichcha Sudeep birthday: ಪ್ರಶ್ನೆಗಳಿಗೆ ಉತ್ತರ ಸಿಕ್ಕರೆ ಒಂದಾಗ್ತೀವಿ! ದರ್ಶನ್‌ ಬಗ್ಗೆ ಮನಬಿಚ್ಚಿ ಮಾತನಾಡಿದ ಕಿಚ್ಚ ಸುದೀಪ್!‌

ವರದಿ ಪ್ರಕಾರ ಮೊದಲು ಸಿನಿಮಾವಾಗಿ ‘ಬಿಲ್ಲ ರಂಗ ಬಾಷಾ’ (Billa Ranga Basha) ಮೂಡಿ ಬರಲಿದೆ. ಈ ಸಿನಿಮಾಗೆ ಅನೂಪ್ ಭಂಡಾರಿ ನಿರ್ದೇಶನ ಮಾಡಲಿದ್ದು, ವಿಕ್ರಾಂತ್ ರೋಣದ ನಂತರ ಈ ಜೋಡಿ ಮತ್ತೆ ಒಂದಾಗುತ್ತಿದೆ ಎನ್ನಲಾಗಿದೆ. ಭಾರಿ ಬಜೆಟ್ ಚಿತ್ರ ಇದಾಗಿದ್ದು, ಕನ್ನಡ ಮತ್ತು ತಮಿಳಿನಲ್ಲಿ ಈ ಸಿನಿಮಾ ಏಕಕಾಲಕ್ಕೆ ರೆಡಿಯಾಗಲಿದೆ. ಅರ್ಜುನ್ ಜನ್ಯ ಬದಲಾಗಿ ಈ ಚಿತ್ರಕ್ಕೆ ಹ್ಯಾರೀಸ್ ಜೈರಾಜ್ ಎನ್ನುವವರು ಸಂಗೀತ ಸಂಯೋಜನೆ ಮಾಡಲಿದ್ದಾರೆ.

Exit mobile version