ಬೆಂಗಳೂರು: ವಿಜಯ್ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನಾ ಅಗಲಿಕೆ ಹಿನ್ನೆಲೆಯಲ್ಲಿ ಸಾಂತ್ವಾನ ಹೇಳಲು ವಿಜಯ ಮನೆಗೆ ಸುದೀಪ್, ಪ್ರಿಯಾ ದಂಪತಿ ಬಂದಿದ್ದರು. ಈ ವೇಳೆ, ವಿಜಯ್ ನಿವಾಸದಲ್ಲಿ ಶ್ರೀಮುರಳಿ, ಕೆಆರ್ ಜಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜು ಕೂಡ ಇದ್ದರು. ಸ್ಪಂದನಾ ನಿಧನರಾದಾಗ ಕಾರಣಾಂತರಗಳಿಂದ ಸುದೀಪ್ ಆಗಮಿಸಲು ಆಗಿರಲಿಲ್ಲ. ಹೀಗಾಗಿ ದಂಪತಿ ವಿಜಯ್ ಮನೆಗೆ ಆಗಮಿಸಿ, ಸಾಂತ್ವನ ಹೇಳಿ್ದದಾರೆ.
ಶ್ರೀಮುರಳಿ ಮತ್ತು ವಿಜಯ ಭೇಟಿ ಮಾಡಿ, ಸ್ಪಂದನಾ ಕುರಿತು ಸಾಂತ್ವನ ಹೇಳಿದ್ದಾರೆ. ವಿಜಯ-ಸ್ಪಂದನಾ ಪ್ರೀತಿಸಿ ಗುರುಹಿರಿಯರ ಸಮ್ಮತಿ ಪಡೆದು ಮಾದುವೆಯಾಗಿದ್ದರು. ಈ ಜೋಡಿಗೆ ಪುತ್ರ ಶೌರ್ಯ ಜನಿಸಿದರು.
ನೋವಿನಲ್ಲಿ ಇದ್ದರೂ ವಿಜಯ್ ಅವರು ಇದೀಗ ಮತ್ತೆ ತಮ್ಮ ಕೆಲಸಕ್ಕೆ ಮರಳಿದ್ದಾರೆ. ಈಗಾಗಲೇ ಅವರ ಕದ್ದ ಚಿತ್ರ (Kadda Chitra Cinema) ಸಿನಿಮಾ ಪ್ರಮೋಷನ್‌ನಲ್ಲಿಯೂ ತೊಡಗಿದ್ದಾರೆ. ಜತೆಗೆ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 7’ (Dance Karnataka Dance7) ಜಡ್ಜ್ ಸ್ಥಾನದಲ್ಲಿ ಅವರು ಮತ್ತೆ ಕಾಣಿಸಿಕೊಂಡಿದ್ದಾರೆ. ಅವರನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ʻʻಸಮಾಜಕ್ಕೆ ಕಲಿಸುವ ನಿಮ್ಮ ನಡವಳಿಕೆ ನಮಗೆಲ್ಲ ಮಾದರಿʼʼಎಂದು ಅವರ ಅಭಿಮಾನಿಗಳು ವಿಜಯ್ ಅವರನ್ನು ಹೊಗಳುತ್ತಿದ್ದಾರೆ.
ವಿಸ್ತಾರದೊಂದಿಗೆ ವಿಜಯ್ ರಾಘವೇಂದ್ರ ಅವರು ಸ್ಪಂದನಾ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡರು. ಮಗ ಶೌರ್ಯ ಕೂಡ ಈಗ ಸುಧಾರಿಸಿದ್ದಾನೆ. ಅವನು ಅಮ್ಮನ ರೀತಿ ಗಟ್ಟಿ. ಮಗನ ಎದುರು ನಾನು ಧೈರ್ಯದಿಂದ ಇರಬೇಕು. ಒಬ್ಬನೇ ಇದ್ದಾಗ ಅತ್ತು ಬಿಡುತ್ತೇನೆ. ಆದರೆ ಮಗನಿಗೆ ಅಮ್ಮ ಇಲ್ಲದಿರುವುದು ಬಹಳ ಕಷ್ಟ ಆಗುತ್ತಿದೆ. ಆದರೆ ಸುಧಾರಿಸಿದ್ದಾನೆʼʼಎಂದು ಹೇಳಿಕೊಂಡರು.
ಇದನ್ನೂ ಓದಿ: Vijay Raghavendra: ʻಡಿಕೆಡಿʼಯಲ್ಲಿ ವಿಜಯ್ ರಾಘವೇಂದ್ರ; ʻಚಿನ್ನಾರಿ ಮುತ್ತ ನಮಗೆಲ್ಲ ಮಾದರಿʼಅಂದ್ರು ಫ್ಯಾನ್ಸ್!
ವಿಜಯ್ ರಾಘವೇಂದ್ರ (Vijay Raghavendra) ನಾಯಕನಾಗಿ ನಟಿಸಿರುವ ‘ಕದ್ದ ಚಿತ್ರ’ (Kadda Chitra) ಸಿನಿಮಾ ವರಮಹಾಲಕ್ಷ್ಮಿ ಹಬ್ಬಕ್ಕೆ ರಿಲೀಸ್ ಆಗಬೇಕಿತ್ತು. ಆದರೆ ವಿಜಯ್ ಅವರ ಪತ್ನಿ ಸ್ಪಂದನಾ ಹಠಾತ್ ನಿಧನದಿಂದಾಗಿ ಸಿನಿಮಾ ಮುಂದೂಡಲಾಗಿತ್ತು. ಈಗಾಗಲೇ ‘ಕದ್ದ ಚಿತ್ರ’ ಟ್ರೈಲರ್ (Kadda Chitra Trailer Release) ರಿಲೀಸ್ ಆಗಿದೆ. ಇದೀಗ ಚಿತ್ರತಂಡ ಸಿನಿಮಾ ಬಿಡುಗಡೆ ದಿನಾಂಕವನ್ನು ಅನೌನ್ಸ್ ಮಾಡಿದೆ. ಇದೇ ಸೆಪ್ಟೆಂಬರ್ 8ರಂದು ರಾಜ್ಯಾದ್ಯಂತ ʻಕದ್ದ ಚಿತ್ರʼ ಸಿನಿಮಾ ತೆರೆ ಕಾಣಲಿದೆ.