Site icon Vistara News

Kiccha Sudeep: ಅಭಿಷೇಕ್ ಅಂಬರೀಷ್​ಗೆ ಭರ್ಜರಿ ಗಿಫ್ಟ್‌ ಕೊಟ್ಟ ಕಿಚ್ಚ ಸುದೀಪ್‌!

Kichcha Sudeep at Abhishek Ambareesh Wedding

ಬೆಂಗಳೂರು; ಯಂಗ್‌ ರೆಬೆಲ್ ಸ್ಟಾರ್‌ ಅಭಿಷೇಕ್ ಅಂಬರೀಷ್‌ (Abhishek Ambareesh Wedding) ) ಹಾಗೂ ಅವಿವ ಬಿಡಪ ಜೂನ್‌ 5ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕಿಚ್ಚ ಸುದೀಪ್ (Kiccha Sudeep) ಹಾಗೂ ಅಂಬರೀಷ್ ಮಧ್ಯೆ ಒಳ್ಳೆಯ ಒಡನಾಟ ಇತ್ತು. ಸುದೀಪ್ ಅವರ ಆಗಮನದಿಂದ ಮದುವೆಯ ಕಳೆ ಹೆಚ್ಚಿತ್ತು. ಮಂಟಪದಲ್ಲಿ ಅಕ್ಷತೆ ಹಾಕಿ ನವ ಜೋಡಿಗೆ ಶುಭಕೋರಿದ ಸುದೀಪ್ ದಂಪತಿ, ಅಭಿಷೇಕ್-ಅವಿವಾಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಚಿನ್ನದ ಸರವನ್ನು ಸುದೀಪ್ ಉಡುಗೊರೆಯಾಗಿ ನೀಡಿದ್ದಾರೆ.

ಕರ್ಕಾಟಕ ಲಗ್ನದಲ್ಲಿ (9:30-10:30)ಜೋಡಿ ಹಸೆಮಣೆ ಏರಿತು. ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದ ಕಲ್ಯಾಣಮಂಟಪದಲ್ಲಿ ಮದುವೆ ಗೌಡರ ಸಂಪ್ರದಾಯದಲ್ಲಿ ಅದ್ಧೂರಿಯಾಗಿ ನೆರವೇರಿತು. ಅಭಿಷೇಕ್ ಮದುವೆಗೆ ಸುದೀಪ್ ಗ್ರ್ಯಾಂಡ್ ಆಗಿಯೇ ಎಂಟ್ರಿ ಕೊಟ್ಟರು. ಸುದೀಪ್ ಜತೆ ಪತ್ನಿ ಪ್ರಿಯಾ ಸುದೀಪ್ ಹಾಗೂ ಸಾನ್ವಿ ಸುದೀಪ್ ಕೂಡ ಆಗಮಿಸಿ ಅಭಿ-ಅವಿವಾಗೆ ಶುಭಕೋರಿದರು. ಮಂಟಪದಲ್ಲಿ ಅಕ್ಷತೆ ಹಾಕಿ ನವ ಜೋಡಿಗೆ ಶುಭಕೋರಿದ ಸುದೀಪ್ ದಂಪತಿ, ಅಭಿಷೇಕ್-ಅವಿವಾಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಚಿನ್ನದ ಸರವನ್ನು ಸುದೀಪ್ ಉಡುಗೊರೆಯಾಗಿ ನೀಡಿದ್ದಾರೆ.

ಇದನ್ನೂ ಓದಿ: Kiccha Sudeep: ಕನ್ನಡಿಗರ ಹೃದಯ ಗೆದ್ದ ʻ2018ʼ ಚಿತ್ರ; ಮಲಯಾಳಂ ಸಿನಿಮಾಗೆ ಕಿಚ್ಚ ಸುದೀಪ್ ಫುಲ್ ಫಿದಾ

ಜೂನ್ 7ಕ್ಕೆ ಬೆಂಗಳೂರಿನ ಪ್ಯಾಲೇಸ್​ ಗ್ರೌಂಡ್​ನ ತ್ರಿಪುರ ವಾಸಿನಿಯಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ. ಖ್ಯಾತ ಫ್ಯಾಷನ್​ ಡಿಸೈನರ್​ ಪ್ರಸಾದ್​ ಬಿಡಪ ಅವರ ಪುತ್ರಿ ಆಗಿರುವ ಅವಿವ ಬಿಡಪ (Aviva Bidapa) ಹಾಗೂ ಅಭಿಷೇಕ್​ ಅಂಬರೀಷ್​ ನಡುವೆ ಇತ್ತೀಚಿನ ವರ್ಷಗಳಲ್ಲಿ ಪರಿಚಯ ಬೆಳೆದಿತ್ತು. ಪರಿಚಯ ಪ್ರೀತಿಗೆ ತಿರುಗಿತು. ಕುಟುಂಬದ ಒಪ್ಪಿಗೆ ಪಡೆದು ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡರು. ಈಗ ಇಬ್ಬರೂ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

Exit mobile version