Site icon Vistara News

Kichcha Sudeep birthday: ಪ್ರಶ್ನೆಗಳಿಗೆ ಉತ್ತರ ಸಿಕ್ಕರೆ ಒಂದಾಗ್ತೀವಿ! ದರ್ಶನ್‌ ಬಗ್ಗೆ ಮನಬಿಚ್ಚಿ ಮಾತನಾಡಿದ ಕಿಚ್ಚ ಸುದೀಪ್!‌

sudeep darshan

ಬೆಂಗಳೂರು: ಇಂದು ಅಭಿಮಾನಿಗಳ ನಡುವೆ ಅದ್ಧೂರಿಯ ಜನ್ಮದಿನ (Kichcha Sudeep birthday) ಆಚರಿಸಿಕೊಳ್ಳುತ್ತಿರುವ ಅಭಿನಯ ಚಕ್ರವರ್ತಿ, ನಟ ಕಿಚ್ಚ ಸುದೀಪ್‌, ಸಹನಟ ದರ್ಶನ್‌ (Darshan) ಹಾಗೂ ತಮ್ಮ ಸಂಬಂಧದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ದರ್ಶನ್ ಒಬ್ಬ ದೊಡ್ಡ ಕಲಾವಿದ. ದರ್ಶನ್ ಹಾಗೂ ಮಾಧ್ಯಮಗಳು ಒಂದಾಗಿದ್ದು ಒಳ್ಳೆಯ ವಿಷಯ. ನಂಗೆ ಅವರ ಮೇಲೆ ಕೋಪ ಇಲ್ಲ. ನಾವಿಬ್ಬರೂ ಒಂದಾಗುವುದಕ್ಕೆ ಸ್ವಲ್ಪ ಸಮಯ ಬೇಕು. ನಾವಿಬ್ಬರೂ ಪರಸ್ಪರ ಗೌರವ ಕೊಡ್ತೀವಿ ಎಂದು ಹೇಳಿದ್ದಾರೆ ಸುದೀಪ್.‌

ಇತ್ತೀಚೆಗೆ ಸುದೀಪ್ ಮತ್ತು ದರ್ಶನ್ ಒಂದೇ ವೇದಿಕೆ ಮೇಲೆ 6 ವರ್ಷದ ನಂತರ ಕಾಣಿಸಿಕೊಂಡಿದ್ದರು. ಈ ಕುರಿತು ತಮ್ಮ ಹುಟ್ಟುಹಬ್ಬದಂದು ಸುದೀಪ್‌ ರಿಯಾಕ್ಟ್ ಮಾಡಿದ್ದಾರೆ. ದರ್ಶನ್ ಕುರಿತು ಖುಷಿಯಿಂದಲೇ ಮಾತನಾಡಿದ್ದಾರೆ.

ಮಾಧ್ಯಮಗಳಲ್ಲಿ ಈ ವಿಷಯ ಸುದ್ದಿ ಆದಾಗ ಖುಷಿ ತಂದಿತ್ತು. ದರ್ಶನ್ ದೊಡ್ಡ ನಟ. ನಾವು ಕಿತ್ತಾಡಿಕೊಂಡಿಲ್ಲ. ನನಗೆ ದರ್ಶನ್ ಮೇಲೆ ಕೋಪವಿಲ್ಲ. ಕಿತ್ತಾಡಿಕೊಂಡ್ರು, ಜಗಳ ಮಾಡಿಕೊಂಡ್ರು ಅನ್ನುವುದು ಕಲ್ಪನೆ ಅಷ್ಟೇ. ಗೋಡೆ ಮುರಿಬೇಕು, ಆದರೆ ಕಲ್ಪನೆ ಇರಬಾರದು. ಇಬ್ಬರೂ ಒಂದೇ ಪಾರ್ಟಿಯಲ್ಲಿ ಭೇಟಿ ಆಗಿದ್ದು ಖುಷಿ ತಂದಿದೆ. ನಂಗೂ ಕೆಲವು ಪ್ರಶ್ನೆಗಳು ಇವೆ. ದರ್ಶನ್‌ಗೂ ಇವೆ. ಇಬ್ಬರೂ ಮುಖಾಮುಖಿ ಆದಾಗ ಮಾತ್ರ ಸಮಸ್ಯೆಗೆ ಪರಿಹಾರ ಸಿಗೋದು. ನನ್ನ ಕಣ್ಣಲ್ಲಿ ಕಣ್ಣಿಟ್ಟು ಹೇಳಿದ್ರೆ ಒಪ್ತೀನಿ ಎಂದು ಸುದೀಪ್‌ ಹೇಳಿದ್ದಾರೆ.

ಸುಮಲತಾ (Sumalatha) ಅವರ ಮೇಲೆ ಗೌರವ ಇದೆ, ಹಾಗಾಗಿ ಪಾರ್ಟಿ ಹೋಗಿದ್ದೆ. ತುಂಬಾ ವರ್ಷಗಳ ನಂತರ ಪಾರ್ಟಿಗೆ ಹೋಗಿದ್ದೆ. ನಾನು ಪಾರ್ಟಿ ಮಾಡುವ ವ್ಯಕ್ತಿ ಅಲ್ಲ. ಆ ರೀತಿ ಆಗಿದ್ದು ನನಗೂ ತುಂಬಾ ಖುಷಿ ಆಗಿದೆ. 6 ವರ್ಷದ ನಂತರ ಮುಖಾಮುಖಿ ಆಗಿದ್ದು ನನಗೆ ತುಂಬಾ ಖುಷಿ ಆಗಿದೆ. ನಾನು ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್ ನೋಡುವುದಿಲ್ಲ. ದರ್ಶನ್ ಪೋಸ್ಟ್ ನಾನು ನೋಡಿಲ್ಲ. ನೇರವಾಗಿ ಏನಾದರೂ ಹೇಳಿದರೆ ಕನ್ಸಿಡರ್ ಮಾಡ್ತೀನಿ ಎಂದಿದ್ದಾರೆ ಸುದೀಪ್.

ಶೇಕ್ ಹ್ಯಾಂಡ್ ಮಾಡೋದು ದೊಡ್ಡದಲ್ಲ.‌ ಕೆಲವೊಂದಕ್ಕೆ ಸಮಯ ಕೊಡಿ ಸರಿಹೋಗುತ್ತೆ. ನಾವಿಬ್ಬರೂ ಮೆಚ್ಯೂರ್ಡ್‌ ಪೀಪಲ್. ಇಬ್ಬರೂ ಬೇರೆ ಬೇರೆ ಮೈಂಡ್‌ಸೆಟ್ ಹೊಂದಿದ್ದೇವೆ. ನಾವು ಇಬ್ಬರು ಮತ್ತೆ ಒಂದಾದರೆ ಖುಷಿಯ ವಿಚಾರ ಎಂದರು.

ಕಿಚ್ಚ ಸುದೀಪ್ ಮನೆಯ ಮುಂದೆ ಅವರ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುತ್ತಿದ್ದು, ಕಿಚ್ಚನಿಗೆ ಬರ್ತಡೇ ವಿಶಸ್ ತಿಳಿಸಲು ಅಭಿಮಾನಿಗಳಲ್ಲಿ ನೂಕುನುಗ್ಗ ಲು ಉಂಟಾಗಿದೆ. ಫ್ಯಾನ್ಸ್‌ಗೆ ಊಟದ ವ್ಯವಸ್ಥೆಯನ್ನೂ ಅವರ ನಿವಾಸದ ಬಳಿ ಮಾಡಲಾಗಿದೆ.

ಇದನ್ನೂ ಓದಿ: Kichcha Sudeep Birthday: ಅಭಿನಯ ಚಕ್ರವರ್ತಿ ‌ಕಿಚ್ಚ ಸುದೀಪ್ ಮನೆಮುಂದೆ ಅಭಿಮಾನಿಗಳ ಸಂಭ್ರಮ

Exit mobile version