Site icon Vistara News

Kichcha Sudeep: ತಾಕತ್ ಇದ್ರೆ ಹೇಡಿ ಸೂರಪ್ಪ ಬಾಬು ಮನೆ ಅಡ್ರೆಸ್ ಕೊಡ್ಲಿ; ಕಿಚ್ಚನ ಕಾಂಟ್ರವರ್ಸಿಗೆ ಚಂದ್ರಚೂಡ್ ಎಂಟ್ರಿ!

Kichcha Sudeep Chakravarthy Chandrachud Soorappa Babu

ಬೆಂಗಳೂರು: ಕೋಟಿಗೊಬ್ಬ ಸಿನಿಮಾದ ನಿರ್ಮಾಪಕ ಸೂರಪ್ಪ ಬಾಬು (Kichcha Sudeep) ಜುಲೈ 23ರಂದು ಸುದ್ದಿಗೋಷ್ಠಿ ನಡೆಸಿ ʻʻಸೋಷಿಯಲ್ ಮೀಡಿಯಾದಲ್ಲಿ ಯಾವುದೇ ಹಕ್ಕಿಲ್ಲದೇ ನನ್ನ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದಾರೆʼʼ ಎಂದು ಚಂದ್ರಚೂಡ್‌ಗೆ ಖಡಕ್‌ ವಾರ್ನಿಂಗ್‌ ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ಚಂದ್ರಚೂಡ್ ಇಂದು (ಜು.24) ಸುದ್ದಿಗೋಷ್ಠಿ ಹಮ್ಮಿಕೊಂಡು ಸೂರಪ್ಪ ಬಾಬಗೆ ತಿರುಗೇಟು ನೀಡಿದ್ದಾರೆ. ʻʻನಾನು ಸೂರಪ್ಪ ಬಾಬು ಮೇಲೆ ಏನು ಆರೋಪ ಮಾಡಿದ್ದೇನೋ ಅದಕ್ಕೆ ಬದ್ಧನಾಗಿರುತ್ತೇನೆʼʼಎಂದು ಚಂದ್ರಚೂಡ್ ನೇರವಾಗಿಯೇ ಮಾಧ್ಯಮದ ಮುಂದೆ ಹೇಳಿಕೆ ನೀಡಿದರು.

ಏನು ಆರೋಪ ಮಾಡಿದ್ದೇನೋ ಅದಕ್ಕೆ ಬದ್ಧ

ಚಂದ್ರಚೂಡ್‌ ಮಾತನಾಡಿ ʻʻನಾನು ಸೂರಪ್ಪ ಬಾಬು ಮೇಲೆ ಆರೋಪ ಏನು ಮಾಡಿದ್ದೆ ಅದಕ್ಕೆ ಬದ್ಧನಾಗಿರುತ್ತೇನೆ. ಸುದೀಪ್ ಅವರ ಜತೆ ಎರಡು ಸಿನಿಮಾ ಮಾಡಿದ್ದಾರೆ ಸೂರಪ್ಪ ಬಾಬು. ಸುದೀಪ್ ಸರ್ ಕಾಲ್ ಶೀಟ್ ತಗೊಂಡರೆ 50 ಕೋಟಿ ರೂ. ಬ್ಯೂಸಿನೆಸ್ ಆಗುತ್ತದೆ. ಕೋಟಿಗೊಬ್ಬ 3 ರಿಲೀಸ್ ಆಗುವುದಕ್ಕೆ ಸುದೀಪ್ ಕಾರಣ ಎಂದು ಹೇಳುತ್ತಾರೆ. ಪತ್ರಕರ್ತರಿಗೆ ಲಂಚದ ಆಮಿಷ ಒಡ್ಡುತ್ತಾನೆ. ಸುದೀಪ್ ಸರ್ ಹತ್ರ ಹೋಗಿ ಮಾತಡಬೇಕು ತಾನೇ? ಎಮ್‌ ಎನ್ ಕುಮಾರ್ ಸುದ್ದಿ ಮಾಡಿ ಎನ್ನುತ್ತಾರೆ. ಇಂತವರನ್ನು ಶಿಖಂಡಿ ಅನ್ನದೇ ಎನು ಮಾಡಬೇಕು? ಮೊದಲು ಸೂರಪ್ಪ ಬಾಬು ತಾಕತ್ ಇದ್ದರೆ ಮನೆ ಅಡ್ರಸ್ ಕೊಡಲಿ. ವಂಚಕ‌ ಸೂರಪ್ಪ ಬಾಬು ಅವರು ಕಾರ್ಮಿಕರಿಗೆ ಎಷ್ಟು ವಂಚನೆ ಮಾಡಿದ್ದಾರೆ ಗೊತ್ತಾ? ನನ್ನ ಬಗ್ಗೆ ಮಾತನಾಡುವುದಕ್ಕೆ ಅವರಿಗೆ ನೈತಿಕತೆ ಇಲ್ಲ. ನನಗೆ ಮಗಳು ಇದ್ದಾಳೆ. ನಾನು ಸೂರಪ್ಪ ಬಾಬು ಮಗಳ ಬಗ್ಗೆ ಮಾತಡಲ್ಲʼʼ ಎಂದರು.

ಹೇಡಿ ಸೂರಪ್ಪ ಬಾಬು

ಇದನ್ನೂ ಓದಿ: Kichcha Sudeep: ಚಂದ್ರಚೂಡ್ ವಿರುದ್ಧ ಸೂರಪ್ಪ ಬಾಬು ರೋಷಾಗ್ನಿ; ತಾರಕಕ್ಕೇರಿದೆ  ಕಿಚ್ಚನ ಕಾಂಟ್ರವರ್ಸಿ!

ಚಂದ್ರಚೂಡ್‌ ಮಾತು ಮುಂದುವರಿಸಿ ʻʻಹಿಂದೆ ಸೂರಪ್ಪ ಬಾಬು ಸ್ಟಾರ್ ನಟನ ಬಗ್ಗೆ ಕುಡಿದ ಅಮಲಿನಲ್ಲಿ ಮಾತನಾಡಿದ್ದಾರೆ. ತಲೆ ಬೆಳ್ಳಗಾಗಿಲ್ಲ ಕಂಡೋರ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಸುದೀಪ್ ಸರ್ ಕ್ಷಮಿಸಬಹುದು. ಆದರೆ ನಾನು ಕ್ಷಮಿಸಲ್ಲ. ಸುದೀಪ್ ಅವರು ಎಷ್ಟು ನೊಂದುಕೊಂಡಿದ್ದಾರೆ ಗೊತ್ತ? ಕೋರ್ಟ್‌ಗೆ ಹೋದಾಗ ತುಂಬ ಬೇಜಾರಾಗಿದ್ದರು. ಈಗ ಈ ಸಮಸ್ಯೆ ಬಗೆಹರಿತಿದೆ. ಶಿವಣ್ಣ, ರವಿ ಸರ್ ಬಂದು ಬಗೆ ಹರಿಸುತ್ತಿದ್ದಾರೆ. ಹೇಡಿ ಸೂರಪ್ಪ ಬಾಬು, ಅವರಿಂದಲೇ ಸಹಾಯ ಪಡೆದು ಅವರಿಗೆ ವಂಚನೆ ಮಾಡುತ್ತೀರಾ ಅಂದರೆ ನಿಮ್ಮ ಲಜ್ಜೆಗೇಡಿತನ ಇದುʼʼಎಂದರು.

Exit mobile version