Site icon Vistara News

Kichcha Sudeep | ಕಿಚ್ಚನ ಜನುಮದಿನಕ್ಕೆ ಕಾಮನ್ ಡಿಪಿ: ಸಾಥ್ ನೀಡಿದ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌!

Kichcha Sudeep

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ (Kichcha Sudeep) ಅವರ ವಿಕ್ರಾಂತ್‌ ರೋಣ ಸಿನಿಮಾ ವಿಶ್ವಾದ್ಯಂತ ಭರ್ಜರಿ ಪ್ರದರ್ಶನ ಕಂಡಿದೆ. ಈಗ ಸುದೀಪ್‌ ಅವರ ಜನುಮದಿನ ಹತ್ತಿರ ಬರುತ್ತಿದೆ. ಸೆಪ್ಟೆಂಬರ್‌ 2ರಂದು ಸುದೀಪ್‌ 49ನೇ ವಸಂತಕ್ಕೆ ಕಾಲಿಡಲಿದ್ದಾರೆ. ಈ ಬಾರಿ ಸುದೀಪ್‌ ತಮ್ಮ ಜನುಮ ದಿನವನ್ನು ಅದ್ಧೂರಿಯಾಗಿ ಆಚರಿಸಲಿದ್ದಾರಾ ಅಥವಾ ಸರಳವಾಗಿ ಆಚರಿಸಿಕೊಳ್ಳುತ್ತಾರಾ ಎಂಬ ಬಗ್ಗೆ ಕುತೂಹಲ ಮೂಡಿದೆ.

ಈ ವರ್ಷ ಕಿಚ್ಚನ ಅಭಿಮಾನಿಗಳು ಹಲವು ವಿಶೇಷತೆಗಳೊಂದಿಗೆ ಹುಟ್ಟು ಹಬ್ಬವನ್ನು ಆಚರಿಸುವ ಪ್ಲಾನ್‌ನಲ್ಲಿದ್ದಾರೆ. ಕಿಚ್ಚನ ಅಭಿಮಾನಿಗಳು ಕಾಮನ್ ಡಿಪಿ ಟ್ರೆಂಡ್ ಮಾಡಲಿದ್ದಾರೆ. ಈ ಟ್ರೆಂಡ್‌ಗೆ ಶಿವರಾಜ್ ಕುಮಾರ್ ಅವರು ಸಾಥ್ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಅವರು ಕಿಚ್ಚನ ಫೋಟೋವನ್ನು ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ | Vikrant Rona | ಕಿಚ್ಚನ ಹುಟ್ಟುಹಬ್ಬಕ್ಕೆ ಜೀ5ನಿಂದ ಸ್ಪೆಷಲ್‌ ಗಿಫ್ಟ್‌: ಮನೆಗೆ ಗುಮ್ಮನ ಆಗಮನ!

ಆದರೆ ಪುನೀತ್‌ ರಾಜ್‌ಕುಮಾರ್‌ ನಿಧನ ಹೊಂದಿರುವ ಹಿನ್ನೆಲೆಯಲ್ಲಿ ಸುದೀಪ್‌ ಅವರು ಈ ಬಾರಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದು ಅನುಮಾನ ಎನ್ನಲಾಗುತ್ತಿದೆ.

ಕಿಚ್ಚನ ಬರ್ತ್‌ಡೇಗೆ ಗುಮ್ಮನ ಆಗಮನ
ಸೆಪ್ಟೆಂಬರ್ 2ರಂದು ಪ್ರತಿಷ್ಠಿತ ಒಟಿಟಿ ಜೀ5ಕ್ಕೆ “ಗುಮ್ಮʼ ಗ್ರ್ಯಾಂಡ್ ಎಂಟ್ರಿ ಕೊಡಲಿದೆ. ಅದಕ್ಕೂ ಮುನ್ನ ಜೀ5 ಸ್ಪೆಷಲ್ ಟ್ರೈಲರ್‌ ಅನಾವರಣಗೊಳ್ಳಲಿದೆ. ಕನ್ನಡದಲ್ಲಿ ಮಾತ್ರ ವಿಕ್ರಾಂತ್ ರೋಣ ಜೀ5 ಒಟಿಟಿಯಲ್ಲಿ ಬಿಡುಗಡೆಯಾಗಿದ್ದು, ಶೀಘ್ರದಲ್ಲಿ ಬೇರೆ ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.

ಇದನ್ನೂ ಓದಿ | Kichcha Sudeep | ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಕಿಚ್ಚ ಸುದೀಪ್ ಭೇಟಿ: ಹೂ ಮಳೆ ಸುರಿಸಿದ ಫ್ಯಾನ್ಸ್‌

Exit mobile version