ಬೆಂಗಳೂರು; ಕಿಚ್ಚ ಸುದೀಪ್ (Kichcha Sudeep) ಹಾಗೂ ನಿರ್ಮಾಪಕ ಎಂಎನ್ ಕುಮಾರ್ ಜಟಾಪಟಿ ಮುಂದುವರಿದಿದೆ. ಇದೀಗ ಕಿಚ್ಚ ಸುದೀಪ್ ಮೇಲೆ ಆಗಿರುವ ಆರೋಪದ ಬಗ್ಗೆ ಕಿಚ್ಚನ ಫ್ಯಾನ್ಸ್ ಕೆಂಡಾಮಂಡಲವಾಗಿದ್ದಾರೆ. “ಈ ಆರೋಪಗಳ ಹಿಂದೆ ಇರುವುದು ನಿರ್ಮಾಪಕ ಸೂರಪ್ಪ ಬಾಬು. ಮಾಡಿರುವ ತಪ್ಪು ತಿದ್ದು ಕೊಂಡರೆ ಸರಿ. ಇಲ್ಲವಾದರೆ ಸೂರಪ್ಪ ಬಾಬುಗೆ ನುಗ್ಗಿ ಹೊಡೆಯುವುದಾಗಿ ಶಿವಮೊಗ್ಗದಲ್ಲಿ ಸುದೀಪ್ ಅಭಿಮಾನಿಯೊಬ್ಬರು ಎಚ್ಚರಿಕೆ ನೀಡಿದರು.
ಮಾದ್ಯಮದ ಮುಂದೆ ಅಭಿಮಾನಿ ಮಾತನಾಡಿ ʻʻಈ ಎಲ್ಲ ಆರೋಪಗಳ ಹಿಂದೆ ಇರುವುದು ಸೂರಪ್ಪ ಬಾಬು. ಅದರ ಬಗ್ಗೆ ಮಾಹಿತಿ ತೆಗೆದುಕೊಂಡು ನಾವೆಲ್ಲ ಅಭಿಮಾನಿಗಳು ಸೇರಿ ಪ್ರತಿಭಟನೆ ನಡೆಸಲಿದ್ದೇವೆ. ಸೂರಪ್ಪ ಬಾಬುಗೆ ನಮ್ಮ ಕಡೆಯಿಂದ ಎಚ್ಚರಿಕೆ ಏನೆಂದರೆ, ಸುದೀಪ್ ಅವರ ಹೆಸರಲ್ಲಿ ಸೂರಪ್ಪ ಬೆಳೆದು ನಿಂತಿದ್ದಾನೆ. ಸುದೀಪ್ ಅವರ ಹೆಸರಲ್ಲಿ ಕಳಂಕ ತರಲು ಈ ರೀತಿ ಮಾಡುತ್ತಿದ್ದಾರೆ. ರೆಹಮಾನ್ ಹಾಗೇ ಅವರ ಸಂಗಡಿಗರು ಯಾರೇ ಇರಬಹುದು. ಆದರೆ ಇವರಿಗೆ ಗೊತ್ತಿಲ್ಲ ಸುದೀಪ್ ಅವರು ಇವರೆಲ್ಲ ಕುಟುಂಬಕ್ಕೆ ಎಷ್ಟು ಸಹಾಯ ಮಾಡಿದ್ದಾರೆ ಎಂಬುದು. ನಿಯತ್ತು ಇದ್ದಿದ್ದರೆ ಸುದೀಪ್ ಅವರ ಬಗ್ಗೆ ಈ ರೀತಿ ಮಾತನಾಡುತ್ತ ಇರುತ್ತರಲಿಲ್ಲ. ಸುದೀಪ್ ಅವರು ಇದೆಲ್ಲ ಗೊತ್ತಿದ್ದು ಶಾಂತ ರೀತಿಯಲ್ಲಿ ಇದ್ದಾರೆ ಎಂದರೆ ಅದು ಅಭಿಮಾನಿಗಳಿಗೆ ಗೊತ್ತು. ಸುದೀಪ್ ಏನು ಎಂಬುದು ಅವರ ಅಭಿಮಾನಿಗಳಿಗೆ ಗೊತ್ತು. ಸುದೀಪ್ ಅವರಿಗೆ ಕಾಲಿಗೆ ಬಿದ್ದು ಕ್ಷಮೆ ಕೇಳಲಿ ಎಂದು ನಾವು ಕೇಳಿಲ್ಲ. ಮಾಡಿರುವ ತಪ್ಪು ತಿದ್ದುಕೊಂಡು ಹೆದರಿಕೊಂಡು ಬದುಕಬೇಕು, ಚಿತ್ರರಂಗದ ಯಾರೇ ಬಗ್ಗೆ ಮಾತನಾಡಲು ಯೋಚನೆ ಮಾಡಿ ಮಾತನಾಡಬೇಕು. ಇದು ಇಷ್ಟಕ್ಕೆ ಮುಗಿದಿಲ್ಲ. ಈ ಕಿಡಿ ಇನ್ನೂ ಕರ್ನಾಟಕದಾದ್ಯಂತ ಹಬ್ಬಲಿದೆ. ಸೂರಪ್ಪ ಬಾಬ ನಿಂದು ಎಷ್ಟು ಇದೆಯೋ ಅಷ್ಟು ನೋಡಿಕೊಂಡು ಇರಬೇಕು. ಇಲ್ಲ ಅಂದರೆ ಮನೆಗೇ ಬಂದು ನುಗ್ಗಿ ಹೊಡೆಯಲು ರೆಡಿಯಾಗಿದ್ದೇವೆ. ಸುದೀಪ್ ಅಣ್ಣ ಒಂದೇ ಒಂದು ಮಾತು ಅಂದರೆ ಸಾಕು ಮನೆಗೆ ನುಗ್ಗಿ ಹೊಡೆಯುತ್ತೇವೆʼʼಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: Kichcha Sudeep: ಸಂಧಾನಕ್ಕೆ ನಾನು ರೆಡಿ ಎಂದು ಸುದೀಪ್ ವಿರುದ್ಧ ಬೀದಿಗಿಳಿದ ನಿರ್ಮಾಪಕ ಕುಮಾರ್!
ಕಾಲ್ಶೀಟ್ ನೀಡಿಲ್ಲ ಎಂದು ಕುಮಾರ್ ಆರೋಪಿಸಿದ್ದರು. ಆದರೆ, ಸುದೀಪ್ ಅವರು ಇದನ್ನು ತಳ್ಳಿ ಹಾಕಿದ್ದರು. ಈಗ ಅವರು ಕುಮಾರ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಬೆನ್ನಲ್ಲೇ ಕುಮಾರ್ ಅವರು ಸುದೀಪ್ ವಿರುದ್ಧ ಫಿಲ್ಮ್ ಚೇಂಬರ್ ಮುಂದೆ ಪ್ರತಿಭಟನೆ ಆರಂಭಿಸಿದ್ದಾರೆ.ನಿರ್ಮಾಪಕರ ಸಂಘದ ಮಾಜಿ ಅಧ್ಯಕ್ಷ ಪ್ರವೀಣ್ ಕುಮಾರ್ ಮೊದಲಾದವರು ಸಾಥ್ ಕೊಟ್ಟಿದ್ದಾರೆ. ʻʻನಾನು ಸುದೀಪ್ ಅವರ ಬಗ್ಗೆ ಕೆಟ್ಟದಾಗಿ ಮಾತಾಡಿಲ್ಲ. ನನಗೆ ಸರಿಯಾದ ಸ್ಪಂದನೆ ಸಿಕ್ಕಿಲ್ಲʼʼ ಎಂದು ನಿರ್ಮಾಪಕ ಕುಮಾರ್ ಮನವಿ ಮಾಡಿದ್ದಾರೆ.