ಬೆಂಗಳೂರು: ಕಿಚ್ಚ ಸುದೀಪ್ (Kichcha Sudeep) ಅವರು ಸಿನಿಮಾ ಮಾಡುವುದಾಗಿ ಅಡ್ವಾನ್ಸ್ ತೆಗೆದುಕೊಂಡು ಕೈಗೆ ಸಿಗುತ್ತಿಲ್ಲ” ಎಂಬುದು ಸೇರಿ ಹಲವು ಆರೋಪ ಮಾಡಿದ ನಿರ್ಮಾಪಕ, ವಿತರಕ ಎಂ.ಎನ್. ಕುಮಾರ್ 10 ಕೋಟಿ ರೂಪಾಯಿ ಪರಿಹಾರ ನೀಡುವಂತೆ ನೋಟಿಸ್ ನೀಡಿದ್ದಾರೆ. ಸುದೀಪ್ ವಿರುದ್ಧ ನಿರ್ಮಾಪಕ ಎಂ ಎನ್ ಕುಮಾರ್ ಅರೋಪಗಳಿಗೆ ಸಂಬಂಧಪಟ್ಟಂತೆ ಜಯನಗರದಲ್ಲಿ ನಿರ್ಮಾಪಕ ಜ್ಯಾಕ್ ಮಂಜು ಅವರು ಸುದೀಪ್ ಪರ ಸುದ್ದಿಗೋಷ್ಠಿ ಹಮ್ಮಿಕೊಂಡಿದ್ದರು. ಈ ವೇಳೆ ಚಕ್ರವರ್ತಿ ಚಂದ್ರಚೂಡ್ ಕೂಡ ಉಪಸ್ಥಿತಿಯಲ್ಲಿ ಇದ್ದರು. ಈ ವೇಳೆ ಜ್ಯಾಕ್ ಮಂಜು ಮಾತನಾಡಿ ʻʻಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ಕೊಡುತ್ತೇನೆ. ನಾನು ಆರೋಪ ಮಾಡಲು ಬಂದಿಲ್ಲ. ಪ್ರತ್ಯಕ್ಷದರ್ಶಿ ಆಗಿ ಏನೇನು ಗೊತ್ತು ಅದನ್ನು ಹೇಳುತ್ತೇನೆ. ನಿರ್ಮಾಪಕ ಕುಮಾರ್ ಆರೋಪದಲ್ಲಿ ಸತ್ಯ ಇಲ್ಲʼʼ ಎಂದು ಸುದೀಪ್ ಪರ ಮಾತನಾಡಿದ್ದಾರೆ.
ನಾವು ಮಾತೃ ಸಂಸ್ಥೆಗೆ ಅಗೌರವ ತೋರಿಸಿಲ್ಲ
ʻʻಇದುವರೆಗು ಸುದೀಪ್ ಅವರು ʻಪಾರ್ಥʼ ಸಿನಿಮಾದಿಂದ ವಿಕ್ರಾಂತ್ ರೋಣ ಚಿತ್ರದವರೆಗೂ ನಿರ್ಮಾಪಕರಿಗೆ ಸಹಾಯ ಮಾಡಿದ್ದಾರೆ. ಸುದೀಪ್ ಅವರ ಬಗ್ಗೆ ಒಂದು ಕಪ್ಪು ಚುಕ್ಕೆ ಇಲ್ಲ. ಮಾತೃ ಸಂಸ್ಥೆ ಫಿಲಂ ಚೇಂಬರ್‌ಗೆ ಸ್ಪಷ್ಟನೆ ಕೊಟ್ಟಿದ್ದೇವೆ. ಭಾಮಾ ಹರೀಶ್, ಎನ್ ಕುಮಾರ್ ಅವರು ಜತೆಗೆ ಆಗಮಿಸಿ ಮಾತಾಡಿದಾಗ ಐದಾರು ಪತ್ರ ಬರೆದಿದ್ದಕ್ಕೆ ಉತ್ತರ ಬಂದಿಲ್ಲ ಎಂದು ಹೇಳಿದರು. ಆಗ ಎಲ್ಲ ವಿವರ ಕೊಟ್ಟಿದ್ದೇವೆ. ಕುಮಾರ್ ತೊಂದರೆಯಲ್ಲಿ ಇರುವುದು ನನಗೂ ಗೊತ್ತು. ಪ್ರಿಯಾ ಸುದೀಪ್ ಅವರು ಸಿನಿಮಾ ಕೆಲಸಗಳಲ್ಲಿ ಭಾಗಿಯಾಗುವುದಿಲ್ಲʼʼಎಂದರು.
“ಕಿಚ್ಚ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ಅವರ ಸಿನಿಜರ್ನಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಬೆಳೆದಿದ್ದಾರೆ. ಇತ್ತೀಚಿಗೆ ಭಾಮಾ ಹರೀಶ್ ಅವರು ಸುದೀಪ್‌ನ ಭೇಟಿಯಾಗಿದ್ದರು. ಕುಮಾರ್ ಪತ್ರ ಕಳಿಸಿದ್ದರು, ನಾವು ಅದಕ್ಕೆ ಉತ್ತರ ಕೊಟ್ಟಿದ್ದೇವೆ. ಆದರೂ ಕುಮಾರ್ ಅವರು ನಾವು ಉತ್ತರ ಕೊಟ್ಟಿಲ್ಲ ಎಂದು ತಪ್ಪು ಸಂದೇಶ ಕೊಟ್ಟಿದ್ದಾರೆ. ನಾವು ಮಾತೃ ಸಂಸ್ಥೆಗೆ ಅಗೌರವ ತೋರಿಸಿಲ್ಲʼʼಎಂದರು.
ಇದನ್ನೂ ಓದಿ: Kichcha Sudeep: ಸುದೀಪ್ ಹಣ ಪಡೆದಿರುವ ವಿವಾದ: ಈ ಬಗ್ಗೆ ರವಿಚಂದ್ರನ್‌ಗೂ ಗೊತ್ತು ಎಂದ ವಿತರಕ ಎಂ ಎನ್ ಕುಮಾರ್!
ಕೆಲಸದ ಒತ್ತಡದಿಂದ ಸುದೀಪ್ ಅವರು ಸ್ಪಂದಿಸಿಲ್ಲ
ರನ್ನ ಸಿನಿಮಾ ಸಮಯದಲ್ಲಿ ಕುಮಾರ್ ಅವರನ್ನು ಸುದೀಪ್ ಭೇಟಿಯಾಗಿದ್ದು ನಿಜ. ಕುಮಾರ್ ಆರ್ಥಿಕ ಕಷ್ಟದಲ್ಲಿದ್ದಾರೆ ನಿಜ. 2020 ಜನವರಿಯಲ್ಲಿ ವಿಕ್ರಾಂತ್ ರೋಣ ಶುರುವಾಯ್ತು. ಆಮೇಲೆ ಕುಮಾರ್ ಪ್ರಿಯಾ ಅವರನ್ನು ಭೇಟಿಯಾದರು. ನಾನು ಆಗ ಅಲ್ಲೇ ಇದ್ದೇ. ಬಳಿಕ ಕುಮಾರ್ ಅವರು ಸುದೀಪ್ ಅವರನ್ನು ಭೇಟಿಯಾದರು. 5 ಕೋಟಿ ಸಹಾಯ ಮಾಡಲು ಸುದೀಪ್ ಒಪ್ಪಿದರು. ಕೋಪದಿಂದ ಕುಮಾರ್ ಬೇಡ ಅಂದರು. ಭಿಕ್ಷೆ ಕೇಳುವುದಕ್ಕೆ ಬಂದಿದ್ದೀನಾ ಎಂದು ಬೈದರು. ನಾನೇನೂ ಇವರಿಂದ ದುಡ್ಡು ತೆಗೆದುಕೊಂಡು ಮೋಸ ಮಾಡಿದ್ದೇನಾ ಎಂದು ಸುದೀಪ್ ಅವರಿಗೆ ಬೇಜಾರಾಯ್ತು. ಕುಮಾರ್ ನಡವಳಿಕೆ ಸುದೀಪ್ ಅವರಿಗೆ ಕೋಪ ತರಿಸಿತ್ತು. ಸುದೀಪ್ ಅವರಿಗೆ ಕುಮಾರ್‌ರಿಂದ ಸಾಕಷ್ಟು ಪ್ರೆಶರ್ ಆಗಿದೆ. ಆದರೆ ಕುಮಾರ್ ಅವರು ಆ ವೇಳೆ ಕೋಪದಲ್ಲಿ ಮಾತಾಡಿದ್ದರು. ನಂತರ ಎನ್ ಕುಮಾರ್ ಅವರು ಬೇರೆಯವರ ಹತ್ತಿರ ಕೂಡ ಸುದೀಪ್ ಅವರಿಂದ ಹಣ ಬರಬೇಕು ಎಂದು ಹೇಳಿರುತ್ತಾರೆ. ಅದು ಒಂದು ಕಡೆ ಬೇಸರ ಆಗುವ ಹಂತಕ್ಕೆ ಹೋಗಿರುತ್ತದೆ. ಕುಮಾರ್ ಸಹಾಯ ಅಂತ ಬಂದವರು ಆಪಾದನೆ ಮಾಡುತ್ತಿದ್ದರಲ್ಲ ಎಂದು ಸುದೀಪ್ ಬೇಸರ ಹೊರ ಹಾಕಿದರು. ಕುಮಾರ್ ಆರೋಪದಲ್ಲಿ ಸತ್ಯ ಇಲ್ಲʼʼ ಎಂದು ಜಾಕ್ ಮಂಜು ಮಾತನಾಡಿದ್ದಾರೆ.ʼʼ
ಕಾನೂನು ಹೋರಾಟಕ್ಕೆ ಮುದಾಗಿದ್ದೇವೆ!
ʻʻಒಂದು ಸಿನಿಮಾಗೆ ಒಂದು ಬಜೆಟ್ ಹಾಕುತ್ತೇವೆ. ಆ ಸಿನಿಮಾ 50ರಿಂದ 60 ಕೋಟಿ ರೂ. ಆಗುತ್ತದೆ. ಆ ಸಿನಿಮಾದ ಬಳಿಕ ವ್ಯವಹಾರ ಅಲ್ಲಿಗೆ ನಿಲ್ಲುತ್ತದೆ. ಬಳಿಕ 3-4 ವರ್ಷ ಆದಮೇಲೆ ಪ್ರತಿ ಭಾರಿ ಕುಮಾರ್ ಅವರ ಜತೆ ಮೀಟಿಂಗ್ ಆಗಿತ್ತು. ಒಂದು ಕಂಪನಿ ಜತೆ ಮಾತುಕತೆ ಆಗುತ್ತದೆ. ಬಳಿಕ 5 ಕೋಟಿ ನಿಮಗೆ ಕೊಡುತ್ತಾರೆ. 55 ಕೋಟಿ ನಂತರ ಬರುವ ಬ್ಯುಸಿನೆಸ್‌ನಲ್ಲಿ ಪಾಲು ಮಾಡುವುದು ಎಂದು ಆಗುತ್ತದೆ. ನಂತರ ನಾನೇ ದೊಡ್ಡ ನಿರ್ಮಾಪಕ, ನಾನೇ ಸಿನಿಮಾ ಮಾಡುತ್ತೇನೆ ಎಂದು ಹೇಳುತ್ತಾರೆ. ನಂತರ ಫಿಲ್ಮಂ ಚೇಂಬರ್‌ಗೆ ಈ ಬಗ್ಗೆ ದೂರು ಹೋಗಿದೆ. ಅದಾದ ನಂತರ ಹೀಗೆ ಆರೋಪ ಮಾಡಿ ಮಾತಾಡಿದ್ದಾರೆ. ಅವರ ಆರೋಪಕ್ಕೆ ದಾಖಲೆಗಳಿಲ್ಲದೇ ಮಾತನಾಡುತ್ತಿದ್ದಾರೆ. ಅದಕ್ಕಾಗಿ ನಾವು ಕಾನೂನು ಹೋರಾಟಕ್ಕೆ ಹೋಗಿದ್ದೇವೆʼʼ ಎಂದು ಜಾಕ್ ಮಂಜು ಮಾತನಾಡಿದ್ದಾರೆ.
ಇದನ್ನೂ ಓದಿ: Kichcha Sudeep: ಕಿಚ್ಚ ಸುದೀಪ್ ಸಿನಿಮಾಗೆ ತಮಿಳು ಖ್ಯಾತ ನಿರ್ದೇಶಕ ವೆಂಕಟ್ ಪ್ರಭು ಆ್ಯಕ್ಷನ್ ಕಟ್?
ಯಾವುದೇ ಕಾರಣಕ್ಕೂ ಸಂಧಾನಕ್ಕೆ ಹೋಗಲ್ಲ
“ಸಂಧಾನಸಭೆ ಬಗ್ಗೆ ನಮಗೆ ಗೊತ್ತಿಲ್ಲ.. ಯಾವುದೇ ಮಾಹಿತಿ ಬಂದಿಲ್ಲ. ಕಾನೂನು ಮೂಲಕವೇ ಬಗೆ ಹರಿಸೋಣ ಯಾವುದೇ ಕಾರಣಕ್ಕೂ ಸಂಧಾನಕ್ಕೆ ಹೋಗಲ್ಲ. ನಾವು ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ. ನಾವು ಕುಮಾರ್ ಜತೆ ಮಾತಾಡಿ ತಿಂಗಳು ಗಟ್ಟಲೆ ಆಗಿದೆ .ನಾವು ಕುಮಾರ್ ಜತೆ ಕೂತು ಈ ವಿಚಾರ ಮಾತನಾಡುವ ಸಾಧ್ಯತೆ ಇಲ್ಲವೇ ಇಲ್ಲʼʼಎಂದಿದ್ದಾರೆ ಜಾಕ್ ಮಂಜು.
ಕುಮಾರ್ ಹೇಳಿದ್ದೇನು?
ʻʻಸುದೀಪ್ 45 ಸಿನೆಮಾ ಮಾಡಿದ್ದಾರೆ. ಅಷ್ಟು ಸಿನಿಮಾದ ಅಗ್ರಿಮೆಂಟ್ ಕೊಡೋಕೆ ಹೇಳಿ. ಸಿನಿಮಾ ನಡೆಯೋದು ನಂಬಿಕೆ ಮೇಲೆ. ಅದರಂತೆ ಹಣ ಕೊಟ್ಟಿದ್ದೇನೆ. 6 ವರ್ಷ ಆಗಿದೆ ಕಮಿಟ್ಮೆಂಟ್ ಆಗಿ. ವಿಕ್ರಾಂತ್ ರೋಣ ಬಳಿಕ ಸಿನಿಮಾ ಮಾಡಿಕೊಡುತ್ತೇನೆ ಎಂದು ಹೇಳಿದ್ದರು. ಆ ಕಡೆ ನಂದಕಿಶೋರ್ ‘ಮುತ್ತತ್ತಿ ಸತ್ಯರಾಮ’ ಟೈಟಲ್ ಗೊತ್ತಿಲ್ಲ ಎನ್ನುತ್ತಾರೆ. ಬಹಿರಂಗ ಚರ್ಚೆಗೆ ಬರಲಿ ಬೇಕಿದ್ದರೆ. ಕಾನೂನು ಎಲ್ಲರಿಗೂ ಒಂದೇ ಎಂದುʼʼಪ್ರೆಸ್ ಮೀಟ್‌ನಲ್ಲಿ ಜುಲೈ 8ರಂದು ಕುಮಾರ್ ಹೇಳಿಕೆ ನೀಡಿದ್ದರು.