ಬೆಂಗಳೂರು: ಸ್ಯಾಂಡಲ್‌ವುಡ್ ನಿರ್ಮಾಪಕ, ವಿತರಕ ಎಂ.ಎನ್. ಕುಮಾರ್ ಮಾಡಿದ ಆರೋಪಗಳಿಗೆ ನಟ ಕಿಚ್ಚ ಸುದೀಪ್ (Kichcha Sudeep) ಕೊನೆಗೂ ಮೌನ ಮುರಿದಿದ್ದಾರೆ. ಕಿಚ್ಚ ಸುದೀಪ್ ಅವರು ಸಿನಿಮಾ ಮಾಡುವುದಾಗಿ ಅಡ್ವಾನ್ಸ್ ತೆಗೆದುಕೊಂಡು ಕೈಗೆ ಸಿಗುತ್ತಿಲ್ಲ” ಎಂಬುದು ಸೇರಿ ಹಲವು ಆರೋಪ ಮಾಡಿದ ಕುಮಾರ್ ಅವರಿಗೆ 10 ಕೋಟಿ ರೂಪಾಯಿ ಪರಿಹಾರ ನೀಡುವಂತೆ ನೋಟಿಸ್ ನೀಡಿದ್ದಾರೆ. ಹಾಗೆಯೇ, ಕ್ರಿಮಿನಲ್ ಕೇಸ್ ಕೂಡ ದಾಖಲಿಸಿದ್ದಾರೆ. ಇದೀಗ ವಿತರಕ ಎಂ.ಎನ್. ಕುಮಾರ್ ಸುದ್ದಿಗೋಷ್ಠಿ ನಡೆಸಿದ್ದಾರೆ.
ಈ ಬಗ್ಗೆ ವಿತರಕ ಎಂ.ಎನ್. ಕುಮಾರ್ ಮಾತನಾಡಿ ʻʻಚಿತ್ರೋದ್ಯಮದಲ್ಲಿ ನಿರ್ಮಾಪಕರು ಮುಖ್ಯ. ಸಿನಿಮಾರಂಗ ನಡೆಯುವುದು ನಂಬಿಕೆ ಮೇಲೆ. ನಾನೇನು ತಪ್ಪು ಮಾತಾಡಿಲ್ಲ. ನಾನು ಅಡ್ವಾನ್ಸ್ ಕೊಟ್ಟಿದ್ದೇನೆ. ಸಿನಿಮಾ ಮಾಡಬೇಕು. ಇದಕ್ಕೆ ಸ್ಪಂದಿಸಿ ಎಂದು ಸುದೀಪ್ ಅವರಲ್ಲಿ ಕೇಳಿದ್ದೆ. ಈಗ ನನಗೆ ವಾಟ್ಸ್‌ಆ್ಯಪ್ ಮೂಲಕ ನೋಟಿಸ್ ಬಂದಿದೆ. ಪೋಸ್ಟ್ ಮುಖಾಂತರ ಬಂದಿಲ್ಲ. ಅನೌನ್ ನಂಬರ್ ನಿಂದ ಬಂದಿದೆ. ಅಫೀಶಿಯಲ್ ಆಗಿ ಬರುವ ತನಕ ರಿಯಾಕ್ಟ್ ಮಾಡಲ್ಲ. ಬಂದ ಬಳಿಕ ವಾಣಿಜ್ಯ ಮಂಡಳಿ, ನಿರ್ಮಾಪಕ ಅಸೋಸಿಯೇಷನ್‌ನಲ್ಲಿ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ’ ಎಂದು ಕುಮಾರ್ ಹೇಳಿದ್ದಾರೆ.
ʻʻಈ ಬಗ್ಗೆ ರವಿಚಂದ್ರನ್ (Ravichandran) ಅವರ ಹತ್ತಿರವು ಮಾತನಾಡಿದ್ದೆ. ಅವರು ಕೂಡ ಸುದೀಪ್ ಗೆ ಹೇಳಿದ್ದಾರೆ. ನಾನು ಹಣ ಕೇಳಿದ್ದೆ ತಪ್ಪಾ? ರವಿಚಂದ್ರನ್ ಅವರ ಜತೆ ವಿಶ್ವಾಸದಿಂದ ಇದ್ದಾರೆ. ನನ್ನ ಜತೆಯೂ ಚೆನ್ನಾಗಿದ್ದಾರೆ. ಹಾಗಾಗಿ ರವಿಚಂದ್ರನ್ ಬಳಿ ಹೋಗಿಯೂ ಹೇಳಿದ್ದೆ’ ಎಂದರು.
ಇದನ್ನೂ ಓದಿ: Kichcha Sudeep: ನಿರ್ಮಾಪಕ ಕುಮಾರ್ ಆರೋಪಕ್ಕೆ ಕೆಂಡವಾದ ಕಿಚ್ಚ; 10 ಕೋಟಿ ರೂ. ಕೇಳಿ ನೋಟಿಸ್, ಕೇಸ್ ದಾಖಲು
‘ಸುದೀಪ್ 45 ಸಿನೆಮಾ ಮಾಡಿದ್ದಾರೆ. ಅಷ್ಟು ಸಿನಿಮಾದ ಅಗ್ರಿಮೆಂಟ್ ಕೊಡೋಕೆ ಹೇಳಿ. ಸಿನಿಮಾ ನಡೆಯೋದು ನಂಬಿಕೆ ಮೇಲೆ. ಅದರಂತೆ ಹಣ ಕೊಟ್ಟಿದ್ದೇನೆ. 6 ವರ್ಷ ಆಗಿದೆ ಕಮಿಟ್ಮೆಂಟ್ ಆಗಿ. ವಿಕ್ರಾಂತ್ ರೋಣ ಬಳಿಕ ಸಿನಿಮಾ ಮಾಡಿಕೊಡುತ್ತೇನೆ ಎಂದು ಹೇಳಿದ್ದರು. ಆ ಕಡೆ ನಂದಕಿಶೋರ್ ‘ಮುತ್ತತ್ತಿ ಸತ್ಯರಾಮ’ ಟೈಟಲ್ ಗೊತ್ತಿಲ್ಲ ಎನ್ನುತ್ತಾರೆ. ಬಹಿರಂಗ ಚರ್ಚೆಗೆ ಬರಲಿ ಬೇಕಿದ್ದರೆ. ಕಾನೂನು ಎಲ್ಲರಿಗೂ ಒಂದೇ ಎಂದರು ಕುಮಾರ್.
ʻʻವಿಕ್ರಾಂತ್ ರೋಣ ವೇಳೆ ನನ್ನನ್ನು ಕರೆಸಿದ್ದರು. ನಾನು ಅವರ ರೇಟ್‌ಗೆ ಹೊಂದಾಣಿಕೆ ಮಾಡೋಕೆ ಆಗಲಿಲ್ಲ. ಹಾಗಾಗಿ ಚಿತ್ರ ನಮ್ಮ ಜತೆ ಆಗಲಿಲ್ಲ. ಮುತ್ತತ್ತಿ ಸತ್ಯರಾಜು ಟೈಟಲ್ ಕೊಟ್ಟಿದ್ದು ಅವರೆ. ಡೈರೆಕ್ಟರ್ ನಂದಕಿಶೋರ್ ಅವರನ್ನು ಅವರೇ ಸಜೆಸ್ಟ್ ಮಾಡಿದ್ದು. ಸಾಯಿಬಾಬಾ ಗಣಪತಿ ಮೇಲೆ ಬೇಕಿದ್ದರೆ ಇಲ್ಲ ಅಂತ ಸುದೀಪ್ ಅವರು ಪ್ರಮಾಣ ಮಾಡಲಿʼʼ ಎಂದು ಹೇಳಿದರು.