ಬೆಂಗಳೂರು: ಕಿಚ್ಚ ಸುದೀಪ್ (Kichcha Sudeep) ಹಾಗೂ ಎಮ್ ಎನ್ ಕುಮಾರ್ ಜಟಾಪಟಿ ಮುಂದುವರಿಯುತ್ತಲೇ ಇದೆ. ಕೋಟಿಗೊಬ್ಬ ಸಿನಿಮಾದ ನಿರ್ಮಾಪಕ ಸೂರಪ್ಪ ಬಾಬು ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದಾರೆ. ಈಗಾಗಲೇ ಕುಮಾರ್ ಮತ್ತು ಸುದೀಪ್ ನಡುವಿನ ಜಟಾಪಟಿ ಹಿಂದೆ ಸೂರಪ್ಪ ಬಾಬು ಇದ್ದಾರೆ ಎಂಬ ವದಂತಿಗಳು ಹಬ್ಬಿತ್ತು. ಈ ಬಗ್ಗೆ ಇದೀಗ ಸೂರಪ್ಪ ಬಾಬು ಮಾತನಾಡಿದ್ದಾರೆ. ʻʻಸೋಷಿಯಲ್ ಮೀಡಿಯಾದಲ್ಲಿ ಯಾವುದೇ ಹಕ್ಕಿಲ್ಲದೇ ನನ್ನ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದಾರೆʼʼ ಎಂದು ಚಂದ್ರಚೂಡ್ಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಸತ್ಯ ಹರಿಶ್ಚಂದ್ರನ ತುಂಡು ಎಂದು ಅಂದ್ಕೊಂಡಿದ್ದೀರಾ?
ಸೂರಪ್ಪ ಬಾಬು ಮಾಧ್ಯಮದವರ ಮುಂದೆ ಮಾತನಾಡಿ ʻʻಚಂದ್ರಚೂಡ್ ಅವರು ಸೋಷಿಯಲ್ ಮೀಡಿಯಾದಲ್ಲಿ ನನ್ನ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದಾರೆ. ನಾನು ಉತ್ತರ ಕೊಡಬೇಕಾಗಿರುವುದು ನನಗೆ ಹಣ ಕೊಟ್ಟವರಿಗೆ ಹಾಗೂ ನನ್ನ ಮನೆಯವರಿಗೆ. ಸತ್ಯ ಹರಿಶ್ಚಂದ್ರನ ತುಂಡು ಎಂದು ಅಂದ್ಕೊಂಡಿದ್ದಾರಾ ಇವರು? ನನ್ನನ್ನು ಶಿಖಂಡಿ ಎಂದು ಹೇಳುತ್ತಿದ್ದಾರೆ. ನನಗೆ ಹೆಂಡತಿ, ಇಬ್ಬರು ಮಕ್ಕಳು ಇದ್ದಾರೆ. 34 ವರ್ಷ ಆಯ್ತು ಇಂಡಸ್ಟ್ರಿಗೆ ಬಂದು. ನಾನು ಕಾಫಿ ಲೋಟ ತೊಳೆಯುತ್ತಿದ್ದೆ. ಈಗ ಕೋಟಿ ಕೋಟಿಯ ಸಿನಿಮಾ ಮಾಡುತ್ತಿದ್ದೇನೆ ಎಂಬ ಹೆಮ್ಮೆ ನನಗಿದೆʼʼ ಎಂದರು.
ಚಂದ್ರಚೂಡ್ ಪ್ರಶ್ನೆಗಳಿಗೆ ಉತ್ತರ ಕೊಡಲು ಬಂದಿದ್ದೇನೆ
ಈ ಬಗ್ಗೆ ಮಾತು ಮುಂದುವರಿಸಿ ʻʻಚಂದ್ರಚೂಡ್ ಪ್ರಶ್ನೆಗಳಿಗೆ ಉತ್ತರ ಕೊಡಲು ಈಗ ಮಾಧ್ಯಮದ ಮುಂದೆ ಬಂದಿದ್ದೇನೆ. ಕೋಟಿಗೊಬ್ಬ 2 ಮತ್ತು 3ನಲ್ಲಿ ಯಾರಾದರೂ ನನಗೆ ಸಹಾಯ ಮಾಡಿದ್ದಾರಾ? ಚಂದ್ರಚೂಡ್ಗೆ ಇದು ಸಂಬಂಧ ಇಲ್ಲದೇ ಇರುವ ವಿಷಯ. ಕೋಟಿಗೊಬ್ಬ ಸಿನಿಮಾ ಮಾಡಿ ಮನೆ ಖರೀಸಿದ್ದೇನೆ ಎಂದು ಹೇಳುತ್ತಿದ್ದಾರೆ. ಜನವರಿ 30ಕ್ಕೆ ನಾನು ಮನೆ ಮಾರಿದ್ದೇನೆ. 2016ರವರೆಗೂ ಅನೇಕ ಸಿನಿಮಾಗಳನ್ನು ಮಾಡಿದ್ದೇನೆ. ಆ ನಟನ ಓಲೈಸುವುದಕ್ಕೆ ಎಂದು ಹೇಳುತ್ತಾರೆ. ಯಾರು ಆ ನಟ ಹೇಳಿ ತಾಕತ್ತು ಇದ್ದರೆ. ಶಿಖಂಡಿ ಎಂದು ಕರೆಯುತ್ತಾರೆ. ನಾನು ಯಾರಿಗೂ ಹೆದರಿಕೊಂಡು ಸಿನಿಮಾ ಮಾಡುತ್ತಿಲ್ಲʼʼ ಎಂದರು.
ಇದನ್ನೂ ಓದಿ: Kichcha Sudeepa: ಕಿಚ್ಚ-ಕುಮಾರ್ ಮನಸ್ತಾಪಕ್ಕೆ ಶಿವಣ್ಣ ಎಂಟ್ರಿ!
ವಾಣಿಜ್ಯ ಮಂಡಳಿ ಯಾರಪ್ಪಂದು?
“ಕೆಸಿಎನ್ ಕುಮಾರ್ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದು ನಿಜ. ಅವರನ್ನು ನಾನು ತಡೆದಿದ್ದೆ. ಅವರು ನನ್ನ ಸ್ನೇಹಿತರು. ಆದರೆ ನಾನು ಸಪೋರ್ಟ್ ಮಾಡಿದೆ ಎಂದು ಹೇಳಿದ್ದಾರೆ. ವಾಣಿಜ್ಯ ಮಂಡಳಿ ಯಾರಪ್ಪಂದು..? ನಾನು ಮೆಂಬರ್ ಅದಕ್ಕೆ. ಕಾರ್ಯಕಾರಿ ಸಮಿತಿ ಸದಸ್ಯ ಆಗಿದ್ದೆ ಎಂದುʼʼ ಚಂದ್ರಚೂಡ್ ಅವರಿಗೆ ಸೂರಪ್ಪ ಬಾಬು ವಾರ್ನಿಂಗ್ ಕೊಟ್ಟಿದ್ದಾರೆ.
ಸುದೀಪ್ ಸರ್ ನನ್ನ ಬಗ್ಗೆ ಎಲ್ಲೂ ಕಂಪ್ಲೇಂಟ್ ಮಾಡಿಲ್ಲ
ʻʻಯಾವಾಗ ನನ್ನ ಹೆಂಡತಿ ಮಕ್ಕಳ ವಿಷ್ಯಕ್ಕೆ ಬಂದ್ರಿ ಆವಾಗಲೇ ಕೋಪ ನೆತ್ತಿಗೆ ಏರಿತು. ಅದಕ್ಕೆ ಈಗ ಉತ್ತರಿಸುವ ಸಮಯ. ನನ್ನ ಸಿನಿಮಾದಲ್ಲಿ ನಟಿಸಿರುವ ಎಲ್ಲಾ ದೊಡ್ಡ ದೊಡ್ಡ ಹೀರೊಗಳೆ. ಸುದೀಪ್ ಸರ್ ನನ್ನ ಬಗ್ಗೆ ಎಲ್ಲೂ ಕಂಪ್ಲೇಂಟ್ ಮಾಡಿಲ್ಲ. ಇವತ್ತು 3 ಸಿನಿಮಾಗಳನ್ನು ದೊಡ್ಡ ಸ್ಟಾರ್ಗಳ ಜತೆ ಮಾಡುತ್ತಿದೇನೆ. ಕುಮಾರ್ ಏನೋ ಮಾತಾಡಿದ್ದಕ್ಕೆ ಮಾಡಿದ್ದಕ್ಕೆ ನಾನ್ ಜವಾಬ್ದಾರಿನಾ? ಆತನಿಗೆ ನ್ಯಾಯ ಕೊಡಿಸೋಕೆ ನಾಲ್ಕು ಜನ್ರ ಹತ್ರ ಹೋಗಿದ್ದೆ. ಸರಿ ಮಾಡಿ ಕೊಡಿ ಎಂದು. ಆದರೆ ಒಳ್ಳೆಯ ಕೆಲಸ ಮಾಡಿ ಇಲ್ಲ ಅಂದರೆ ಬಿಡಿ. ಸುದೀಪ್ ಅವರ ಬಾಯಲ್ಲಿ ನನ್ನ ಹೆಸರು ಬಂದಿಲ್ಲ. ಮಧ್ಯದಲ್ಲಿ ಇರುವವರು ಹುಳಿ ಹಿಂಡುತ್ತಿದ್ದಾರೆ. ನಾನು ಅವರು ಸಿನಿಮಾ ಮಾಡಬಹುದುʼʼ ಎಂದರು.
ವಿವಾದ ಮುಂದುವರಿಯಲಿದೆ!