ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಚಿತ್ರರಂಗ ಪ್ರವೇಶಿಸಿ 26 ವರ್ಷ ಕಳೆದಿದೆ. ಈ ಪಯಣದಲ್ಲಿ ಏಳು ಬೀಳು ಕಂಡಿರುವ ಕೋಟಿಗೊಬ್ಬನಿಗೆ ಈ ದಿನ ಬಹಳ ವಿಶೇಷ. ಸುದೀಪ್ ಸಿನಿಕರಿಯರ್‌ಗರ ದೊಡ್ಡ ಯಶಸ್ಸು ನೀಡಿದ ‘ಹುಚ್ಚ’ ಬಿಡುಗಡೆಯಾಗಿ ಸರಿಯಾಗಿ 22 ವರ್ಷ ಕಳೆದಿದೆ. 2001ರ ಜು.6ರಂದು ರಾಜ್ಯಾದ್ಯಂತ ಹುಚ್ಚ ರಿಲೀಸ್ ಆಗಿತ್ತು. ಡಿಫರೆಂಟ್ ಆದ ಶೀರ್ಷಿಕೆ, ಪೋಸ್ಟರ್‌ಗಳಲ್ಲಿ ಕಾಣಿಸಿಕೊಂಡ ಸುದೀಪ್ ಡಿಫರೆಂಟ್ ಗೆಟಪ್ ನೋಡಿ ಸಹಜವಾಗಿಯೇ ಚಿತ್ರದ ಬಗ್ಗೆ ಜನರಲ್ಲಿ ನಿರೀಕ್ಷೆ ಮೂಡಿತ್ತು. ಆ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದ್ದು ರಾಜೇಶ್ ರಾಮನಾಥ್ ಅವರ ಸುಮಧುರ ಹಾಡುಗಳು. ಜು.6ರಂದು ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರ ನಿರೀಕ್ಷೆ ಹುಸಿ ಆಗಲಿಲ್ಲ.
ಅದಾಗಿ 11 ವರ್ಷ ಕಳೆಯುವುದರಲ್ಲಿ, ಅಂದರೆ 2012ರಲ್ಲಿ ಸುದೀಪ್ ನಿರ್ದೇಶಕ ರಾಜಮೌಳಿ ಜತೆ ಸಿನಿಮಾ ಮಾಡುವ ಮಟ್ಟಕ್ಕೆ ಬೆಳೆದರು. ಕನ್ನಡದಲ್ಲಿ ಸ್ಟಾರ್ ನಟನಾಗಿದ್ದ ಅವರ ಜತೆ ಜಕ್ಕಣ್ಣ ಜತೆ ಕೈ ಜೋಡಿಸಿ ‘ಈಗ’ ಸಿನಿಮಾ ಮಾಡಿದರು. ತೆಲುಗು ಮತ್ತು ತಮಿಳಿನಲ್ಲಿ ಆ ಚಿತ್ರ ಬಿಡುಗಡೆಯಾಗಿ ಜಯಭೇರಿ ಬಾರಿಸಿತು. ‘ಈಗ’ ರಿಲೀಸ್ ಆಗಿದ್ದು ಕೂಡ ಜು.6ರಂದು. ಅಂದರೆ ಇವತ್ತಿಗೆ 11 ವರ್ಷ. ಹೀಗಾಗಿ ಕಿಚ್ಚ ಸುದೀಪ್ ಪಾಲಿಗೆ ಜುಲೈ 6 ತುಂಬಾ ಸ್ಪೆಷಲ್.
ಧೂಳ್ ಎಬ್ಬಿಸಿದ ಕಿಚ್ಚ 46 ಟೀಸರ್
ಈ ಟೀಸರ್‌ನಲ್ಲಿ ಕಿಚ್ಚನ ಮಾಸ್ ಡೈಲಾಗ್ ಹೈಲೈಟ್ ಆಗಿದೆ. ʻಯುದ್ಧ ಹುಟ್ಟಾಕೋರ್ ಕಂಡ್ರು ನಂಗಗಾಗಲ್ಲ. ಯುದ್ಧಕ್ಕೆ ಹೆದರ್‌ಕೊಂಡು ಓಡೋಗರ್ ಕಂಡ್ರು ನಂಗಾಗಲ್ಲ. ಅಖಾಡಕ್ಕೆ ಇಳಿದು, ಎದುರಾಳಿಗಳ ಎದೆ ಬಗ್ದು ರಕ್ತ ಚೆಲ್ಲಾಡಿ, ಆ ರಕ್ತ ಸುರ್ಸ್‌ಕೊಂಡು ಓಡೋಗದನ್ನ ನೋಡೋನು ನಾನುʼʼ ಎಂಬ ಖಡಕ್ ಡೈಲಾಗ್ ಹೊಡೆದಿದ್ದಾರೆ ಕಿಚ್ಚ. ಇದೀಗ ಈ ಡೈಲಾಗ್ ಟ್ರೆಂಡ್ ಆಗುತ್ತಿದೆ. ಕಿಚ್ಚ ಸುದೀಪ್ ಅವರ ಕಿಚ್ಚ 46 ಟೀಸರ್ ಬಿಡುಗಡೆಗೊಂಡಿದ್ದು, ಎದೆ ಬಗೆಯುವ ಡೈಲಾಗ್ ಹೊಡೆದಿದ್ದಾರೆ ಅಭಿನಯ ಚಕ್ರವರ್ತಿ.
ಇದನ್ನೂ ಓದಿ: Kichcha Sudeep: ಯುದ್ಧದ ಮುನ್ನುಡಿ ಬರೆದ ಆರಡಿ ಕಟೌಟ್; ಕಿಚ್ಚ 46′ ಟೀಸರ್ ಔಟ್!
ಸದ್ಯದಲ್ಲೇ ಕಿಚ್ಚ-46 ಶೂಟಿಂಗ್ ಶುರುವಾಗಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಕಿಚ್ಚ 46 ಸಿನಿಮಾ ತಂಡ ದಿನೇದಿನೆ ಹೊಸ ಅಪ್‌ಡೇಟ್ ಹಂಚಿಕೊಳ್ಳುತ್ತಲೇ ಇತ್ತು. ಹೀಗಿರುವಾಗ ಫ್ಯಾನ್ಸ್ ಟೀಸರ್ ಬಿಡುಗಡೆ ಯಾವಾಗ ಎಂದು ಪ್ರಶ್ನೆ ಕೇಳುತ್ತಲೇ ಇದ್ದರು. ಇದೀಗ ಎಲ್ಲದಕ್ಕೂ ಉತ್ತರ ಸಿಕ್ಕಿದೆ. ಕಿಚ್ಚ 46 ಸಿನಿಮಾವನ್ನು ತಮಿಳಿನಲ್ಲಿ ‘ಕಬಾಲಿ’, ‘ತುಪಾಕಿ’, ‘ಅಸುರನ್’ ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡಿದ ಖ್ಯಾತಿಯ ‘ವಿ ಕ್ರಿಯೇಷನ್ಸ್’ ಸಂಸ್ಥೆ ನಿರ್ಮಾಣ ಮಾಡಿದೆ. ಈ ಬ್ಯಾನರ್ ಜತೆ ಸುದೀಪ್ ಅವರು ಸಿನಿಮಾ ಮಾಡಲಿರುವುದು ವಿಶೇಷ. ಇದೇ ಜುಲೈ 15ರಿಂದ ಸುದೀಪ್ ಹೊಸ ಚಿತ್ರದ ಶೂಟಿಂಗ್ ಅಖಾಡಕ್ಕೆ ಧುಮುಕಲಿದ್ದಾರೆ.