ಮೈಸೂರು: ಕಿಚ್ಚ ಸುದೀಪ್ (Kichcha Sudeep) ನಟನೆಯ ವಿಕ್ರಾಂತ್ ರೋಣ 150 ಕೋಟಿ ರೂ. ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡುವತ್ತ ಮುಖ ಮಾಡಿದೆ. ವಿಶ್ವಾದ್ಯಂತ ಸದ್ದು ಮಾಡುತ್ತಿರುವ ಬೆನ್ನಲ್ಲೆ ಕಿಚ್ಚ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಗುರುವಾರ (ಆ.4) ಭೇಟಿ ನೀಡಿ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿದ್ದಾರೆ.
ನಟ ಸುದೀಪ್ ಅವರನ್ನು ನೋಡುತ್ತಿದ್ದಂತೆ ಅವರ ಅಭಿಮಾನಿಗಳು ಮುಗಿಬಿದ್ದರು. ಸುದೀಪ್ ಅವರ ಭಾವಚಿತ್ರವನ್ನು ಹಿಡಿದು ಫ್ಯಾನ್ಸ್ ಬಂದಿದ್ದು ವಿಶೇಷವಾಗಿತ್ತು. ಚಾಮುಂಡಿ ಬೆಟ್ಟಕ್ಕೆ ಬರುತ್ತಿದ್ದಂತೆ ಅಭಿಮಾನಿಗಳು ಸುದೀಪ್ ಅವರ ಮೇಲೆ ಹೂ ಮಳೆ ಚೆಲ್ಲಿದ್ದಾರೆ. ಆಗಾಗ ನಟ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ.
ಇದನ್ನೂ ಓದಿ | kannada Bigg Boss | ಮೊಟ್ಟ ಮೊದಲ ಬಾರಿಗೆ ವೂಟ್‌ನಲ್ಲಿ ಬಿಗ್ ಬಾಸ್: ಕಿಚ್ಚ ಹೇಳಿದ್ದೇನು?
ವಿಕ್ರಾಂತ್ ರೋಣ ಸಿನಿಮಾ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಮಿಶ್ರ ಪ್ರತಿಕ್ರಿಯೆ ಬಂದಿದೆ. ಸಿನಿಮಾದಲ್ಲಿ ರಾರಾ ರಕ್ಕಮ್ಮ ಹಾಡು ಸಖತ್ ಸೌಂಡ್ ಮಾಡುತ್ತಿದೆ. ಈ ಸಿನಿಮಾ ಕಿಚ್ಚನ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ.
ಪ್ರಪಂಚದಾದ್ಯಂತ 2,500 ಸ್ಕ್ರೀನ್ ಹಾಗೂ 9500 ಶೋಗಳು, ಕರ್ನಾಟಕ 400 ಸ್ಕ್ರೀನ್‌ನಲ್ಲಿ 2500 ಶೋಗಳು, ಬೆಂಗಳೂರು 110 ಸ್ಕ್ರೀನ್‌ನಲ್ಲಿ 1200 ಶೋಗಳು, ಆಂಧ್ರ, ತೆಲಂಗಾಣಗಳಲ್ಲಿ 350 ಸ್ಕ್ರೀನ್‌ನಲ್ಲಿ 1400 ಶೋಗಳು, ತಮಿಳುನಾಡು 250 ಸ್ಕ್ರೀನ್‌ನಲ್ಲಿ 1000 ಶೋಗಳು, ಕೇರಳ 110 ಸ್ಕ್ರೀನ್‌ನಲ್ಲಿ 600 ಶೋಗಳು, ಉತ್ತರ ಭಾರತದ 690 ಸ್ಕ್ರೀನ್‌ಗಳಲ್ಲಿ 2800 ಶೋಗಳು, ವಿದೇಶಗಳ 600 ಸ್ಕ್ರೀನ್‌ಗಳಲ್ಲಿ 1500 ಶೋಗಳು ಹಾಗೂ 900 3ಡಿ ಸ್ಕ್ರೀನ್‌ಗಳು ಮತ್ತು 1600 2ಡಿ ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಮಾಡಲಾಗುತ್ತಿದೆ.
ಇದನ್ನೂ ಓದಿ | Vikrant Rona | ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದ ಕಿಚ್ಚ ಸುದೀಪ್