ಬೆಂಗಳೂರು: ನಿರ್ಮಾಪಕ ಎಂಎನ್ ಕುಮಾರ್ (MN Kumar) ಹಾಗೂ ಕಿಚ್ಚ ಸುದೀಪ್ (Kichcha Sudeepa) ಮಧ್ಯೆ ಮನಸ್ತಾಪ ಉಂಟಾಗಿದೆ. ಸುದೀಪ್ ಚಿತ್ರಗಳನ್ನು ಕುಮಾರ್ ನಿರ್ಮಾಣ ಮಾಡಿದ್ದರು. ಈ ಜಟಾಪಟಿ ದಿನೇ ದಿನೇ ಮುಂದುವರಿಯುತ್ತಲೇ ಇದೆ. ‘ನಾನು ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತೇನೆ. ಅಲ್ಲಿಯವರೆಗೆ ಎಲ್ಲರೂ ಶಾಂತರಾಗಿರಿʼʼಎಂದು ರವಿಚಂದ್ರನ್ ಈಗಾಗಲೇ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಇದೀಗ ನಿರ್ಮಾಪಕ ಕುಮಾರ್ ಅವರು ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.
ಈ ಬಗ್ಗೆ ಶಿವಣ್ಣ ಮಾತನಾಡಿ ʻʻಚಿತ್ರತಂಡ ಒಂದು ಕುಟುಂಬವಿದ್ದಂತೆ. ಕುಮಾರ್ ಹಾಗೂ ಸುದೀಪ್ ನಡುವೆ ಏನಾಗಿದೆ ಎಂಬುದು ಅವರವರಿಗೆ ಗೊತ್ತು. ನಿರ್ಮಾಪಕರು ಹಾಗೂ ನಟ ಎರಡೂ ಪಿಲ್ಲರ್ ಇದ್ದಾಗೆ. ಅಪ್ಪಾಜಿ ಸಾಹುಕಾರ ಎಂದು ರವಿಚಂದ್ರನ್ ಅವರಿಗೆ ಹೇಳುತ್ತಿದ್ದರು. ಚಿತ್ರರಂಗಕ್ಕೆ ರವಿಚಂದ್ರನ್ ಬಂದು 40 ವರ್ಷ ಆಯ್ತು. ರವಿಚಂದ್ರನ್ ಅವರು ಏನು ಹೇಳುತ್ತಾರೆ ಅದರ ಮೇಲೆ ನಿಲ್ಲುತ್ತದೆ. ಲೆಕ್ಕಾಚಾರ ಬಗ್ಗೆ ನನ್ನ ಜತೆ ಮಾತನಾಡುವುದು ತಪ್ಪಾಗುತ್ತದೆ. ನಟರಾಗಿ ನಾನು ಸುದೀಪ್ ಜತೆ ಮಾತನಾಡಲಿಕ್ಕೆ ಆಗುವುದಿಲ್ಲ. ನಟನಿಗೆ ಗೌರವ ನೀಡಬೇಕು” ಎಂದರು.
ಇದನ್ನೂ ಓದಿ; Kichcha Sudeepa: ಕಿಚ್ಚನ ಅಕ್ಕನ ಮಗ ಸಂಚಿತ್ ಸಂಜೀವ್ ಸಿನಿಮಾದ ಕ್ಯಾರೆಕ್ಟರ್ ಗ್ಲಿಂಪ್ಸ್ ಔಟ್!
ಎರಡು ದಿನಗಳಿಂದ ಫಿಲ್ಮ್ ಚೇಂಬರ್ ಎದುರು ಧರಣಿ ನಡೆಸುತ್ತಿದ್ದ ಎಂ.ಎನ್. ಕುಮಾರ್ ಅವರಿಗೆ ಜುಲೈ 18ರಂದು ಸಾರಾ ಗೋವಿಂದ್ ಸೇರಿದಂತೆ 20ಕ್ಕೂ ಹೆಚ್ಚು ಮಂದಿ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲರೂ ಸಹ ಸುದೀಪ್ ಈ ವಿಷಯದಲ್ಲಿ ಕೋರ್ಟ್‌ಗೆ ಹೋಗಿದ್ದು ಸರಿಯಲ್ಲ. ಎಲ್ಲರೂ ಕುಳಿತು ಮಾತನಾಡಿಕೊಳ್ಳಬೇಕಿತ್ತು. ಈ ರೀತಿಯ ನಿರ್ಧಾರ ಒಳ್ಳೆಯದಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕುಮಾರ್ ವಿರುದ್ಧ ಸುದೀಪ್ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಸುದೀಪ್ ಅವರು ಈ ಪ್ರಕರಣವನ್ನು ಕೋರ್ಟ್ನಲ್ಲೇ ಬಗೆಹರಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಾಗಿ, ಅವರು ಈ ಪ್ರಕರಣದಲ್ಲಿ ಹೆಚ್ಚು ತಲೆಕೆಡಿಸಿಕೊಂಡಿಲ್ಲ.