Site icon Vistara News

Kichcha Sudeepa: 17 ವರ್ಷ ಪೂರೈಸಿದ ʻಮೈ ಆಟೋಗ್ರಾಫ್‌ʼ: ಬೆಂಬಲವಾಗಿ ನಿಂತವರಿಗೆ ವಿಶೇಷ ಧನ್ಯವಾದ ಸೂಚಿಸಿದ ಕಿಚ್ಚ ಸುದೀಪ್‌

Kichcha Sudeepa my autograph kannada movie

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ (Kichcha Sudeepa) ಅಭಿನಯದ ʻಮೈ ಆಟೋಗ್ರಾಫ್‌ʼ ಸಿನಿಮಾ ತೆರೆಕಂಡು 17 ವರ್ಷ ಕಳೆದಿವೆ. 2006 ಫೆ.17ರಂದು ತೆರೆ ಕಂಡ ಸಿನಿಮಾ ಬಗ್ಗೆ ಕಿಚ್ಚ ಸುದೀಪ್‌ ಟ್ವೀಟ್ ಮಾಡಿದ್ದಾರೆ. ಸಿನಿಮಾ ಬಗೆಗಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಕಿಚ್ಚ ಸುದೀಪ್‌ ಅವರು ನಿರ್ದೇಶನ ಮಾಡಿದ ಮೊದಲ ಸಿನಿಮಾ ಮೈ ಆಟೋಗ್ರಾಫ್‌. ಕಿಚ್ಚ ಸುದೀಪ್​, ಮೀನಾ, ಶ್ರೀದೇವಿಕಾ, ದೀಪಾ ಭಾಸ್ಕರ್​ ಮುಂತಾದವರು ನಟಿಸಿದ್ದಾರೆ. ತಮಿಳು ಸಿನಿಮಾದ ರಿಮೇಕ್‌ ಆಗಿದ್ದರೂ ಕನ್ನಡದ ಪ್ರೇಕ್ಷಕರಿಗೆ ಇಷ್ಟವಾದ ಸಿನಿಮಾ ಇದು. ಭಾರದ್ವಜ್​ ಸಂಗೀತ ನಿರ್ದೇಶನದಲ್ಲಿ ಬಂದ ‘ಮೈ ಆಟೋಗ್ರಾಫ್​’ ಸಿನಿಮಾದ ಎಲ್ಲ ಹಾಡುಗಳು ಸೂಪರ್​ ಹಿಟ್​ ಆದವು. ‘ಅರಳುವ ಹೂವುಗಳೇ ಆಲಿಸಿರಿ..’, ‘ಸವಿ ಸವಿ ನೆನಪು..’ ಹಾಡುಗಳು ಸಖತ್‌ ಹಿಟ್‌ ಕಂಡವು.

ಸುದೀಪ್‌ ಟ್ವೀಟ್‌ ಮಾಡಿ ʻʻನಿರ್ದೇಶನಕ್ಕೆ ಕೈ ಹಾಕಿ 17 ವರ್ಷಗಳು ಆಯಿತು. ನಿರ್ದೇಶಕರ ಕುರ್ಚಿಯಲ್ಲಿರುವುದು ಯಾವಾಗಲೂ ಉತ್ತಮ ಭಾವನೆಯಾಗಿದೆ. ನನ್ನ ಬೆಂಬಲಕ್ಕೆ ನಿಂತ ಪ್ರತಿಯೊಬ್ಬ ನಟ, ತಂತ್ರಜ್ಞ, ನಿರ್ಮಾಣ ತಂಡ, ಬೆಂಬಲ ಸಿಬ್ಬಂದಿ ಮತ್ತು ಸೆಟ್‌ನಲ್ಲಿರುವ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Kiccha Sudeep : ವಾಲ್ಮೀಕಿ ಜಾತ್ರೆಗೆ ಬಾರದ ನಟ ಕಿಚ್ಚ ಸುದೀಪ್‌, ಸಿಟ್ಟಿಗೆದ್ದ ಅಭಿಮಾನಿಗಳಿಂದ ಭಾರಿ ದಾಂಧಲೆ, ಲಾಠಿಚಾರ್ಜ್‌

ಇದನ್ನೂ ಓದಿ: Kichcha Sudeep : ಶಿಖರ್​ ಧವನ್​, ಕಿಚ್ಚ ಸುದೀಪ್​ ಸೌಹಾರ್ದ ಭೇಟಿ; ಅಭಿಮಾನಿಗಳ ಸಂಭ್ರಮ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 1997 ರಲ್ಲಿ ತಾಯವ್ವ ಚಿತ್ರದ ಮೂಲಕ ಬಣ್ಣ ಹಚ್ಚಿದ್ದರು. ಅದಾದ ಮೇಲೆ ರಮೇಶ್ ಅರವಿಂದ್ ಅಭಿನಯ ದ ಪ್ರತ್ಯರ್ಥ ಚಿತ್ರದಲ್ಲಿ ಅಭಿನಯಿಸಿದ್ದರು. 2000ರಲ್ಲಿ ತೆರೆಗೆ ಬಂದ ಸ್ಪರ್ಶ ಚಿತ್ರ ಕಿಚ್ಚನ ವಿಶೇಷ ಚಿತ್ರವೇ ಆಗಿತ್ತು. ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದಲ್ಲಿ ಸುದೀಪ್ ಕನ್ನಡಿಗರಿಗೆ ಪರಿಚಯ ಆದರು.

Exit mobile version