Site icon Vistara News

Kichcha Sudeepa: ಟ್ವೀಟ್ ಮಾಡಿ ಬ್ರೇಕಿಂಗ್ ನ್ಯೂಸ್ ಕೊಟ್ಟ ಕಿಚ್ಚ ಸುದೀಪ್‌!

Kichcha Sudeepa New Movie Teaser

ಬೆಂಗಳೂರು: ಕಿಚ್ಚ ಸುದೀಪ್ (Kichcha Sudeepa) ಅವರ ಮುಂದಿನ ಚಿತ್ರ, ʻಕಿಚ್ಚ 46ʼ ಸಿನಿಮಾವನ್ನು ತಮಿಳು ನಿರ್ಮಾಪಕ ಕಲೈಪುಲಿ ಎಸ್‌ ಧಾನು ಇತ್ತೀಚೆಗೆ ಘೋಷಿಸಿದ್ದರು. ಇದೀಗ ಕಿಚ್ಚ ಮತ್ತೆ ತಮ್ಮ ಚಿತ್ರದ ಬಗ್ಗೆ ಹೊಸ ಅಪ್‌ಡೇಟ್‌ ನೀಡಿದ್ದಾರೆ. ಜೂನ್ 25ರಂದು ಕಿಚ್ಚ ಅವರ ಸೋದರಳಿಯ ಸಂಚಿತ್‌ ಸಂಜೀವ್ ಸಿನಿಮಾದ ಅನೌನ್ಸ್‌ಮೆಂಟ್ ಟೀಸರ್ ಹಾಗೂ 27ರಂದು ತಮ್ಮ 46ನೇ ಸಿನಿಮಾದ ಟೀಸರ್ ರಿಲೀಸ್ ಆಗಲಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ನಟ ಕಿಚ್ಚ ಸುದೀಪ್ ಅವರು ಜೂನ್ 23 ರಾತ್ರಿ ತಮ್ಮ ಹೊಸ ಸಿನಿಮಾದ ಅಪ್‌ಡೇಟ್ ಬಗ್ಗೆ ಟ್ವೀಟ್ ಮಾಡಿ, ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ‘ನನ್ನ ಮುಂದಿನ 46ನೇ ಸಿನಿಮಾದ ಟೀಸರ್ (Teaser) ತಯಾರಾಗಿದೆ. ಆದರೆ ಜೂನ್ 25ರಂದು ಸಂಚಿತ್ ಸಂಜೀವ್ ನಟನೆಯ ಚೊಚ್ಚಲ ಸಿನಿಮಾದ ಅನೌನ್ಸ್‌ಮೆಂಟ್ ಟೀಸರ್ ರಿಲೀಸ್ ಆಗಲಿದೆ. ನಾವೆಲ್ಲರೂ ಅದಕ್ಕಾಗಿ ಕಾಯುತ್ತಿದ್ದೇವೆ. ನನ್ನ ಮುಂದಿನ ಸಿನಿಮಾದ ಟೀಮ್ ತುಂಬ ಕಠಿಣ ಶ್ರಮ ಹಾಕಿ ಕೆಲಸ ಮಾಡುತ್ತಿದೆ. K46 ಟೀಸರ್ ಜೂನ್‌ 27ರಂದು ನಿಮ್ಮ ಮುಂದೆ ತರಲು ಎಲ್ಲರೂ ಉತ್ಸುಕರಾಗಿದ್ದಾರೆ’ ಎಂದು ‘ಕಿಚ್ಚ’ ಸುದೀಪ್ ಹೇಳಿದ್ದಾರೆ.

ಕಿಚ್ಚ ಸುದೀಪ್‌ ಟ್ವೀಟ್‌

ಸಂಚಿತ್ ಸಿನಿಮಾದ ಅನೌನ್ಸ್‌ಮೆಂಟ್ ಟೀಸರ್

ಸ್ಯಾಂಡಲ್‌ವುಡ್‌ಗೆ ಕಿಚ್ಚ ಸುದೀಪ್ (Kichcha Sudeepa) ಅಳಿಯ ಸಂಚಿತ್ ಸಂಜೀವ್ ಕಾಲಿಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಸುದೀಪ್ ಅಕ್ಕ ಸುಜಾತಾ ಪುತ್ರ ಸಂಚಿತ್ ಸಂಜೀವ್ ಚಂದನವನಕ್ಕೆ ಗ್ರ್ಯಾಂಡ್‌ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿತ್ತು. ಮುಂಚೆಯೇ ಕಿಚ್ಚನ ʼಅಂಬಿ ನಿಂಗೆ ವಯಸ್ಸಾಯ್ತೋʼ, ʼವಿಕ್ರಾಂತ್‌ ರೋಣʼ ಸಿನಿಮಾಗಳಲ್ಲಿ ಸಂಚಿತ್‌ ಕೆಲಸ ಮಾಡಿದ್ದರು. ಕಿಚ್ಚ ಅವರ ಅಳಿಯನ ಹೊಸ ಸಿನಿಮಾಗೆ ʻಜಿಮ್ಮಿʼ ಎಂದು ಹೆಸರಿಡಲಾಗಿದೆ. ಜೂನ್‌ 15ರಂದು ʻಜಿಮ್ಮಿʼ ಸಿನಿಮಾದ ಮುಹೂರ್ತ ನೆರವೇರಿತ್ತು. ಆದರೆ ಚಿತ್ರತಂಡದ ಬಗ್ಗೆ ಹೆಚ್ಚೇನೂ ಮಾಹಿತಿ ನೀಡಿರಲಿಲ್ಲ ಸಂಚಿತ್. ಇದೀಗ ಜೂನ್‌ 25ರಂದು ನಡೆಯಲಿರುವ ಅನೌನ್ಸ್‌ಮೆಂಟ್‌ ಟೀಸರ್ ಲಾಂಚ್‌ನಲ್ಲಿ ಹೆಚ್ಚಿನ ಮಾಹಿತಿ ಸಿಗುವ ನಿರೀಕ್ಷೆ ಇದೆ. ಸಂಚಿತ್ ಸಂಜೀವ್ ಅವರು ತಮ್ಮ ಮೊದಲ ಸಿನಿಮಾವನ್ನು ತಾವೇ ನಿರ್ದೇಶನ ಮಾಡಲಿದ್ದಾರೆ. ವೀನಸ್‌ ಎಂಟರ್‌ಟೇನ್‌ಮೆಂಟ್‌ನ ಕೆ ಪಿ ಶ್ರೀಕಾಂತ್‌, ಲಹರಿ ಫಿಲ್ಮ್ಸ್‌ನ ಮನೋಹರ್‌ ನಾಯ್ಡು ಮತ್ತು ಪ್ರಿಯಾ ಸುದೀಪ್ ಹಣ ಹಾಕುತ್ತಿದ್ದಾರೆ.

ಇದನ್ನೂ ಓದಿ: Kichcha Sudeepa: ಕಿಚ್ಚ ಸುದೀಪ್‌ ಅಳಿಯ ʻಸಂಚಿತ್ ಸಂಜೀವ್ʼ ಹೊಸ ಸಿನಿಮಾದ ಮುಹೂರ್ತ ನಾಳೆ; ನಾಯಕನಿಗಿದೆ ಡಬಲ್‌ ಜವಾಬ್ದಾರಿ!

ಕಿಚ್ಚ ಸುದೀಪ್ ಜತೆ ತೆರೆ ಹಂಚಿಕೊಳ್ಳಲಿದ್ದಾರೆ ಸಿಮ್ರತ್ ಕೌರ್

ಇತ್ತೀಚಿನ ಸುದ್ದಿ ಏನೆಂದರೆ ಗದರ್ -2 ನಟಿ ಸಿಮ್ರತ್ ಕೌರ್ ( Simrat Kaur) ಕಿಚ್ಚ 46 ಸಿನಿಮಾದಲ್ಲಿ ಕಿಚ್ಚ ಸುದೀಪ್ ಜತೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಕಿಚ್ಚ 46 ಸಿನಿಮಾದಲ್ಲಿ ಸುದೀಪ್ ಪೊಲೀಸ್ ಪಾತ್ರವನ್ನು ನಿಭಾಯಿಸಲಿದ್ದಾರೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲದೇ ಥ್ರಿಲ್ಲರ್ ಸಿನಿಮಾ ಎಂದು ಸಾಕಷ್ಟು ಊಹಾಪೋಹಗಳಿವೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಸುದ್ದಿ ಚಿತ್ರತಂಡ ಹೇಳಿಕೊಂಡಿಲ್ಲ.

ಇದನ್ನೂ ಓದಿ: Kiccha Sudeep: ಅಭಿಷೇಕ್ ಅಂಬರೀಷ್​ಗೆ ಭರ್ಜರಿ ಗಿಫ್ಟ್‌ ಕೊಟ್ಟ ಕಿಚ್ಚ ಸುದೀಪ್‌!

ಈಗಾಗಲೇ ಕಿಚ್ಚನ ಕೈಯಲ್ಲಿ ಮೂರು ಸಿನಿಮಾಗಳಿವೆ. ವರದಿ ಪ್ರಕಾರ ಮೊದಲು ಸಿನಿಮಾವಾಗಿ ‘ಬಿಲ್ಲ ರಂಗ ಬಾಷಾ’ (Billa Ranga Basha) ಮೂಡಿ ಬರಲಿದೆ. ಈ ಸಿನಿಮಾಗೆ ಅನೂಪ್ ಭಂಡಾರಿ ನಿರ್ದೇಶನ ಮಾಡಲಿದ್ದು, ವಿಕ್ರಾಂತ್ ರೋಣದ ನಂತರ ಈ ಜೋಡಿ ಮತ್ತೆ ಒಂದಾಗುತ್ತಿದೆ ಎನ್ನಲಾಗಿದೆ. ಭಾರಿ ಬಜೆಟ್ ಚಿತ್ರ ಇದಾಗಿದ್ದು, ಕನ್ನಡ ಮತ್ತು ತಮಿಳಿನಲ್ಲಿ ಈ ಸಿನಿಮಾ ಏಕಕಾಲಕ್ಕೆ ರೆಡಿಯಾಗಲಿದೆ. ಅರ್ಜುನ್ ಜನ್ಯ ಬದಲಾಗಿ ಈ ಚಿತ್ರಕ್ಕೆ ಹ್ಯಾರೀಸ್ ಜೈರಾಜ್ ಎನ್ನುವವರು ಸಂಗೀತ ಸಂಯೋಜನೆ ಮಾಡಲಿದ್ದಾರೆ.

Exit mobile version