Site icon Vistara News

Kichcha Sudeepa: ಸಿನಿಮಾಗೆ ಕಾಲಿಟ್ಟ ಅಕ್ಕನ ಮಗನಿಗೆ ಕಿಚ್ಚ ಸುದೀಪ್‌ ಕಿವಿ ಮಾತು; ಟೈಟಲ್ ಕೊಟ್ಟಿದ್ದು ಯಾರು?

Kichcha Sudeepa Sanchith Sanjeev

ಬೆಂಗಳೂರು: ಕಿಚ್ಚ ಸುದೀಪ್‌ (Kichcha Sudeepa) ಅವರ ಅಕ್ಕನ ಮಗ ಸಂಚಿತ್ ಸಂಜೀವ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಸಂಚಿತ್‌ ಅವರ ಮೊದಲ ಚಿತ್ರಕ್ಕೆ ‘ಜಿಮ್ಮಿ’ ಎಂದು ಟೈಟಲ್ ಇಡಲಾಗಿದೆ. ಈ ಚಿತ್ರವನ್ನು ಸಂಚಿತ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಹೀರೊ ಇಂಟ್ರೊಡಕ್ಷನ್ ಟೀಸರ್ ರಿಲೀಸ್ ಮಾಡಲಾಗಿದೆ. ಈ ಟೈಟಲ್ ನೀಡಿದ್ದು ಯಾರು ಎನ್ನುವ ಪ್ರಶ್ನೆಗೆ ಸುದೀಪ್ ಉತ್ತರ ನೀಡಿದ್ದಾರೆ. ಆ ವ್ಯಕ್ತಿಯನ್ನು ಹಾಡಿ ಹೊಗಳಿದ್ದಾರೆ ಸುದೀಪ್.

ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿರುವ ಅಳಿಯನಿಗೆ ನಟ ಕಿಚ್ಚ ಸುದೀಪ್ ಕಿವಿಮಾತು ಹೇಳಿದ್ದಾರೆ. ಹಿರಿಯರು ನಡೆಸಿಕೊಂಡು ಬಂದ ದೊಡ್ಡ ಕೋಟೆ ಸ್ಯಾಂಡಲ್‍ವುಡ್‌, ಅದಕ್ಕೆ ನೀವು ಕಾಲಿಡುತ್ತಿದ್ದೀರಿ. ಬೆಳೆಸಲಾಗದಿದ್ದರೂ ಕಾಪಾಡಿಕೊಂಡು ಹೋಗಿ ಎಂದು ಅಳಿಯ ಸಂಚಿತ್‌ಗೆ ಹೇಳಿದ್ದಾರೆ. ಚಿತ್ರರಂಗದ ನಿಮ್ಮ ಸಮಕಾಲೀನ ನಟರೆಲ್ಲರ ಜತೆ ಚೆನ್ನಾಗಿರಿ, ಸ್ನೇಹ ಬೆಳೆಸಿಕೊಳ್ಳಿ ಎಂದು ಸಲಹೆ ಕೊಟ್ಟಿದ್ದಾರೆ.

ʻಜಿಮ್ಮಿ’ ಟೈಟಲ್ ನೀಡಿದ್ದು ಅನೂಪ್ ಭಂಡಾರಿ. ಟೈಟಲ್ ನೀಡಿದ್ದಕ್ಕೆ ಥ್ಯಾಂಕ್ಸ್​ ಎಂದಿದ್ದಾರೆ ಸುದೀಪ್​. ಸುದೀಪ್‌ ವೇದಿಕೆಯಲ್ಲಿ ಮಾತನಾಡಿ ʻʻಸಂಚಿತ್ ಅವರನ್ನ ವೇದಿಕೆಗೆ ಕರೆತರಬೇಕು ಎನ್ನುವುದು ನನ್ನ ವೈಯಕ್ತಿಕ ಆಸೆ. ನಮ್ಮ ಮನೆಯ ಮಗನಿಗೆ ಆಶೀರ್ವಾದ ತುಂಬಾ ಇದೆ. ಜಿಮ್ಮಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಪ್ರಿಯಾ ಸುದೀಪ್, ಲಹರಿ ವೇಲು, ಕೆ.ಪಿ. ಶ್ರೀಕಾಂತ್ ಅವರಿಗೆ ನನ್ನ ಧನ್ಯವಾದ. ಕುಟುಂಬದ ಸಪೋರ್ಟ್‌ನಿಂದಲೇ ನಾನು ಇವತ್ತು ಈ ವೇದಿಕೆಯಲ್ಲಿ ನಿಂತಿರುವುದು. ನನ್ನ ತಂದೆ ತಾಯಿಯೇ ನನ್ನ ಸ್ಟ್ರೇಂತ್‌. ಕನ್ನಡ ಚಿತ್ರರಂಗದಲ್ಲಿ ನೀವು ಬೆಳೆದಿಲ್ಲ ಅಂದರೂ ಕನ್ನಡ ಬಾಷೆಯನ್ನು ಉಳಿಸಿʼʼ ಎಂದರು ಕಿಚ್ಚ.

ಸುದೀಪ್ ಹ್ಯಾಟ್ರಿಕ್ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಪೈಕಿ ಅನೂಪ್ ಜತೆಗೂಡಿ ಸುದೀಪ್ ಒಂದು ಸಿನಿಮಾ ಮಾಡುತ್ತಿದ್ದಾರೆ. ಇದಕ್ಕೆ ‘ಬಿಲ್ಲ ರಂಗ ಭಾಷ’ ಎಂಬ ಟೈಟಲ್ ಇಡಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಶೀಘ್ರವೇ ಘೋಷಣೆ ಆಗಲಿದೆ.

ಇದನ್ನೂ ಓದಿ: Kichcha Sudeepa: ಟ್ವೀಟ್ ಮಾಡಿ ಬ್ರೇಕಿಂಗ್ ನ್ಯೂಸ್ ಕೊಟ್ಟ ಕಿಚ್ಚ ಸುದೀಪ್‌!

ಭರ್ಜರಿ ತಯಾರಿಯೊಂದಿಗೆ ಸಂಜಿತ್‌ ಬಣ್ಣದ ಲೋಕಕ್ಕೆ ಆಗಮಿಸಲಿದ್ದಾರೆ. ಇನ್ನು ವಿಶೇಷ ಎಂದರೆ ತಮ್ಮ ಮೊದಲ ಸಿನಿಮಾವನ್ನು ತಾವೇ ನಿರ್ದೇಶನ ಮಾಡಿಕೊಳ್ಳುತ್ತಿದ್ದಾರೆ. ಕಿಚ್ಚ ಕ್ರಿಯೇಷನ್ಸ್‌ ಬ್ಯಾನರ್‌ ಜತೆ ಕೆ. ಪಿ ಶ್ರೀಕಾಂತ್‌ ಹಾಗೂ ಮನೋಹರ್‌ ನಾಯ್ಡು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಂಚಿತ್ ಸಂಜೀವ್ ಈಗಾಗಲೇ ಸಿನಿಮಾದ ಬಹುತೇಕ ವಿಷಯಗಳನ್ನ ತಿಳಿದುಕೊಂಡಿದ್ದಾರೆ. ಕಿರು ಚಿತ್ರ ಕೂಡ ನಿರ್ದೇಶನ ಮಾಡಿದ್ದಾರೆ ಎನ್ನಲಾಗಿದೆ.

ಲಹರಿ ಸಂಸ್ಥೆಯ ಮನೋಹರ್‌ ನಾಯ್ಡು ಹಾಗೂ ವೀನಸ್‌ ಮೂವಿಸ್‌ ಕೆ ಪಿ ಶ್ರೀಕಾಂತ್‌ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಉಪೇಂದ್ರ ನಟನೆಯ ಯುಐ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇನ್ನು ಚಿತ್ರಿಕರಣ ನಿಂತು ಹೋಗಿದ್ದ ವಿನಯ್‌ ರಾಜಕುಮಾರ್‌ ಸಿನಿಮಾ ಗ್ರಾಮಾಯಣಕ್ಕೆ ಮರುಜೀವ ಕೊಟ್ಟಿದ್ದಾರೆ. ಇತ್ತೀಚೆಗೆ ಈ ಸಿನಿಮಾ ಮುಹೂರ್ತ ನಡೆದಿದೆ.

ಸಿನಿಮಾಟೋಗ್ರಾಫರ್‌ ಆಗಿ ಅಮಿತ್‌ ಎಂಬ ಹೊಸ ಯುವಕ ಆಯ್ಕೆಯಾಗಿದ್ದಾರೆ. ಸಂಗೀತ ನಿರ್ದೇಶನದ ಜವಾಬ್ದಾರಿ ವಾಸುಕಿ ವೈಭವ್‌ರದ್ದು. ಮೂರು ಪ್ರಮುಖ ಪಾತ್ರಗಳನ್ನು ಬಿಟ್ಟರೆ ಈ ಸಿನಿಮಾದಲ್ಲಿ ಬರುವ ಹಲವು ಪಾತ್ರಗಳಲ್ಲಿ ಹೊಸಬರೇ ಇರುತ್ತಾರೆ ಎಂಬುದು ನಿರ್ದೇಶಕ, ನಟ ಸಂಚಿತ್‌ ಹೇಳಿಕೊಂಡಿದ್ದಾರೆ.

Exit mobile version