Site icon Vistara News

Vikrant Rona | ರಕ್ಕಮ್ಮ ಹಾಡಿಗೆ ಕುಣಿದು ಕುಪ್ಪಳಿಸಿದ ಕಿಚ್ಚನ ಅಭಿಮಾನಿಗಳು, ಎಲ್ಲೆಡೆ ಅಬ್ಬರಿಸುತ್ತಿದೆ ರೋಣ

Vikrant Rona

ಬೆಂಗಳೂರು: ವಿಶ್ವಾದ್ಯಂತ ರೋಣನ (Vikrant Rona) ಅಬ್ಬರ ಜೋರಾಗಿದೆ. ರಾಜ್ಯದಲ್ಲಿ ಕಿಚ್ಚನ ಅಭಿಮಾನಿಗಳು ಚಿತ್ರಮಂದಿರಗಳ ಮುಂದೆ ಕುಣಿದು ಕುಪ್ಪಳಿಸಿಸುತ್ತಿದ್ದಾರೆ. ರಕ್ಕಮ್ಮನ್ನ ಹಾಡಿಗೆ ಹುಚ್ಚೆದ್ದು ಅಭಿಮಾನಿಗಳು ಕುಣಿದು ಕಿಚ್ಚನ ಭಾವಚಿತ್ರ ಧ್ವಜ ಹಿಡಿದು ಹೆಜ್ಜೆ ಹಾಕುತ್ತಿದ್ದಾರೆ.

ಶಿವಮೊಗ್ಗದ ಎಚ್.ಪಿ.ಸಿ. ಚಿತ್ರಮಂದಿರದಲ್ಲಿ ಫ್ಯಾನ್ಸ್‌ ಶೋ ಆರಂಭಗೊಂಡಿದ್ದು, ಚಿತ್ರಮಂದಿರದ ಎದುರು ಅಭಿಮಾನಿಗಳು ಜಮಾಯಿಸಿ ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು. ವಿಕ್ರಾಂತ್ ರೋಣ ಸಿನಿಮಾ ಪ್ರದರ್ಶನವಾಗುತ್ತಿದ್ದಂತೆ ಅಭಿಮಾನಿಗಳು ಡ್ಯಾನ್ಸ್‌ ಮಾಡಿದರು.

ದಾವಣಗೆರೆಯಲ್ಲಿ ಮಳೆಯ ನಡುವೆಯೂ ಚಿತ್ರಮಂದಿರದ ಬಳಿ ಕಿಚ್ಚನ ಅಬಿಮಾನಿಗಳು ರೋಣನ ಸಂಭ್ರಮಾಚರಣೆ ಮಾಡಿದ್ದಾರೆ.

ಇದನ್ನೂ ಓದಿ | ಜಗದಗಲ ಹವಾ ಹಬ್ಬಿಸಿರುವ ವಿಕ್ರಾಂತ್‌ ರೋಣ ಹೇಗಿದೆ? ರಿವ್ಯೂವರ್‌ ರಿಮಾರ್ಕ್

ಕಲಬುರಗಿಯಲ್ಲಿ ಮೊದಲ ಶೋ ನೋಡಲು ಟಿಕೆಟ್‌ಗಾಗಿ ಅಭಿಮಾನಿಗಳು ಮುಗಿ ಬಿದ್ದಿದ್ದರು. ಕಲಬುರಗಿಯ ಸಂಗಮ್ ಥಿಯೇಟರ್ ಬಳಿ ಟಿಕೆಟ್‌ ಪಡೆಯಲು ಕಿಚ್ಚನ ಅಭಿಮಾನಿಗಳು ಹರಸಾಹಸ ಪಟ್ಟರು.

ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಟ್ವೀಟ್

ವಿಕ್ರಾಂತ್‌ ರೋಣ ಕುರಿತು ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಟ್ವೀಟ್‌ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ʻʻವಿಕ್ರಾಂತ್ ರೋಣ ಸಿನಿಮಾ ತೆರೆ ಮೇಲೆ ನೋಡಲು ಕಾತುರನಾಗಿದ್ದೇನೆ. ದೊಡ್ಡ ಪರದೆ ಮೇಲೆ ಕಿಚ್ಚ ಸುದೀಪ್‌ ಅವರನ್ನು ನೋಡಲು ಸಂತೋಷವಾಗುತ್ತದೆ.ʼʼ ಎಂದು ವಿಕ್ರಾಂತ್ ರೋಣ ಚಿತ್ರತಂಡಕ್ಕೆ ಸ್ಯಾಂಡಲ್‌ವುಡ್‌ ಪದ್ಮಾವತಿ ರಮ್ಯಾ ಶುಭಾಶಯ ಹೇಳಿದ್ದಾರೆ.

ಕಿಚ್ಚ ಸುದೀಪ್ ನಟಿಸಿರುವ ಈ ಪ್ಯಾನ್ ವರ್ಲ್ಡ್ ಸಿನಿಮಾವನ್ನು ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದು, ಜಾಕ್ ಮಂಜು ನಿರ್ಮಾಣ ಮಾಡಿದ್ದಾರೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗು ಇಂಗ್ಲೀಷ್ ಭಾಷೆಗೆ ಕಿಚ್ಚ ಸುದೀಪ್ ಅವರೇ ವಾಯ್ಸ್ ಡಬ್ ಮಾಡಿರುವುದು ಮತ್ತೊಂದು ವಿಶೇಷ.

ಇದನ್ನೂ ಓದಿ | Vikrant Rona | ರೋಣನ ರುದ್ರ ನರ್ತನ ಶುರು, ಕಿಚ್ಚನ ಕಟೌಟ್‌ಗೆ ಹಾಲಿನ ಅಭಿಷೇಕ

Exit mobile version