ಬೆಂಗಳೂರು: ಹಾಲಿವುಡ್ ನಟಿ ಕಿಮ್ ಕಾರ್ದಿಶಿಯಾನ್ (Kim Kardashian) ಜತೆ ಹೋಲಿಕೆ ಮಾಡುತ್ತಿದ್ದ ಮಾಡೆಲ್ ಕ್ರಿಸ್ಟೀನಾ ಆಸ್ಟೆನ್ (Christina Ashten )ತಮ್ಮ 34ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಈ ಸಾವಿಗೆ ಪ್ಲಾಸ್ಟಿಕ್ ಸರ್ಜರಿಯೇ ಕಾರಣ ಎಂದು ವರದಿಯಾಗಿದೆ. ಪ್ಲಾಸ್ಟಿಕ್ ಸರ್ಜರಿ ಕಾರ್ಯವಿಧಾನದ ನಂತರ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ.
ಮಾಡೆಲ್ ಕ್ರಿಸ್ಟೀನಾ ಆಸ್ಟೆನ್ ನಿಧನದ ಬಗ್ಗೆ ಅವರ ಕುಟುಂಬದವರು ಏಪ್ರಿಲ್ 26ರಂದು ಸೋಷಿಯಲ್ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಮಾಡೆಲ್ ಕ್ರಿಸ್ಟೀನಾ ಆಸ್ಟೆನ್ ಇನ್‌ಸ್ಟಾದಲ್ಲಿ 6 ಲಕ್ಷಕ್ಕೂ ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಕಿಮ್ ಕಾರ್ದಿಶಿಯಾನ್ ಅವರೊಂದಿಗಿನ ಹೋಲಿಕೆ ವಿಶ್ವಾದ್ಯಂತ ಅಭಿಮಾನಿಗಳ ಗಮನವನ್ನು ಸೆಳೆದಿತ್ತು .ಕ್ರಿಸ್ಟೀನಾ ಥೇಟ್ ಕಿಮ್ ಕಾರ್ದಿಶಿಯಾನ್ ಹಾಗೆಯೇ ಕಾಣಿಸಿಕೊಳ್ಳಬೇಕು ಅನ್ನುವ ಬಯಕೆ ಇತ್ತಂತೆ. ಹಲವರು ಇವರನ್ನು ಜ್ಯೂನಿಯರ್ ಕಿಮ್ ಅಂತಾನೂ ಕರೆಯುತ್ತಿದ್ದರಂತೆ. ಈ ಆಸೆಯೇ ಅವರನ್ನು ಬಲಿ ತಗೆದುಕೊಂಡಿದೆ.
ಮೃತ ಕ್ರಿಸ್ಟೀನಾ ಅಂತ್ಯಕ್ರಿಯೆ ಮಾಡಲು ಸಹ ಹಣವಿಲ್ಲ ಎಂದು ಹೇಳಲಾಗುತ್ತಿದೆ. ಸೋಷಿಯಲ್ ಮೀಡಿಯಾ ಮೂಲಕ ಫಂಡ್ ಸಂಗ್ರಹಿಸಲು ಅವರು ಕುಟುಂಬಸ್ಥರು ಮುಂದಾಗಿದ್ದಾರೆ ಎಂದು ವರದಿ ಆಗಿದೆ.
ಇದನ್ನೂ ಓದಿ: Rishabh Pant | ಗಾಯಾಳು ರಿಷಭ್ ಪಂತ್ ಹಣೆಗೆ ಪ್ಲಾಸ್ಟಿಕ್ ಸರ್ಜರಿ; ಶ್ಯಾಮ್ ಶರ್ಮಾ ಸ್ಪಷ್ಟನೆ
ಕೆನಡಾದ 2 ವರ್ಷದ ನಟ ಸೇಂಟ್ ವಾನ್ ಕೊಲುಚಿ ಕೆಲವು ತಿಂಗಳ ಹಿಂದೆ ಕಾಸ್ಮೆಟಿಕ್ ವಿಧಾನಗಳ ತೊಂದರೆಗಳಿಂದ ಮೃತಪಟ್ಟ ಕೆಲವು ದಿನಗಳ ನಂತರ ಈ ನಟಿಯ ಸುದ್ದಿ ವೈರಲ್ ಆಗಿದೆ. ಸೇಂಟ್ ವಾನ್ ಕೊಲುಚಿ ಬಿಟಿಎಸ್ ಗಾಯಕ ಜಿಮಿನ್ ಅವರಂತೆ ಕಾಣಲು 12 ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದರು.