Site icon Vistara News

Kiran Raj: ಸ್ಕೈ ಡೈವ್‌ ಮೂಲಕ ತಮ್ಮ ನೂತನ ಸಿನಿಮಾ ಟೈಟಲ್‌ ಅನಾವರಣ ಮಾಡಿದ ಕಿರಣ್‌ ರಾಜ್‌

Kiran Raj unveiled his new movie title through Sky Drive

ಬೆಂಗಳೂರು: ಕನ್ನಡತಿ ಧಾರಾವಾಹಿ ಮುಗಿದ ಬಳಿಕ ನಟ ಕಿರಣ್‌ ರಾಜ್‌ (Kiran Raj) ಏನು ಮಾಡುತ್ತಾರೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿತ್ತು. ಇದೀಗ ತಮ್ಮ ಹೊಸ ಸಿನಿಮಾ ಟೈಟಲ್‌ಅನ್ನು ವಿಭಿನ್ನವಾಗಿ ಅವರು ಅನೌನ್ಸ್‌ ಮಾಡಿದ್ದಾರೆ. ನಟ ಕಿರಣ್‌ ರಾಜ್‌ ಅವರು ಗುರುತೇಜ್ ಶೆಟ್ಟಿ ನಿರ್ದೇಶಿಸುತ್ತಿರುವ ನೂತನ ಚಿತ್ರದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. ದುಬೈನಲ್ಲಿ ಹದಿಮೂರು ಸಾವಿರ ಅಡಿ ಮೇಲಿಂದ ಜಿಗಿದು (Sky Dive) ತಮ್ಮ ನೂತನ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದ್ದಾರೆ.

ಸಿನಿಮಾ ಕುರಿತು ನಟ ಮಾತನಾಡಿ ʻʻಸ್ವಲ್ಪ ಭಿನ್ನವಾಗಿರಲಿ ಎಂದು ಯೋಚಿಸಿ, ಸ್ಕೈ ಡೈವ್‌ ಮೂಲಕ ಈ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದೆ. “ರಾನಿ” (RONNY) ಈ ಚಿತ್ರದ ಹೆಸರು. ನನ್ನ ಈ ಸಾಹಸಕ್ಕೆ ಮನೆಯವರಿಂದ, ಸ್ನೇಹಿತರಿಂದ ವಿರೋಧ ವ್ಯಕ್ತವಾಯಿತು. ಆದರು ನಾನು ಅಲ್ಲಿನ ಪರಿಣಿತರಿಂದ ತರಬೇತಿ ಪಡೆದು ಈ ಸಾಹಸಕ್ಕೆ ಮುಂದಾದೆ. ಚಿತ್ರದಲ್ಲೂ ಮೈನವಿರೇಳಿಸುವ ಸಾಹಸ ದೃಶ್ಯಗಳಿರುತ್ತದೆʼʼ ಎಂದಿದ್ದಾರೆ ನಾಯಕ ಕಿರಣ್ ರಾಜ್.

ಇದನ್ನೂ ಓದಿ: Kiran Raj | ಸೆಟ್ ಏರಿತು ಕನ್ನಡದ ʼಶೇರ್ʼ; ಕಿರಣ್‌ ರಾಜ್‌ ಹೇಳಿದ್ದೇನು?

ಸ್ಕೈ ಡೈವ್‌ ಮೂಲಕ ಟೈಟಲ್‌ ಅನಾವರಣ

“ರಾನಿʼ ಎನ್ನುವುದು ಸಿನಿಮಾದ ಶೀರ್ಷಿಕೆಯಾಗಿದ್ದು, ಅಭಿಮಾನಿಗಳು ಕಮೆಂಟ್‌ ಮೂಲಕ ಸಂತಸ ಹೊರಹಾಕುತ್ತಿದ್ದಾರೆ. “ಬಡ್ಡೀಸ್” ನಂತರ ಗುರುತೇಜ ಶೆಟ್ಟಿ ಹಾಗೂ ಕಿರಣ್‌ರಾಜ್‌ ಕಾಂಬಿನೇಶನ್‌ನ ಎರಡನೇ ಸಿನಿಮಾ ಇದಾಗಿದೆ. ಸಾಕಷ್ಟು ರೀಲ್ಸ್‌ ಮತ್ತು ಕೆಲವೊಂದು ಗಾಸಿಪ್‌ ಮೂಲಕ ಮನೆಮಾತಾದ ನಟ ಕಿರಣ್‌ ರಾಜ್‌ ಸ್ಯಾಂಡಲ್‌ವುಡ್‌ನಲ್ಲಿ ಸಕ್ರೀಯರಾಗಿದ್ದಾರೆ.

Exit mobile version