ಬೆಂಗಳೂರು : ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ (Koffee With Karan-7) ರಿಯಾಲಿಟಿ ಶೋನಲ್ಲಿ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಮಕ್ಕಳ ಡೇಟಿಂಗ್ ಕುರಿತು ಸಲಹೆ ನೀಡಿದ್ದಾರೆ. ಈ ಶೋನಲ್ಲಿ 18 ವರ್ಷಗಳ ನಂತರ ಭಾಗವಹಿಸಿರುವ ಗೌರಿ ಖಾನ್ ಹಲವು ವಿಚಾರಗಳ ಬಗ್ಗೆ ಬೋಲ್ಡ್ ಆಗಿ ಮಾತನಾಡಿದ್ದಾರೆ. ಶಾರುಖ್ ಜತೆಗಿನ ದಾಂಪತ್ಯ, ಮಕ್ಕಳಾದ ಸುಹಾನಾ ಮತ್ತು ಅಬ್ರಹಾಂ ಕುರಿತು ಮಾತನಾಡಿದ್ದಾರೆ. ಹಾಗೂ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಬಂಧನಕ್ಕೊಳಗಾದ ವಿಚಾರದ ಬಗ್ಗೆಯೂ ಹಂಚಿಕೊಂಡಿದ್ದಾರೆ.
ರ್‍ಯಾಪಿಡ್ ಫೈರ್ ಪ್ರಶ್ನೆಗಳಿಗೆ ಸಖತ್ ಬೋಲ್ಡ್ ಆಗಿ ಉತ್ತರಿಸಿದ ಗೌರಿ ಖಾನ್, ʻʻಡೇಟಿಂಗ್ ಬಗ್ಗೆ ಆರ್ಯನ್‌ಗೆ ಯಾವ ಸಲಹೆ ನೀಡುತ್ತೀರಿʼʼ ಎಂದು ಕರಣ್ ಕೇಳಿದ್ದಾರೆ. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೌರಿ ಖಾನ್ ʻʻನೀನು ಮದುವೆಯಾಗಲು ನಿರ್ಧಾರ ಮಾಡುವವರೆಗೆ ಎಷ್ಟು ಹುಡುಗಿಯರೊಂದಿಗೆ ಡೇಟಿಂಗ್ ಬೇಕಾದರೂ ಮಾಡು. ಆ ಮೇಲೆ ಅದಕ್ಕೆಲ್ಲ ಫುಲ್‌ಸ್ಟಾಪ್ ಹಾಕುʼʼ ಎನ್ನುವುದಾಗಿ ಹೇಳಿದ್ದಾರೆ. ಅದೇ ರೀತಿ ಸುಹಾನೆಗೆ ʻʻಒಂದೇ ಸಲ ಇಬ್ಬರು ಹುಡುಗರೊಂದಿಗೆ ಡೇಟಿಂಗ್ ಮಾಡಬೇಡʼʼ ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ | Koffee With Karan | ಮಾಜಿ ಪತಿ ಬಗ್ಗೆ ಸಮಂತಾ ವ್ಯಂಗ್ಯ: ಹೊಸ ವ್ಯಕ್ತಿಯಾಗಿದ್ದೇನೆಂದ ನಾಗ ಚೈತನ್ಯ
ಬೇಸರವಿದ್ದಾಗ ಅಬ್ರಹಾಂ ಜತೆ ಸಮಯ ಕಳೆಯುತ್ತೇನೆ ಎಂದು ಗೌರಿ ಖಾನ್ ಹೇಳಿಕೊಂಡಿದ್ದಾರೆ. ಶಾರುಖ್ ಬಗ್ಗೆ ಮಾತನಾಡಿ ಶಾರುಖ್ ಗಮನ ಸೆಳದುಕೊಳ್ಳುವ ವಿಚಾರವಾಗಿ ʻʻಶಾರುಖ್ ನನ್ನೊಂದಿಗೆ ಮಾತನಾಡುವಾಗಲೆಲ್ಲಾ, ನನ್ನತ್ತ ಗಮನ ಇದೆ ಎಂದು ಭಾವಿಸುತ್ತೇನೆ. ಆದರೆ ನನ್ನ ಮೇಲೆ ಗಮನ ಇರುತ್ತದೋ ಇಲ್ಲವೋ ಗೊತ್ತಿಲ್ಲʼʼ ಎಂದು ಪ್ರತಿ ಕ್ರಿಯಿಸಿದ್ದಾರೆ. ಸಂಜಯ್ ಕಪೂರ್ ಪತ್ನಿ ಮಹೀಪ್ ಕಪೂರ್, ನಟಿ ಅನನ್ಯಾ ಪಾಂಡೆ, ನಟಿ ಭಾವನ ಪಾಂಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಆರ್ಯನ್ ಖಾನ್ ಸಿನಿಮಾ ಬಗ್ಗೆ ಈಗಾಗಲೇ ಗಾಸಿಪ್‌ಗಳು ಕೇಳಿ ಬರುತ್ತಿವೆ. ಹೊಸ ವೆಬ್ ಸೀರಿಸ್ ನಿರ್ದೇಶನ ಮಾಡುತ್ತಿದ್ದಾರೆ ಎನ್ನಲಾಗಿದೆ. ಆರ್ಯನ್ ಖಾನ್ ನಟನಾಗಿ ಎಂಟ್ರಿ ಕೊಡುವುದಕ್ಕಿಂತ ನಿರ್ದೇಶಕನಾಗಬೇಕು ಎನ್ನುವುದು ಆಸೆ. ಹಾಗಾಗಿ ನಿರ್ದೇಶಕನಾಗಿ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗಿದೆ. ಪುತ್ರನ ಸಿನಿಮಾಗೆ ಶಾರುಖ್ ಖಾನ್ ಅವರೇ ಬಂಡವಾಳ ಹೂಡುತ್ತಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆಯಾಗಿಲ್ಲ.
ಇದನ್ನೂ ಓದಿ | Rocking Star Yash | ರಾಕಿಂಗ್ ಸ್ಟಾರ್ ಯಶ್ ಬಾಲಿವುಡ್ ನಂ 1 ಸ್ಟಾರ್ ಎಂದ ಶಾಹಿದ್ ಕಪೂರ್!