Site icon Vistara News

Kriti Sanon: ʻಆದಿ ಪುರುಷ್‌ʼ ಟ್ರೈಲರ್‌ ಲಾಂಚ್‌ನಲ್ಲಿ 24 ಕ್ಯಾರೆಟ್​ ಗೋಲ್ಡ್‌ನ ಸೀರೆ ಧರಿಸಿ ಬಂದ ಕೃತಿ ಸನೂನ್‌

Kriti Sanon's 24-Carat Gold Printed Saree At Adipurush Trailer Launch

ಪ್ರಭಾಸ್‌-ಕೃತಿ ಸನೂನ್‌ (Kriti Sanon) ಅಭಿನಯದ ʻಆದಿಪುರುಷʼ ಟ್ರೈಲರ್‌ ಮೇ 9ರಂದು ಮುಂಬೈನಲ್ಲಿ ಬಿಡುಗಡೆ ಮಾಡಲಾಗಿದೆ. ಇವೆಂಟ್‌ನಲ್ಲಿ ಚಿತ್ರತಂಡ ಭಾಗವಹಿಸಿತ್ತು.

ಈ ಸಮಾರಂಭಕ್ಕೆ ಸೀರೆ ಧರಿಸಿ ಬಂದಿದ್ದ ಕೃತಿ ಸನೂನ್‌​ ಅವರು ಎಲ್ಲರ ಗಮನ ಸೆಳೆದರು. ಕೃತಿ ಸನೂನ್‌​ ಅವರು ಧರಿಸಿದ ಸೀರೆ ತುಂಬ ವಿಶೇಷವಾಗಿದೆ. ಈ ಸೀರೆಯ ಬಾರ್ಡರ್​ನಲ್ಲಿ 24 ಕ್ಯಾರೆಟ್​ ಗೋಲ್ಡ್​ ಇದೆ.

ಕೃತಿ ಸನೂನ್‌ ಡಬಲ್-ಡ್ರೇಪ್ ಸೀರೆಯಲ್ಲಿ 24-ಕ್ಯಾರೆಟ್ ಗೋಲ್ಡ್ ಜತೆ ಕೇರಳದ ಕಾಟನ್ ಸೀರೆಯ ಪ್ರಕಾರವಾಗಿದೆ.

ಬಟ್ಟೆಗಳ ವಿಚಾರದಲ್ಲಿ ಕೃತಿ ಸನೂನ್‌​ ಅವರು ಆಗಾಗ ಪ್ರಯೋಗ ಮಾಡುತ್ತಾರೆ. ‘ಆದಿಪುರುಷ್​’ ಸಿನಿಮಾದಲ್ಲಿ ಅವರು ಸೀತೆಯ ಪಾತ್ರ ಮಾಡಿದ್ದಾರೆ.

ಚಿತ್ರದ ಪ್ರಚಾರ ಕಾರ್ಯಗಳಿಗೆ ಸೀರೆ ಧರಿಸಿ ಬರುತ್ತಿದ್ದಾರೆ ಕೃತಿ ಸನೂನ್‌. ಆದಿ ಪುರುಷ್‌ ಸಿನಿಮಾ ಇದೇ ಜೂನ್‌ 16ರಂದು ತೆರೆ ಕಾಣುತ್ತಿದೆ.

Exit mobile version