Site icon Vistara News

Kriti Sanon | ನಟ ಫ್ರಭಾಸ್‌-ಕೃತಿ ಸೇನನ್‌ ಡೇಟಿಂಗ್‌: ವದಂತಿಗಳಿಗೆ ಫುಲ್‌ ಸ್ಟಾಪ್‌ ಇಟ್ಟ ನಟಿ, ಪೋಸ್ಟ್‌ ವೈರಲ್‌!

Kriti Sanon (post about rumours prabhas dating)

ಬೆಂಗಳೂರು : ಟಾಲಿವುಡ್‌ ನಟ ಪ್ರಭಾಸ್‌ ಹಾಗೂ ಬಾಲಿವುಡ್‌ ನಟಿ ಕೃತಿ ಸೇನನ್‌ (Kriti Sanon) ಪ್ರೀತಿಯ ಬಗ್ಗೆ ದೊಡ್ಡ ಸುದ್ದಿಯಾಗಿತ್ತು. ಬಾಲಿವುಡ್‌ನ ಸ್ಟಾರ್ ನಟ ವರುಣ್ ಧವನ್ ಕೆಲವು ದಿನಗಳ ಹಿಂದಷ್ಟೇ ಚಿಕ್ಕದೊಂದು ಹಿಂಟ್ ಕೊಟ್ಟಿದ್ದರು. ಪ್ರಭಾಸ್ ಹೃದಯದಲ್ಲಿ ಒಬ್ಬರು ಡಾರ್ಲಿಂಗ್ ಇದ್ದಾರೆಂದು ಹೇಳಿಕೆ ನೀಡಿದ್ದರು. ಇದೀಗ ನಟಿ ಈ ಗಾಸಿಪ್‌ಗಳಿಗೆ ಬ್ರೇಕ್‌ ಹಾಕಿದ್ದಾರೆ. ಇನ್‌ಸ್ಟಾ ಪೋಸ್ಟ್‌ ಮೂಲಕ ಈ ಸುದ್ದಿಗಳ ವದಂತಿಗಳಿಗೆ ಫುಲ್‌ ಸ್ಟಾಪ್‌ ಇಟ್ಟಿದ್ದಾರೆ.

ʻʻನಟ ಪ್ರಭಾಸ್‌ ಮತ್ತು ನಟಿ ಕೃತಿ ಸೇನನ್‌ ಪ್ರೀತಿಯಲ್ಲಿ ಇದ್ದಾರೆ. ಪ್ರಭಾಸ್‌ ಅವರು ಆದಿಪುರುಷ್‌ ಶೂಟಿಂಗ್‌ ವೇಳೆ ನಟಿ ಕೃತಿ ಅವರಿಗೆ ಪ್ರಪೋಸ್‌ ಮಾಡಿದ್ದಾರೆ. ಇದು ಅಧಿಕೃತʼʼ ಎಂದು ಓವರ್‌ಸೀಸನ್‌ ಸೆನ್ಸಾರ್‌ ಬೋರ್ಡ್‌ನ ಅಧ್ಯಕ್ಷ ಉಮೈರ್‌ ಸಂಧು ಟ್ವೀಟ್‌ ಮಾಡಿದ್ದರು. ಇದರ ಬೆನ್ನಲ್ಲೇ ನಟ ವರುಣ್ ಧವನ್ ಕೆಲವು ದಿನಗಳ ಹಿಂದಷ್ಟೇ ಚಿಕ್ಕದೊಂದು ಹಿಂಟ್ ಕೊಟ್ಟಿದ್ದರು. ಈ ಕುರಿತು ನಟಿ ಇದೀಗ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ | Actor Varun Dhawan | ತಂದೆ ಆಗ್ತಾ ಇದ್ದಾರಾ ನಟ ವರುಣ್‌ ಧವನ್‌: ಸಲ್ಮಾನ್‌ ಖಾನ್‌ ಕೊಟ್ಟ ಸುಳಿವೇನು?

ಕೃತಿ ಸೇನನ್‌ ಪೋಸ್ಟ್‌ ಹಂಚಿಕೊಂಡಿದ್ದು ʻʻಇತ್ತೀಚೆಗೆ ರಿಯಾಲಿಟಿ ಶೋನಲ್ಲಿ ವರುಣ್ ಧವನ್ (Varun Dhawan) ಸ್ವಲ್ಪ ವೈಲ್ಡ್ ಆಗಿ ನಡೆದುಕೊಂಡರು ಅಷ್ಟೇ. ತಮಾಷೆಗೆ ಆಡಿದ ಮಾತಿನಿಂದ ಸಾಕಷ್ಟು ವದಂತಿಗಳು ಹುಟ್ಟಿಕೊಂಡಿವೆ. ಈ ರೂಮರ್ಸ್‌ ಖಂಡಿವಾಗಿಯೂ ಬೆಸ್‌ಲೆಸ್‌ʼʼಎಂದು ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ನಟ ವರುಣ್ ಅವರು ಭಾಗವಹಿಸಿದ್ದರು. ಆ ಕಾರ್ಯಕ್ರಮದಲ್ಲಿ ಕೃತಿ ಸೇನನ್‌ ಕೂಡ ಇದ್ದರು. ಕರಣ್ ಜೋಹರ್ ಕೇಳಿದ ಒಂದು ಪ್ರಶ್ನೆಗೆ ಉತ್ತರಿಸುವಾಗ ವರುಣ್ ಧವನ್ ಅವರು ಕೃತಿ ಹೆಸರನ್ನು ಹೇಳಿದ್ದರು.

ಇದನ್ನೂ ಓದಿ | Prabhas Birthday | ನಟ ಪ್ರಭಾಸ್​ ಅಭಿಮಾನಿಗಳ ಅವಾಂತರ; ಥಿಯೇಟರ್​ನಲ್ಲಿ ಹೊತ್ತಿ ಉರಿದ ಬೆಂಕಿ, ಸೀಟ್​ಗಳೆಲ್ಲ ಭಸ್ಮ

Exit mobile version