Site icon Vistara News

Kriti Sanon: ಮಗುವಿನ ಜತೆ ಮಗುವಾದ ಕೃತಿ ಸನೂನ್‌: ವಿಡಿಯೊ ವೈರಲ್‌!

Kriti Sanon plays with a baby on flight

ಬೆಂಗಳೂರು: ಕೃತಿ ಸನೂನ್‌ (Kriti Sanon) ಸದ್ಯ ಇಂದೋರ್‌ನಲ್ಲಿದ್ದಾರೆ. ಎಕಾನಮಿ ಕ್ಲಾಸ್‌ನಲ್ಲಿ ಇಂದೋರ್‌ಗೆ ಪ್ರಯಾಣ ಬೆಳೆಸುತ್ತಿರುವಾಗ ವಿಮಾನದಲ್ಲಿ ಮಗುವಿನೊಂದಿಗೆ ಆಟವಾಡುತ್ತಿರುವ ವಿಡಿಯೊ ವೈರಲ್‌ ಆಗಿದೆ. ಕೃತಿ ಬಿಳಿ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನೊಂದು ವಿಡಿಯೊದಲ್ಲಿ ನಟಿ ಕಿಟಕಿಯ ಪಕ್ಕ ಸೀಟಿನಲ್ಲಿ ಕುಳಿತುಕೊಂಡಿದ್ದು, ತಮ್ಮ ಮುಂದೆ ಇರುವ ಮಗುವಿನ ಜತೆ ಆಟವಾಡಿದ್ದಾರೆ. ಮಗು ಕೂಡ ಕೈ ಚಾಚಿ ಕೃತಿ ಜತೆ ಆಟವಾಡಿದೆ. ನಂತರ ನಟಿ ಮಗುವಿಗೆ ಫ್ಲೈ ಕಿಸ್‌ ನೀಡಿದ್ದಾರೆ. ಈ ಬಗ್ಗೆ ನೆಟ್ಟಿಗರು ಸಂತಸ ಹೊರಹಾಕಿದ್ದಾರೆ. ಒಬ್ಬರು ʻʻಕೃತಿ ಮಗುವಿನ ಜತೆ ಇದ್ದಾಗ ಅವರೂ ಮಗುವಾಗುತ್ತಾರೆʼʼ ಎಂದು ಕಾಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು ʻʻಒಂದು ರೀತಿಯ ದೇವತೆಯೇ ಸರಿʼʼ, ಎಂದು ಕಾಮೆಂಟ್‌ ಮಾಡಿದ್ದಾರೆ.

ಕೃತಿ ಸನೂನ್‌ ಅವರು ಶಾಹಿದ್ ಕಪೂರ್ ಜತೆ ಹೆಸರಿಡದ ರೊಮ್ಯಾಂಟಿಕ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜಿಯೋ ಸ್ಟುಡಿಯೋಸ್ ಮತ್ತು ದಿನೇಶ್ ವಿಜನ್ ಪ್ರಸ್ತುತ ಪಡಿಸುತ್ತಿದ್ದಾರೆ. ಅಮಿತ್ ಜೋಶಿ ಮತ್ತು ಆರಾಧನಾ ಸಾಹ್ ಬರೆದು ನಿರ್ದೇಶಿಸಿದ್ದಾರೆ. ಫಸ್ಟ್ ಲುಕ್ ಪೋಸ್ಟರ್‌ನಲ್ಲಿ, ಕೃತಿ ಮತ್ತು ಶಾಹಿದ್ ಇಬ್ಬರೂ ಸೂರ್ಯಾಸ್ತದ ನಡುವೆ ರೊಮ್ಯಾಂಟಿಕ್‌ ಆಗಿ ಬೈಕ್ ಮೇಲೆ ಕುಳಿತಿದ್ದಾರೆ. ಈ ಪೋಸ್ಟ್‌ಗೆ ಕೆಲವರು ಮೆಚ್ಚುಗೆ ಸೂಚಿಸಿದರೆ ಇನ್ನೂ ಕೆಲವರು ಶಾಹಿದ್ ಕಪೂರ್ ವಿಲನ್‌ ಅಂತೆ ಕಾಣುತ್ತಿದ್ದಾರೆ ಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು ನಟಿಯ ಬಾಡಿ ಶೇಮಿಂಗ್‌ ಮಾಡಿದ್ದಾರೆ.

ಕೃತಿ ಅವರು ಅಮಿತಾಭ್ ಬಚ್ಚನ್ ಮತ್ತು ಟೈಗರ್ ಶ್ರಾಫ್ ಅವರೊಂದಿಗೆ ಗಣಪತ್ ಸಿನಿಮಾದಲ್ಲಿ ನಟಿಸಿದ್ದಾರೆ. ಅಕ್ಟೋಬರ್ 20ರಂದು ಸಿನಿಮಾ ಬಿಡುಗಡೆಯಾಗಲಿದ್ದು, ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: Kartik Aaryan: ಕಾರ್ತಿಕ್ ಆರ್ಯನ್ ಅಭಿನಯದ ʻಶಹಜಾದಾʼ ಸಿನಿಮಾ ಮೂರನೇ ದಿನದ ಕಲೆಕ್ಷನ್‌ ಎಷ್ಟು?

ಕೃತಿ ಸನೂನ್‌ ವೈರಲ್‌ ವಿಡಿಯೊ

ಕೃತಿ ಅವರು ಪ್ರಭಾಸ್, ಸೈಫ್ ಅಲಿ ಖಾನ್, ಸನ್ನಿ ಸಿಂಗ್ ಮತ್ತು ದೇವದತ್ತ ನಾಗೆ ಜತೆಗೆ ಆದಿಪುರುಷ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಓಂ ರಾವುತ್ ನಿರ್ದೇಶನದ ಆದಿಪುರುಷ ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Exit mobile version