Site icon Vistara News

Kriti sanon: ವರುಣ್ ಧವನ್ ಮಾತಿಗೆ ಬೇಸರಗೊಂಡ ಕೃತಿ ಸನೂನ್: ಡೇಟಿಂಗ್‌ ವದಂತಿಗಳಿಗೆ ಪ್ರಭಾಸ್‌ ಹೇಳಿದ್ದೇನು?

Kriti Sanon reveals Prabhas' reaction

ಬೆಂಗಳೂರು: ಕೃತಿ ಸನೂನ್ (Kriti sanon) ಹಾಗೂ ನಟ ಪ್ರಭಾಸ್ ‘ಆದಿಪುರುಷ್​’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಈ ಜೋಡಿ ಅನೇಕ ಬಾರಿ ಒಟ್ಟಾಗಿ ಕಾಣಿಸಿಕೊಂಡಿದ್ದಿದೆ. ಕಳೆದ ವರ್ಷ ರಿಯಾಲಿಟಿ ಶೋ ಒಂದರಲ್ಲಿ ವರುಣ್ ಧವನ್ ಚಿಕ್ಕದೊಂದು ಹಿಂಟ್ ಕೊಟ್ಟಿದ್ದರು. ಪ್ರಭಾಸ್ ಹೃದಯದಲ್ಲಿ ಒಬ್ಬರು ಡಾರ್ಲಿಂಗ್ ಇದ್ದಾರೆಂದು ಹೇಳಿಕೆ ನೀಡಿದ್ದರು. ಕೃತಿ ಸನೂನ್‌ ತಮ್ಮ ಡೇಟಿಂಗ್ ವದಂತಿಗಳಿಗೆ ಪ್ರಭಾಸ್ ಪ್ರತಿಕ್ರಿಯೆಯನ್ನು ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಕೃತಿ, ‘ವರುಣ್ ಧವನ್ ಅದನ್ನು ಹೇಳಿದಾಗ ನನಗೆ ತುಂಬಾನೇ ಬೇಸರ ಆಯಿತು ಎಂದು ಹೇಳಿಕೊಂಡಿದ್ದಾರೆ.

ನಟಿ ಈ ಬಗ್ಗೆ ಮಾತನಾಡಿ ʻʻವರುಣ್ ಹಾಗೆ ಹೇಳಿದಾಗ, ನನಗೆ ತುಂಬಾ ಬೇಸರವಾಯಿತು-ನಾನು ಪ್ರಭಾಸ್‌ಗೆ ಹೇಳಬೇಕೆಂದು ಇದ್ದೆ. ನಾನು ಪ್ರಭಾಸ್​ಗೆ ಕಾಲ್ ಮಾಡಿ ವರುಣ್ ಧವನ್ ಈ ರೀತಿ ಹೇಳಿದ್ದಾರೆ ಎಂಬುದನ್ನು ಹೇಳಿದೆ.  ‘ಆದರೆ ಯಾಕೆ?’ ಎಂದು ಪ್ರಶ್ನೆ ಮಾಡಿದರು. ನನಗೆ ಗೊತ್ತಿಲ್ಲ ಎಂದು ಉತ್ತರ ಕೊಟ್ಟೆ. ವರುಣ್​ಗೆ ಹುಚ್ಚು ಹಿಡಿದಿದೆ ಎಂದು ನಾನು ಪ್ರಭಾಸ್ ಬಳಿ ಹೇಳಿದ್ದೆ’ ಎಂಬುದಾಗಿ ಕೃತಿ ಸನೂನ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Prabhas Anushka : ಹಿರಿಯ ನಟನ ಜತೆ ಪ್ರೀತಿಯಲ್ಲಿ ಬಿದ್ದ ಅನುಷ್ಕಾ! ಬೇಸರವಾಗಿ ಬ್ರೇಕಪ್‌ ಎಂದ ಪ್ರಭಾಸ್‌?

ಗಾಸಿಪ್‌ಗಳು ವೈರಲ್‌ ಆಗುತ್ತಿದ್ದಂತೆ ನಟಿ ಇನ್‌ಸ್ಟಾ ಪೋಸ್ಟ್‌ನಲ್ಲಿ ಕೆಲವು ದಿನಗಳ ಹಿಂದೆ ಈ ಬಗ್ಗೆ ಮಾತನಾಡಿಕೊಂಡಿದ್ದರು. ʻʻಇತ್ತೀಚೆಗೆ ರಿಯಾಲಿಟಿ ಶೋನಲ್ಲಿ ವರುಣ್ ಧವನ್ (Varun Dhawan) ಸ್ವಲ್ಪ ವೈಲ್ಡ್ ಆಗಿ ನಡೆದುಕೊಂಡರು ಅಷ್ಟೇ. ತಮಾಷೆಗೆ ಆಡಿದ ಮಾತಿನಿಂದ ಸಾಕಷ್ಟು ವದಂತಿಗಳು ಹುಟ್ಟಿಕೊಂಡಿವೆ. ಈ ರೂಮರ್ಸ್‌ ಖಂಡಿವಾಗಿಯೂ ಬೆಸ್‌ಲೆಸ್‌ʼʼಎಂದು ಬರೆದುಕೊಂಡಿದ್ದರು.

Exit mobile version