ಬೆಂಗಳೂರು: ನ್ಯಾಷನಲ್ ಕ್ರಶ್ ಎಂದೇ ಬಣ್ಣಿಸಲಾಗುವ ರಶ್ಮಿಕಾ ಮಂದಣ್ಣ (Rashmika Mandanna) ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಸ್ವಯಂ ಘೋಷಿತ ವಿಮರ್ಶಕ ಕಮಾಲ್ ಆರ್ ಖಾನ್ ಕೂಡ ಆಗಾಗ ವಿವಾದದ ಕಿಡಿ ಹೊತ್ತಿಸುತ್ತಿರುತ್ತಾರೆ. ಇದೀಗ ಕಮಾಲ್ ಖಾನ್ ಅವರು ರಶ್ಮಿಕಾ ಕುರಿತು ಮಾಡಿರುವ ಟ್ವೀಟ್ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ.
ಕಮಾಲ್ ಆರ್ ಖಾನ್ ಟ್ವೀಟ್‌ನಲ್ಲಿ ʻʻರಶ್ಮಿಕಾ ಅವರನ್ನು ನೋಡಿದರೆ ಅವರು ದಕ್ಷಿಣ ಭಾರತದ ಚಿತ್ರಗಳು ಮತ್ತು ಭೋಜ್‌ಪುರಿ ಚಿತ್ರಗಳಿಗೆ ಸೂಕ್ತ ಹೊರತು ಹಿಂದಿ ಸಿನಿಮಾಗಳಿಗೆ ಅಲ್ಲ ಅನಿಸುತ್ತದೆ. ಈಗಾಗಲೇ ಐಶ್ವರ್ಯಾ, ಮಾಧುರಿ ಮತ್ತು ಕರೀನಾ ಅವರಂತಹ ನಟಿಯರನ್ನು ನೋಡಿರುವ ಹಿಂದಿ ಪ್ರೇಕ್ಷಕರು ರಶ್ಮಿಕಾರನ್ನು ನಾಯಕಿಯಾಗಿ ಸ್ವೀಕರಿಸಲು ಸಾಧ್ಯವಿಲ್ಲʼʼಎಂದಿದ್ದಾರೆ.
ಇದನ್ನೂ ಓದಿ | Rashmika Mandanna | ವಿಶೇಷ ಫೋಟೊಶೂಟ್ ಮೂಲಕ ಗಮನ ಸೆಳೆದ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಮಿತಾಭ್ ಬಚ್ಚನ್ ಜತೆ ‘ಗುಡ್‌ಬೈ’ ಸಿನಿಮಾದಲ್ಲಿ ನಟಿಸಿದ್ದಾರೆ. ಆದರೆ, ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿಲ್ಲ. ‘ಮಿಷನ್ ಮಜ್ನು’ ರಿಲೀಸ್ ಆಗಬೇಕಿದೆ. ಇನ್ನೊಂದು ಚಿತ್ರ ಶೂಟಿಂಗ್ ಹಂತದಲ್ಲಿದೆ. ಇದೀಗ ಕೆಆರ್‌ಕೆ ಟ್ವೀಟ್ ಬಗ್ಗೆ ಚರ್ಚೆಗಳು ಆಗುತ್ತಿದ್ದು, ಕೆಲವರು ಈ ಬಗ್ಗೆ ಸಾಥ್ ನೀಡಿದರೆ, ಇನ್ನೂ ಕೆಲವರು ಗರಂ ಆಗಿದ್ದಾರೆ.
ಸಿನಿಮಾ ಪ್ರೇಮಿಯೊಬ್ಬರು ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿ ʻʻರಶ್ಮಿಕಾ ಹೇಗೆ ಕಾಣಿಸುತ್ತಾರೆ ಎಂಬುದು ಬೇಕಾಗಿಲ್ಲ. ಆದರೆ ರಿಷಬ್ ಶೆಟ್ಟಿ, ಅವರ ವೃತ್ತಿಗೆ ಕಾರಣವಾದ ನಿರ್ಮಾಣ ಸಂಸ್ಥೆ ಬಗ್ಗೆ ನೆಗೆಟಿವ್ ರೀತಿಯಲ್ಲಿ ನಡೆದುಕೊಂಡಿದ್ದಷ್ಟೇ ಬೇಸರದ ಸಂಗತಿʼʼ ಎಂದು ಹೇಳಿಕೊಂಡಿದ್ದಾರೆ. “ನಿಮ್ಮ ಮಾತನ್ನು ಒಪ್ಪುತ್ತೇನೆ. ಅವರು ಹಿಂದಿ ಸಿನಿಮಾಗೆ ಒಪ್ಪಿಗೆ ಆಗುವುದಿಲ್ಲ. ಆದರೆ ಬಾಲಿವುಡ್ ಮಂದಿ ಈ ನಟಿಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಎನಿಸುತ್ತದೆ” ಎಂದು ಮತ್ತೊಬ್ಬ ನೆಟ್ಟಿಗ ಕಮೆಂಟ್ ಮಾಡಿದ್ದಾರೆ.
ಕೆಆರ್‌ಕೆ ಈಗಾಗಲೇ ಹಲವಾರು ಬಾಲಿವುಡ್ ತಾರೆಯರ ಕುರಿತು ಖಾರವಾಗಿ ಟ್ವೀಟ್ ಮಾಡಿದ್ದು, ಹಿಂದೆ ಶಾರುಖ್ ಖಾನ್ ಅವರನ್ನು ಟಿಕ್‌ಟಾಕ್ ಸ್ಟಾರ್ ಎಂದು ಬರೆದುಕೊಂಡಿದ್ದಾರೆ. ಇದೀಗ ರಣವೀರ್ ಸಿಂಗ್ ಕುರಿತಾಗಿಯೂ ನೆಗೆಟಿವ್ ಟ್ವೀಟ್ ಹಂಚಿಕೊಂಡಿದ್ದು, ಅವರ ʻಸರ್ಕಸ್ʼ ಸಿನಿಮಾ ಈಗಾಗಲೇ ಸೋತಿದೆ, ಅವರ ಮುಂಬುರುವ ಸಿನಿಮಾಗಳಿಗೂ ಇದೇ ಗತಿ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ | Rashmika Mandanna | ಸಹ ನಟರೊಂದಿಗೆ ಆತ್ಮೀಯತೆಯಿಂದಿರಲು ಬಯಸುತ್ತೇನೆ ಎಂದ ರಶ್ಮಿಕಾ ಮಂದಣ್ಣ