ಬೆಂಗಳೂರು: ಶೂಟಿಂಗ್ ಸೆಟ್‌ನಲ್ಲಿ ಅಶಿಸ್ತು ತೋರಿದ ಕಾರಣ ಶ್ರೀನಾಥ್ ಬಾಸಿ ( Sreenath Bhasi) ಹಾಗೂ ಶೇನ್ ನಿಗಮ್ (Shane Nigam )ನಟರನ್ನು ಕೇರಳ ಸಿನಿಮಾ ರಂಗದಿಂದ ಬ್ಯಾನ್ ನೀಡಲಾಗಿದೆ ಎಂದು ವರದಿಯಾಗಿದೆ. ಫಿಲ್ಮ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಕೇರಳ( Film Employees Federation of Kerala (FEFKA) ಮತ್ತು ಕೇರಳ ಫಿಲ್ಮ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ ( Association of Malayalam Movie Artists,) ಜಂಟಿಯಾಗಿ ಈ ನಿರ್ಧಾರ ತೆಗೆದುಕೊಂಡಿದೆ. ನಿರ್ಮಾಪಕರ ಸಂಘ ಮತ್ತು ಮಲಯಾಳಂ ಚಲನಚಿತ್ರ ಕಲಾವಿದರ ಸಂಘ ನಡುವೆ ಏಪ್ರಿಲ್ 25 ರಂದು ಈ ಬಗ್ಗೆ ಕೊಚ್ಚಿಯಲ್ಲಿ ಸಭೆ ನಡೆದಿದೆ. ಜನಪ್ರಿಯ ಮಲಯಾಳಂ ಸಿನಿಮಾ ʻಕುಂಬಳಂಗಿ ನೈಟ್ಸ್ʼ ( Kumbalangi Nights) ಸಿನಿಮಾದಲ್ಲಿ ಶ್ರೀನಾಥ್ ಬಾಸಿ ಹಾಗೂ ಶೇನ್ ನಿಗಮ್ ಒಟ್ಟಿಗೆ ನಟಿಸಿದ್ದರು.
ಅನೇಕ ಹಿಟ್ ಸಿನಿಮಾಗಳಲ್ಲಿ ಇಬ್ಬರು ನಟಿಸಿದ್ದಾರೆ. ಈ ಇಬ್ಬರು ನಟರ ವಿರುದ್ಧ ಸಾಕಷ್ಟು ದೂರುಗಳು ಕೇಳಿಬರುತ್ತಿತ್ತು. ನಿರ್ಮಾಪಕರ ಸಂಘ ಮತ್ತು ಮಲಯಾಳಂ ಚಲನಚಿತ್ರ ಕಲಾವಿದರ ಸಂಘ ಇಂಥದ್ದೊಂದು ನಿರ್ಧಾರ ತಗೆದುಕೊಳ್ಳಲು ಕಾರಣ ಸೆಟ್‌ನಲ್ಲಿ ಈ ಇಬ್ಬರೂ ಕಲಾವಿದರು ಸಾಕಷ್ಟು ಅಶಿಸ್ತು ತೋರಿಸುತ್ತಿದ್ದರಂತೆ. ಶೂಟಿಂಗ್ ಸೆಟ್‌ನಲ್ಲೇ ಮಾದಕ ವ್ಯಸನದ ಗುಂಗಿನಲ್ಲಿ ಇರುತ್ತಿದ್ದರು ಎಂದು ಆರೋಪಿಸಲಾಗಿದೆ. ಇವರಿಬ್ಬರೂ ಇನ್ನು ಮುಂದೆ ಯಾವುದೇ ಸಿನಿಮಾಗೆ ಸಹಿ ಹಾಕಬಾರದು, ಹಾಗೂ ಈ ಇಬ್ಬರು ನಟರು ಇರುವ ಸಿನಿಮಾಕ್ಕೆ ಸಹಕಾರ ನೀಡದೇ ಇರಲು ಈ ಸಂಘಟನೆಗಳು ನಿರ್ಧರಿಸಿವೆ.
ಕೊಚ್ಚಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇರಳ ಸಿನಿಮಾ ನಿರ್ಮಾಪಕರ ಸಂಘದ ಅಧ್ಯಕ್ಷ ಎಂ ರಂಜಿತ್ ಈ ಬಗ್ಗೆ ಮಾತನಾಡಿ ʻʻಶೇನ್ ನಿಗಮ್ ಮತ್ತು ಶ್ರೀನಾಥ್ ಬಾಸಿ ಇಬ್ಬರ ವಿರುದ್ಧ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಇಬ್ಬರೂ ಶೂಟಿಂಗ್ ಸೆಟ್‌ನಲ್ಲಿ ಮಾದಕ ವ್ಯಸನದ ಗುಂಗಿನಲ್ಲಿರುತ್ತಾರೆ. ಈ ಇಬ್ಬರೂ ನಟರಿಂದ ಸಿನಿಮಾ ನಿರ್ಮಾಪಕರು, ತಂತ್ರಜ್ಞರು ಮತ್ತು ಸಹ-ನಟರು ಪದೇ ಪದೇ ತೊಂದರೆಗೊಳಗಾಗಿದ್ದಾರೆ’ ಎಂದು ಆರೋಪಿಸಿದ್ದಾರೆ. ಶೇನ್ ನಿಗಮ್ ಮತ್ತು ಶ್ರೀನಾಥ್ ಬಾಸಿ ಹೀಗೆ ಸಿನಿಮಾಗಳಿಗೆ ತೊಂದರೆ ಕೊಡುತ್ತಿರುವುದು ಇದೇ ಮೊದಲೇನೂ ಅಲ್ಲ ಎಂದಿರುವ ನಿರ್ಮಾಪಕರ ಸಂಘದ ಅಧ್ಯಕ್ಷ ಎಂ. ರಂಜಿತ್, ಕೆಲವು ವಾರಗಳ ಹಿಂದೆಯಷ್ಟೇ ಆರ್.ಡಿ.ಎಕ್ಸ್ (RDX) ಹೆಸರಿನ ಸಿನಿಮಾದಿಂದಲೂ ಈ ನಟರು ಹೊರ ಬಂದಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Actor Mammootty: ಮಾಲಿವುಡ್ ನಟ ಮಮ್ಮುಟ್ಟಿ ತಾಯಿ ಫಾತಿಮಾ ಇಸ್ಮಾಯಿಲ್ ನಿಧನ
ಆರ್.ಡಿ.ಎಕ್ಸ್ ಸಿನಿಮಾದಲ್ಲಿ ಶೇನ್ ನಿಗಮ್ ಜತೆಗೆ ಲಾಲ್ ಮತ್ತು ಅಂಟೋನಿ ವರ್ಗೀಸ್ ಅಂಥಹಾ ದೊಡ್ಡ ನಟರುಗಳು ಸಹ ಇದ್ದರು. ಸಿನಿಮಾದ ಚಿತ್ರೀಕರಣ 90% ಮುಗಿದಿತ್ತು. ಆಗ ಶೇನ್ ನಿಗಮ್ ಸೆಟ್ನಿಂದ ಹೊರಗೆ ಹೋಗಿದ್ದರು’ ಎಂದು ಹೇಳಿಕೆ ನೀಡಿದ್ದಾರೆ.